Maruti: ಪುಟ್ಟ ಮಾರುತಿ ಹೈಬ್ರಿಡ್ ಕಾರು ಕಾಣಿಸಿಕೊಂಡಿದೆ... ಶೀಘ್ರದಲ್ಲೆ ಬಿಡುಗಡೆ: ಬೆಲೆಯೆಷ್ಟು?

ಮಾರುತಿ ಸುಜುಕಿ ಸಣ್ಣ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಲೆನೊ, ಫ್ರಾಂಕ್ಸ್‌ನಂತಹ ಎಸ್‌ಯುವಿಗಳೊಂದಿಗೆ ಮಾರಾಟದಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಫ್ರಾಂಕ್ಸ್ ಎಸ್‌ಯುವಿಯನ್ನು ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಖರೀದಿಸಿದ್ದಾರೆ. ಫ್ರಾಂಕ್ಸ್‌ಗಿಂತ ಮುಂಚೆ ಬಲೆನೊ ಉತ್ತಮ ಮಾರಾಟ ಕಾಣುತ್ತಿತ್ತು, ಆದರೆ ಈಗ ಫ್ರಾಂಕ್ಸ್ ಎಲ್ಲವನ್ನು ಹಿಂದಿಕ್ಕಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಹಾಗಾಗಿ ಈ ಕಾರಿನಿಂದ ಇನ್ನೂ ಹೆಚ್ಚಿನ ಮಾರಾಟದೊಂದಿಗೆ ಲಾಭ ಗಳಿಸಿಲು ಮಾರುತಿ ಸುಜುಕಿ ಹೊಸ ಫ್ರಾಂಕ್ಸ್ ಹೈಬ್ರಿಡ್ ಕಾರಿನ ಬಿಡುಗಡೆಗೆ ಸಜ್ಜಾಗಿದೆ.

ಈಗಾಗಲೇ ಫ್ರಾಂಕ್ಸ್ ಹೈಬ್ರಿಡ್ ಕಾರು ರಸ್ತೆಯಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಇಂಧನ ಬೆಲೆಗಳು ಕೂಡ ಹೆಚ್ಚುತ್ತಲೇ ಇರುವುದರಿಂದ ಕಂಪನಿಯು ತನ್ನ ವಾಹನಗಳ ಹೆಚ್ಚಿನ ಹೈಬ್ರಿಡ್ ಮಾಡಲ್‌ಗಳನ್ನು ಪರಿಚಯಿಸಲು ನೋಡುತ್ತಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಹೈಬ್ರಿಡ್ ಬಿಡುಗಡೆಗೆ ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಲ್ಲವಾದೂ, ಕೆಲವು ಮೂಲಗಳ ಪ್ರಕಾರ 2026ರ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

maruti-suzuki-fronx-hybrid-expected-launch-price-deatails

ನಿರೀಕ್ಷಿತ ಬೆಲೆ: ಈ ಹೈಬ್ರಿಡ್ ಕಾರು, ಮಾರುತಿಯ ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಒಟ್ಟಾರೆ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಆದ್ದರಿಂದ ಫ್ರಾಂಕ್ಸ್ ಹೈಬ್ರಿಡ್ ಬೆಲೆ ಸ್ವಲ್ಪ ಹೆಚ್ಚು ಇರಬಹುದು. ಪ್ರಸ್ತುತ ಫ್ರಾಂಕ್ಸ್ ಬೆಲೆಯು ರೂ. 6.85 (ಎಕ್ಸ್-ಶೋರೂಂ) ಲಕ್ಷದಿಂದ ಪ್ರಾರಂಭವಾಗುತ್ತದೆ. ಹೆಚ್ಚುವರಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಯೂನಿಟ್‌ಗಳಿಂದಾಗಿ ಹೈಬ್ರಿಡ್ ಮಾಡಲ್ ಬೆಲೆಯು ರೂ. 9 ಲಕ್ಷದಿಂದ ರೂ. 11 ಲಕ್ಷದ ನಡುವೆ ಇರಬಹುದು.

ಹೊಸ ಫ್ರಾಂಕ್ಸ್ ಹೈಬ್ರಿಡ್ ಕಾರು ಪ್ರಸ್ತುತ ದೇಶದಲ್ಲಿ ಮಾರಾಟವಾಗುತ್ತಿರುವ ಸ್ಟ್ಯಾಂಡರ್ಡ್ ಫ್ರಾಂಕ್ಸ್ ಡಿಸೈನ್‌ನಂತೆಯೇ ಇರಲಿದೆ. ಆದರೆ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಗ್ರಿಲ್ ಮಾತ್ರ ಅಪ್‌ಡೇಟ್ ಆಗಲಿದೆ. ಹೆಚ್ಚುವರಿಯಾಗಿ ಹೈಬ್ರಿಡ್ ಬ್ಯಾಡ್ಜಿಂಗ್ ಮಾತ್ರ ಕಾಣಿಸಿಕೊಳ್ಳಲಿದೆ. ಉಳಿದಂತೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

maruti-suzuki-fronx-hybrid-expected-launch-price-deatails

ಹೈಬ್ರಿಡ್ ಎಂಜಿನ್ ನಿರೀಕ್ಷೆಗಳು: ಮಾರುತಿ ಸುಜುಕಿ ಫ್ರಾಂಕ್ಸ್ ಹೈಬ್ರಿಡ್ 1.0 - ಲೀಟರ್ ಮತ್ತು 1.5 - ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ. ಇದು 48V ಮೈಲ್ಡ್ - ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬರಬಹುದು. ಈ ಹೈಬ್ರಿಡ್ ವ್ಯವಸ್ಥೆಯು ಪೆಟ್ರೋಲ್ ಎಂಜಿನ್‌ಗೆ ಸಹಾಯ ಮಾಡುತ್ತದೆ, ವಿಶೇಷವಾಗಿ ನಗರದ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಹೆಚ್ಚಿನ ಮೈಲೇಜ್ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇಂಟೀರಿಯರ್‌ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ಡ್ರೈವರ್ ಅಸಿಸ್ಟ್ ಫೀಚರ್ ಒದಗಿಸಲಾಗುವುದು. ಉಳಿದಂತೆ ಈಗಿರುವ ಉಪಕರಣಗಳನ್ನು ಮುಂದುವರಿಸುವ ಸಾಧ್ಯತೆ ಇದೆ. ಹೊಸ ಬ್ಯಾಡ್ಜ್‌ಗಳು ಅಥವಾ ಹೈಬ್ರಿಡ್ - ನಿರ್ದಿಷ್ಟ ಉಪಕರಣಗಳಂತಹ ಸಣ್ಣ ನವೀಕರಣಗಳನ್ನು ಪರಿಚಯಿಸಬಹುದು. ಏಕೆಂದರೆ ಹೈಬ್ರಿಡ್ ಮಾಡಲ್‌ನ್ನು ಪೆಟ್ರೋಲ್ ಮಾಡಲ್‌ನಿಂದ ಪ್ರತ್ಯೇಕಿಸಲು.

maruti-suzuki-fronx-hybrid-expected-launch-price-deatails

ಸುರಕ್ಷತೆಯ ದೃಷ್ಟಿಯಿಂದ 6 - ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಿಲ್ - ಹೋಲ್ಡ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಮೂಲಕ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 14, 2026, 10:20 [IST]
English summary
Maruti suzuki fronx hybrid expected launch price deatails
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+