Maruti: ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಸರ್ವ ಸಿದ್ಧ: ಶೋರೂಂ ತಲುಪುತ್ತಿವೆ...
ಭಾರತದಲ್ಲಿ ಈಗಾಗಲೇ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುಯತ್ತಿವೆ. ಆದರೆ ಮಾರುತಿ ಸುಜುಕಿ ಮಾತ್ರ ತನ್ನ ಬಹುನಿರೀಕ್ಷಿತ ಇ-ವಿಟಾರವನ್ನು ಮಾರಾಟಕ್ಕೆ ತಂದಿಲ್ಲ. ಮಾರುತಿಯ ಈ ಮೊದಲ ಎಲೆಕ್ಟ್ರಿಕ್ ಕಾರನ್ನು ಕಳೆದ ತಿಂಗಳು ಅನಾವರಣಗೊಳಿಸಿತ್ತಾದರೂ, ಬಿಡುಗಡೆ (ಬೆಲೆಗಳನ್ನು ಘೋಷಿಸಿಲ್ಲ) ಮಾಡಿರಲಿಲ್ಲ. ಈಗ ಕೊನೆಗೂ ಹಲವು ವಿಳಂಬಗಳ ನಂತರ ಮಾರುತಿ ಸುಜುಕಿ ಇ-ವಿಟಾರಾ (Maruti Suzuki E Vitara) ಅಂತಿಮವಾಗಿ ಈ ತಿಂಗಳು ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ ಎಂದು ಪ್ರಮುಖ ಆಟೋ ಸುದ್ದಿ ಸಂಸ್ಥೆಯಾಗಿರುವ 'ಕಾರ್‌ವಾಲೆ' ವರದಿ ಮಾಡಿದೆ.
ಮಾರುತಿ ಸುಜುಕಿಯ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಶೀಘ್ರದಲ್ಲೇ ತನ್ನ ಅಧಿಕೃತ ಬೆಲೆಗಳನ್ನು ಪಡೆಯಲಿದೆ, ಶೀಘ್ರದಲ್ಲೇ ಭಾರತದಾದ್ಯಂತ ಟೆಸ್ಟ್ ಡ್ರೈವ್‌ಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಇ-ವಿಟಾರಾವನ್ನು ಬ್ರ್ಯಾಂಡ್‌ನ ಪ್ರೀಮಿಯಂ ಚಾನಲ್ ಆಗಿರುವ ನೆಕ್ಸಾ ಮಾರಾಟ ಜಾಲದ ಮೂಲಕ ಮಾರಾಟ ಮಾಡಲಾಗುವುದು. ಬಿಡುಗಡೆ ದಿನಾಂಕವನ್ನು ಕೆಲವೆ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು.

ಮಾರುತಿ ಸುಜುಕಿ ಇ-ವಿಟಾರಾ ವಿಶೇಷತೆಗಳು
ಹೊಸ ಮಾರುತಿ ಸುಜುಕಿ ಇ-ವಿಟಾರಾ ಎಸ್‌ಯುವಿಯನ್ನು 49kWh ಮತ್ತು 61kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು. ಈ ಕಾರನ ಬ್ಯಾಟರಿಗಳನ್ನು ಒಮ್ಮೆ ಚಾರ್ಜ್ ಮಾಡಿ 543 ಕಿ.ಮೀ ಓಡಿಸಬಹುದು. ಈ ಎಲೆಕ್ಟ್ರಿಕ್ ಎಸ್‌ಯುವಿ ADAS ನೊಂದಿಗೆ ಸಜ್ಜುಗೊಂಡಿದ್ದು, ಈ ತಂತ್ರಜ್ಞಾನವನ್ನು ಒಳಗೊಂಡಿರುವ ಮಾರುತಿ ಸುಜುಕಿಯ ಶ್ರೇಣಿಯಲ್ಲಿ ಎರಡನೇ ಮಾಡಲ್ ಆಗಿದೆ.
ಹೊಸ ಮಾರುತಿ ಸುಜುಕಿ ಇ-ವಿಟಾರಾ ಎಸ್‌ಯುವಿ ಡೆಲ್ಟಾ, ಜೀಟಾ ಮತ್ತು ಆಲ್ಫಾ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ. ಅಂದರೆ ಸಣ್ಣ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಡೆಲ್ಟಾ ವೇರಿಯೆಂಟ್‌ನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಜೀಟಾ ಮತ್ತು ಆಲ್ಫಾ ವೇರಿಯೆಂಟ್‌ಗಳು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತವೆ. ಇವುಗಳ ಬೆಲೆಗಳು ಡೆಲ್ಟಾಗೆ ಹೋಲಿಸಿದರೆ ತುಸು ಹೆಚ್ಚಾಗಿರಲಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ಹೆಚ್ಚು ವಿಶಾಲವಾದ ಕ್ಯಾಬಿನ್, ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟ್‌ಗಳು ಮತ್ತು 10 - ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ. ಹೊಸ ಫ್ರಂಟ್ ಮ್ಯಾಕ್‌ಫರ್ಸನ್ ಸ್ಟ್ರಟ್ ಸಸ್ಪೆನ್ಷನ್ ಜೊತೆಗೆ ಹಿಂಭಾಗದ ಮಲ್ಟಿ-ಲಿಂಕ್ ಸಸ್ಪೆನ್ಷನ್ ಸೆಟಪ್‌ನೊಂದಿಗೆ ಸುಗಮ ಸವಾರಿಯನ್ನು ಒದಗಿಸುತ್ತದೆ.
ಹೊಸ ಮಾರುತಿ ಸುಜುಕಿ ಇ-ವಿಟಾರಾ ನಿರ್ಮಾಣ ಗುಣಮಟ್ಟದಲ್ಲೂ ಅತ್ಯುತ್ತಮವಾಗಿದ್ದು, ಇತ್ತೀಚೆಗೆ ಭಾರತ್ ಎನ್‌ಸಿಎಪಿ ನಡೆಸಿದ ಕ್ರಾಷ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿದೆ. ತನ್ನ ಗಟ್ಟಿಮುಟ್ಟಾದ ನಿರ್ಮಾಣಕ್ಕೆ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಅಲ್ಲದೆ ಕಾರಿನಲ್ಲಿ ಆಧುನಿಕ ಸೇಫ್ಟಿ ಫೀಚರ್ಸ್ ಒದಗಿಸಲಾಗಿದ್ದು, ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆ ಒದಗಿಸುತ್ತದೆ.

ಕಾರಿನಲ್ಲಿ 7 ಏರ್‌ಬ್ಯಾಗ್ ಗಳು, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360 ವ್ಯೂ ಕ್ಯಾಮೆರಾ, SOS ಬಟನ್ ನೊಂದಿಗೆ ತುರ್ತು ಕರೆ, ಅಕೌಸ್ಟಿಕ್ ವೆಹಿಕಲ್ ಅಲಾರ್ಮ್ ಸಿಸ್ಟಮ್ (AVAS) ಅನ್ನು ಒದಗಿಸಲಾಗಿದೆ. ಇವಿಷ್ಟೇ ಅಲ್ಲದೇ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS ಲೆವೆಲ್ - 2) ನೊಂದಿಗೆ ಸಜ್ಜುಗೊಂಡಿದೆ.
ಹೊಸ ಮಾರುತಿ ಸುಜುಕಿ ಇ-ವಿಟಾರಾವ ಎಸ್‌ಯುವಿ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿ ಮಹೀಂದ್ರಾ BE 6, ಟಾಟಾ ಕರ್ವ್ EV, MG ವಿಂಡ್ಸರ್ EV, ವಿನ್‌ಫಾಸ್ಟ್ VF 6 ಮತ್ತು ಹುಂಡೈ ಕ್ರೆಟಾ ಎಲೆಕ್ಟ್ರಿಕ್‌ನಂತಹ ಪ್ರತಿಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸಲಿದೆ. ಇವುಗಳಿಗೆ ಕಠಿಣ ಪೈಪೋಟಿ ನೀಡಬೇಕೆಂದರೆ ಮಾರುತಿ ಸುಜುಕಿಯು ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆಯನ್ನು ಘೊಷಿಸಬೇಕಿದೆ.


Click it and Unblock the Notifications








