Maruti Suzuki: ಇಷ್ಟು ಕಡಿಮೆ ಬೆಲೆನಾ? ಡೀಲರ್‌ಗಳ ಫೆವರೆಟ್ ಕಾರು: 28 ಕಿ.ಮೀ ಮೈಲೇಜ್!

ಮಾರುತಿ ಸುಜುಕಿ (Maruti Suzuki) ಪ್ರಸ್ತುತ ದೇಶದ ನಂ.1 ಕಾರು ತಯಾರಕರಾಗಿದ್ದು, ಮಾರಾಟದಲ್ಲಿ ಪ್ರತಿ ತಿಂಗಳಿನಂತೆ ಈ ಬಾರಿಯು ಉತ್ತಮ ಲಾಭ ಕಂಡಿದೆ. ಡಿಸೆಂಬರ್ 2025 ರಲ್ಲಿ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಒಟ್ಟು 2,17,854 ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ದೇಶೀಯ ಮಾರಾಟವು ಸಾರ್ವಕಾಲಿಕ ಗರಿಷ್ಠ 1,82,165 ಯೂನಿಟ್‌ ಕಾರುಗಳನ್ನು ತಲುಪಿದೆ. ಇತರ ಕಂಪನಿಗಳಿಗೆ ಮಾರಾಟವು 9,950 ಯೂನಿಟ್‌ ಕಾರುಗಳಾಗಿದ್ದು, ರಫ್ತುಗಳು 25,739 ಯೂನಿಟ್‌ ಕಾರುಗಳಾಗಿವೆ. ಈ ಮೂಲಕ ಡಿಸೆಂಬರ್‌ನಲ್ಲಿ ಮಾರುತಿ ಮತ್ತೊಮ್ಮೆ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಇನ್ನು 2025ರ ವರ್ಷ ಮುಕ್ತಾಯಗೊಂಡು 2026 ಕ್ಕೆ ಕಾಲಿಡಲಾಗಿದೆ. 2025 ಜನವರಿಯಿಂದ ಡಿಸೆಂಬರ್‌ವರೆಗೆ ಮಾರುತಿ ಸುಜುಕಿ ಬರೋಬ್ಬರಿ 23,51,139 ಯೂನಿಟ್‌ ಕಾರುಗಳ ಅತ್ಯಧಿಕ ಒಟ್ಟು ಮಾರಾಟದೊಂದಿಗೆ 2025ರ ವರ್ಷವನ್ನು ಮುಕ್ತಾಯಗೊಳಿಸಿದೆ. ಇದರಲ್ಲಿ 3,95,648 ಯೂನಿಟ್‌ ಕಾರುಗಳ ಅತ್ಯಧಿಕ ರಫ್ತುಗಳು ಸಹ ಸೇರಿವೆ ಎಂದು ಮಾರುತಿ ಸುಜುಕಿ ತಿಳಿಸಿದೆ.

maruti-suzuki-fronx-20700-cars-sold-in-2025-december

ಫ್ರಾಂಕ್ಸ್‌ಗೆ ಅದೇ ಬೇಡಿಕೆ

ಭಾರತದಲ್ಲಿ ಮಾರುತಿ ಬಲೆನೊ ನಂತರ ಆ ಮಟ್ಟದ ಉತ್ತಮ ಬೇಡಿಕೆಯನ್ನು ಗಳಿಸಿರುವ ಅದೇ ಬ್ರಾಂಡ್‌ನ ಪ್ರೀಮಿಯಂ ಕಾರೆಂದರೆ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx), ಇದು ದೇಶದದಲ್ಲಿ ಯುವಜನತೆಯನ್ನು ತುಂಬಾ ಸೆಳೆದಿದೆ. ಸ್ಪೋರ್ಟಿ ಪ್ರೀಮಿಯಂ ಲುಕ್, ಆಕರ್ಷಕ ಇಂಟೀರಿಯರ್ ಹಾಗೂ ಹೆಚ್ಚಿನ ಫೀಚರ್ಸ್‌ನಿಂದಾಗಿ ಪ್ರತಿ ತಿಂಗಳು ಫ್ರಾಂಕ್ಸ್ ಉತ್ತಮ ಮಾರಾಟ ಕಾಣುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಹ್ಯಾಚ್‌ಬ್ಯಾಕ್‌ನ ಒಟ್ಟು 20,700 ಯುನಿಟ್‌ ಕಾರುಗಳು ಮಾರಾಟವಾಗಿವೆ.

ಮಾರುತಿ ಫ್ರಾಂಕ್ಸ್ ವಿಶೇಷತೆಗಳು: ಬೆಂಗಳೂರಿನಲ್ಲಿ ಮಾರುತಿ ಫ್ರಾಂಕ್ಸ್ ಆನ್ ರೋಡ್ ಬೆಲೆ ರೂ.8.24 ಲಕ್ಷದಿಂದ ಪ್ರಾರಂಭವಾಗುತ್ತದೆ. ಫ್ರಾಂಕ್ಸ್ ಟಾಪ್ ಮಾಡೆಲ್ ಬೆಲೆ ರೂ. 14.76 ಲಕ್ಷವಿದ್ದರೇ, ಫ್ರಾಂಕ್ಸ್ AT ಬೆಲೆ ರೂ. 9.77 ಲಕ್ಷದಿಂದ ಪ್ರಾರಂಭವಾಗಿ ರೂ. 14.76 ಲಕ್ಷದವರೆಗೆ ಇದೆ. ಫ್ರಾಂಕ್ಸ್ ಸಿಎನ್‌ಜಿ ಬೆಲೆ ರೂ. 9.36 ಲಕ್ಷದಿಂದ ಪ್ರಾರಂಭವಾಗಿ ರೂ. 10.30 ಲಕ್ಷದವರೆಗೆ ಇದೆ.

maruti-suzuki-fronx-20700-cars-sold-in-2025-december

ಈ ಮಾರುತಿ ಫ್ರಾಂಕ್ಸ್ ಎಸ್‍ಯುವಿ ಡ್ಯುಯಲ್ - ಟೋನ್ ಇಂಟೀರಿಯರ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಹೆಡ್ಸ್ - ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಫ್ರಾಂಕ್ಸ್ ಮೂರು ಪವರ್‌ಟ್ರೇನ್ ಆಯ್ಕೆಗಳ‌ನ್ನು ಹೊಂದಿದ್ದು, 1-ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ ಆಯ್ಕೆಗಳಿವೆ. ವೇರಿಯೆಂಟ್‌ಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಸಿಎನ್‌ಜಿ ಎಂಜಿನ್‌ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ನಲ್ಲಿ ಮಾತ್ರ ಬರುತ್ತದೆ. ಪೆಟ್ರೋಲ್‌ನಲ್ಲಿ 20 ಹಾಗೂ CNG ನಲ್ಲಿ 28 ಕಿ.ಮೀ ಮೈಲೇಜ್ ನೀಡುತ್ತದೆ.

maruti-suzuki-fronx-20700-cars-sold-in-2025-december

ಸುರಕ್ಷತೆ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ 6 ಏರ್‌ಬ್ಯಾಗ್‌, ಹಿಲ್ ಹೋಲ್ಡ್ ಅಸಿಸ್ಟ್, 360 - ಡಿಗ್ರಿ ಕ್ಯಾಮೆರಾ, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಉತ್ತಮ ಕ್ಯಾಬಿನ್ ಸ್ಪೇಸ್ ಕೂಡ ಹೊಂದಿದ್ದು, ಕಾರು 995 ಎಂಎಂ ಉದ್ದ, 1765 ಎಂಎಂ ಅಗಲ ಹಾಗೂ 1550 ಎಂಎಂ ಎತ್ತರವಿದೆ. 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2520 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಅನುಕೂಲವಾಗುವಂತೆ 308 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ನೀಡಲಾಗಿದೆ.

More from DriveSpark

Article Published On: Saturday, January 3, 2026, 14:18 [IST]
English summary
Maruti suzuki fronx 20700 cars sold in 2025 december
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+