Maruti: ಸದ್ದಿಲ್ಲದೆ ಮಾರುತಿ ಇ-ವಿಟಾರಾ ಬೆಲೆಗಳು ಘೋಷಣೆ: ಪ್ರತಿ ಕಿ.ಮೀ ಕೇವಲ 4 ರೂ. ಅಷ್ಟೇ!
ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮಾರುತಿ ಸುಜುಕಿ (Maruti Suzuzki) ನಿನ್ನೆಯಷ್ಟೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾ (e-VITARA) ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ರೂ. 10.99 ಲಕ್ಷವಾಗಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಎಂಬ ವಿಶಿಷ್ಟ ಮಾಲೀಕತ್ವ ಯೋಜನೆಯಡಿ ಖರೀದಿಸಬಹುದಾಗಿದೆ. ಈ ಯೋಜನೆಯು ವಾಹನದಿಂದ ಪ್ರತ್ಯೇಕವಾಗಿ ಬ್ಯಾಟರಿಯನ್ನು ಬಾಡಿಗೆಗೆ ಪಡೆಯಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ ಎಂದು ಮಾರುತಿ ಸುಜುಕಿ ಹೇಳಿದೆ. ಇದೀಗ BaaS ಯೋಜನೆ ಇಲ್ಲದೆ ಕಾರಿನ ಬೆಲೆಗಳು ಬಹಿರಂಗವಾಗಿವೆ.
ಮೊದಲಿಗೆ ಈ BaaS ಯೋಜನೆಯಡಿ ಕಾರನ್ನು ಬಿಡುಗಡೆ ಮಾಡುವ ಮುಖ್ಯ ಉದ್ದೇಶವೇನೆಂದರೆ, ಎಲ್ಲಾ ವರ್ಗದ ಜನರು ಕಾರನ್ನು ಖರೀದಿಸಬೇಕೆಂಬುದು ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಕೇವಲ ರೂ. 10.99 ಲಕ್ಷಕ್ಕೆ ಕಾರನ್ನು ಬಿಡುಗಡೆ ಮಾಡಿ, ನಂತರ ಬ್ಯಾಟಿರಿಯನ್ನು ಬಾಡಿಗೆ ನೀಡಿ ಪ್ರತಿ ಕಿ.ಮೀ.ಗೆ ರೂ.3.99 ಪಾವತಿಸುವಂತೆ ಮಾಡಲಾಗಿದೆ.

ಇನ್ನೂ ವಿವರವಾಗಿ ಹೇಳಬೇಕೆಂದರೆ ಗ್ರಾಹಕರು ಬ್ಯಾಟರಿಗೆ ಮಾಸಿಕವಾಗಿ ಬಾಡಿಗೆಯನ್ನು ಪಾವತಿಸಬೇಕು, ಇದನ್ನು ಚಾಲನೆ ಮಾಡುವ ದೂರವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಚಾರ್ಜಿಂಗ್ ವೆಚ್ಚವನ್ನು ಹೊರತುಪಡಿಸಿ ಪ್ರತಿ ಕಿ.ಮೀ.ಗೆ ರೂ.3.99 ಪಾವತಿಸಬೇಕು. ಒಂದು ವೇಳೆ ಬಾಡಿಗೆ ಇಲ್ಲದೆ, ಬ್ಯಾಟರಿಯೊಂದಿಗೆ ಕಾರನ್ನು ಸಂಪೂರ್ಣವಾಗಿ ಖರೀದಿಸಬೇಕೆಂದರೆ ಕಾರಿನ ಬೆಲೆ ಇನ್ನೂ ಹೆಚ್ಚಾಗುತ್ತದೆ. ಆ ಬೆಲೆಗಳ ಮಾಹಿತಿ ಇಲ್ಲಿದೆ.
ಬೆಲೆ ವಿವರಗಳು
ಮಾರುತಿ ಸುಜುಕಿ ಇ-ವಿಟಾರಾ 'ಡೆಲ್ಟಾ' 49 kwh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 15,99,000 (ಎಕ್ಸ್ ಶೋರೂಂ), ಮಾರುತಿ ಸುಜುಕಿ ಇ-ವಿಟಾರಾ 'ಜೀಟಾ' 61 kwh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 17,49,000 (ಎಕ್ಸ್ ಶೋರೂಂ), ಹಾಗೆಯೇ ಮಾರುತಿ ಸುಜುಕಿ ಇ-ವಿಟಾರಾ 'ಆಲ್ಫಾ' 61 kwh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 17,49,000 (ಎಕ್ಸ್ ಶೋರೂಂ) ಇದೆ.

ಒಂದು ವೇಳೆ ನಿಮಗೆ ಇದು ದುಬಾರಿ ಬೆಲೆ ಎನ್ನಿಸಿದರೆ, 'BaaS' ಯೋಜನೆಯಡಿ ರೂ. 10.99 ಲಕ್ಷ ಪಾವತಿಸಿ ಕಾರನ್ನು ಮನೆಗೆ ಕೊಂಡೊಯ್ಯಬಹುದು, ಆದರೆ ಬ್ಯಾಟರಿಗೆ ಮಾತ್ರ ಪ್ರತಿ ಕಿ.ಮೀಗೆ ರೂ. 3.99 ಪಾವತಿಸಬೇಕಾಗುತ್ತದೆ. ಆಸಕ್ತ ಗ್ರಾಹಕರು ನೆಕ್ಸಾ ಶೋ ರೂಂಗಳಲ್ಲಿ ಅಥವಾ ನೆಕ್ಸಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ರೂ. 21 000 ಆರಂಭಿಕ ಪಾವತಿಯೊಂದಿಗೆ ಕಾರನ್ನು ಬುಕ್ ಮಾಡಬಹುದು.
ಹೊಸ ಮಾರುತಿ ಇ-ವಿಟಾರಾ ವಿಶೇಷತೆಗಳು
ಫೀಚರ್ಸ್ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಇ-ವಿಟಾರಾ ಸಂಪೂರ್ಣ ಆಟೋಮ್ಯಟಿಕ್ ಕ್ಲೈಮೆಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜರ್ ಮತ್ತು ಇನ್ನೂ ಹಲವು ಸುಧಾರಿತ ಫೀಚರ್ಸ್ ಹೊಂದಿದೆ. ಕಾರು ಸಂಪೂರ್ಣ ಎಲ್ಇಡಿ ಹೆಡ್‌ಲೈಟ್‌ಗಳು, ಡಿಆರ್‌ಎಲ್‌ಗಳು, ಫಾಗ್ ಲೈಟ್‌ಗಳು, ಟೈಲ್ ಲೈಟ್‌ಗಳನ್ನು ಹೊಂದಿದೆ. 19-ಇಂಚಿನ ಅಲಾಯ್ ವೀಲ್‌ಗಳು ಕಾರಿಗೆ ಮುಖ್ಯ ಆಕರ್ಷಣೆಯಾಗಿವೆ.

ಹೊಸ ಇ-ವಿಟಾರಾ 4,275 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,640 ಎಂಎಂ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,700 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟ್‌ಗಳು ಮತ್ತು 10 - ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ.
ಮಾರುತಿ ಸುಜುಕಿ ಇ-ವಿಟಾರಾ 61kWh ಮತ್ತು 49kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಕಾರನ್ನು ಸಿಂಗಲ್ ಚಾರ್ಜ್‌ನಲ್ಲಿ 543 ಕಿ.ಮೀ ಓಡಿಸಬಹುದು, ಹೆಚ್ಚು ಅಲ್ಟ್ರಾ-ಹೈ-ಟೆನ್ಸೈಲ್ ಮತ್ತು ಹೈ-ಟೆನ್ಸೈಲ್ ಸ್ಟೀಲ್ ಸ್ಟ್ರೆಂತ್ ಸ್ಟೀಲ್ ನಿರ್ಮಾಣ ಮತ್ತು ವರ್ಧಿತ ಸುರಕ್ಷತೆಗಾಗಿ ಸುಧಾರಿತ ಬ್ಯಾಟರಿ ರಕ್ಷಣಾ ವ್ಯವಸ್ಥೆ ಒದಗಿಸಲಾಗಿದೆ. ಹಾಗಾಗಿಯೇ ಕಾರು 5-ಸ್ಟಾರ್ ಭಾರತ್ NCAP ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.
ಮಾರುತಿ ಸುಜುಕಿ ಇ-ವಿಟಾರಾ ಸುರಕ್ಷತೆ ಬಗ್ಗೆ ಹೇಳುವುದಾದ್ರೆ, ಅತ್ಯಾಧುನಿಕ ವ್ಯವಸ್ಥೆಯ ವೈಶಿಷ್ಟ್ಯಗಳೊಂದಿಗೆ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ನೀಡಲಾಗಿದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ (AEB) ಸೇರಿದಂತೆ 7 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡಲಾಗಿದೆ.


Click it and Unblock the Notifications








