Maruti: ಬೆಲೆ ಇಷ್ಟೇನಾ? ಹೊಸ 7-ಸೀಟರ್ ಕಾರಿಗೆ ಫುಲ್ ಡಿಮ್ಯಾಂಡ್: ಪ್ರತಿ ದಿನ 635 ಮಂದಿ ಖರೀದಿ!

ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಪ್ರಸ್ತುತ ಕಾರು ಮಾರಾಟದಲ್ಲಿ ನಂ.1 ಕಂಪನಿಯಾಗಿ ಮುಂದುವರಿಯುತ್ತಿದೆ. ಇತರ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹಾಗೂ ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಮಾರಾಟ ಮಾಡುತ್ತಿದೆ. ಜನ ಮಾರುತಿ ಕಾರುಗಳನ್ನು ಮುಗಿಬಿದ್ದು ಖರೀದಿಸುವುದರಿಂದ ಪ್ರತಿ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ದಾಖಲೆಯ ಮಾರಾಟವನ್ನು ಕಾಣುತ್ತಿದೆ. ಈ ಬಾರಿ ಕೂಡ 7-ಸೀಟರ್ ವಿಭಾಗದಲ್ಲಿ ಪ್ರಮುಖ ಮಾರುತಿ ಕಾರು ಮೊದಲ ಸ್ಥಾನ ದಕ್ಕಿಸಿಕೊಂಡಿದೆ.

ದೊಡ್ಡ ಕುಟುಂಬಕ್ಕೆ ಬೆಸ್ಟ್ ಆಯ್ಕೆಯಾಗಿ ಮುಂದುವರಿಯುತ್ತಿರುವ ಪ್ರಮುಖ ಮಾರುತಿ ಸುಜುಕಿ 7-ಸೀಟರ್ ಕಾರು, ಈಗ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಷ್ಟಕ್ಕೂ ಆ ಫ್ಯಾಮಿಲಿ ಕಾರು ಯಾವುದು ಗೊತ್ತಾ? ಅದೇ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಇದು ತನ್ನ ಆಕರ್ಷಕ ಫೀಚರ್ಸ್, ಅತ್ಯುತ್ತಮ ಮೈಲೇಜ್, ಕಡಿಮೆ ಬೆಲೆ ಹಾಗೂ ವಿಶಾಲವಾದ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ದೊಡ್ಡ ಕುಟುಂಬಗಳ ಫೇವರೆಟ್ ಕಾರಾಗಿದೆ.

maruti-suzuki-ertiga-february-2026-sales-report

ಅಂದಹಾಗೆ ಮಾರುತಿ ಸುಜುಕಿ ಎರ್ಟಿಗಾ 2026 ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 17,807 ಯುನಿಟ್‌ ಕಾರುಗಳು ಮಾರಾಟವಾಗಿವೆ. ಅಂದರೆ ಪ್ರತಿ ದಿನ 635 ಕಾರುಗಳು ಮಾರಾಟವಾದಂತೆ, ಇದು ಕಂಪನಿಗೆ ಉತ್ತಮ ಲಾಭ ತಂದುಕೊಡುವ ಕಾರಾಗಿ ಮುನ್ನುಗ್ಗುತ್ತಿದೆ. 2025ರ ಇದೇ ಅವಧಿಯಲ್ಲಿ (ಕಳೆದ ವರ್ಷ) 14,868 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಅಂದರೆ ವರ್ಷದಿಂದ ವರ್ಷಕ್ಕೆ ಈ ಕಾರನ್ನು ಖರೀದಿಸುವವರ ಸಂಖ್ಯೆ ಏರುತ್ತಲೇ ಇದೆ.

ಹೊಸ ಎರ್ಟಿಗಾವನ್ನು ಭಾರತದಲ್ಲಿ ಖರೀದಿಸಬೇಕೆಂದರೆ ಪ್ರಸ್ತುತ ಬೇಸ್ ವೇರಿಯೆಂಟ್ ಬೆಲೆಯು ರೂ.8.80 ಲಕ್ಷ (ಎಕ್ಸ್-ಶೋರೂಂ) ವಿದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ.12.94 ಲಕ್ಷ (ಎಕ್ಸ್-ಶೋರೂಂ) ಇದೆ. ಸೌಕರ್ಯಯುತ ಲಾಂಗ್ ಡ್ರೈವ್‌ಗೆ ಉತ್ತಮ ಆಯ್ಕೆಯೆಂದು ಈಗಾಗಲೇ ಖರೀದಿಸಿದ ಗ್ರಾಹಕರು ಎರ್ಟಿಗಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

maruti-suzuki-ertiga-february-2026-sales-report

ಹೊಸ ಮಾರುತಿ ಸುಜುಕಿ ಎರ್ಟಿಗಾ ವಿಶೇಷತೆಗಳು

ಹೊಸ ಮಾರುತಿ ಸುಜುಕಿ ಎರ್ಟಿಗಾ ಫೀಚರ್ಸ್ ವಿಷಯಕ್ಕೆ ಬಂದರೆ, ವೇರಿಯೆಂಟ್ಸ್‌ಗೆ ಅನುಗುಣವಾಗಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್ಸ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಒಳಗೊಂಡಂತೆ ವಿವಿಧ ಫೀಚರ್ಸ್ ನೀಡುತ್ತದೆ.

ಈ ಕಾರು ವಿಶಾಲವಾದ ಕ್ಯಾಬಿನ್ ಒಳಗೊಂಡಿರುವ ಕಾರಣ ಎಲ್ಲಾ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ. ಎರ್ಟಿಗಾ 4,395 ಎಂಎಂ ಉದ್ದ, 1,735 ಅಗಲ ಹಾಗೂ 1,690 ಎಂಎಂ ಎತ್ತರ, 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,740 ವೀಲ್‌ಬೇಸ್‌ ಇದೆ. ಮೂರು-ಸಾಲುಗಳ ಸಂರಚನೆಯೊಂದಿಗೆ 550-ಲೀಟರ್ ಬೂಟ್ ಜಾಗದೊಂದಿಗಿ ಜನಪ್ರಿಯತೆ ಗಳಿಸಿದೆ.

maruti-suzuki-ertiga-february-2026-sales-report

ಹೊಸ ಎರ್ಟಿಗಾ ಎಂಪಿವಿ ಕಾರನ್ನು 1.5-ಲೀ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ ಆಯ್ಕೆಗಳಲ್ಲಿ ಗ್ರಾಹಕರು ಖರೀದಿಸಬಹುದು. ವೇರಿಯೆಂಟ್‌ಗಳಿಗೆ ಅನುಗುಣವಾಗಿ 6-ಸ್ಪೀಡ್ ಆಟೋಮೆಟಿಕ್ ಹಾಗೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ, ಪೆಟ್ರೋಲ್ MT ನಲ್ಲಿ 20.51 ಕಿ.ಮೀ, ಪೆಟ್ರೋಲ್ AT ನಲ್ಲಿ 20.3 ಕಿ.ಮೀ ಹಾಗೂ CNG MT ನಲ್ಲಿ ಪ್ರತಿ ಕೆ.ಜಿಗೆ ಬರೋಬ್ಬರಿ 26.11 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಸೇಫ್ಟಿ ವಿಷಯಕ್ಕೆ ಬಂದರೆ ಈ ಕಾರು ಆರು ಏರ್‌ಬ್ಯಾಗ್‌ಗಳೊಂದಿಗೆ ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆ ಒದಗಿಸುತ್ತದೆ. ಜೊತೆಗೆ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

More from DriveSpark

Article Published On: Tuesday, March 3, 2026, 12:27 [IST]
English summary
Maruti suzuki ertiga february 2026 sales report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+