ಪವರ್‌ಫುಲ್‌ ಹ್ಯಾಚ್‌ಬ್ಯಾಕ್‌ಗಳು: ಹೊಸ ಕಾರು ಬರೀ 6 ಲಕ್ಷ... ಆದರೆ ಬೆಸ್ಟ್ ಯಾವುದು?

ಭಾರತದಲ್ಲಿ ಹಲವರು ಕಾರು ಖರೀದಿದಾರರಿಗೆ, ಹ್ಯಾಚ್‌ಬ್ಯಾಕ್‌ಗಳು ಯಾವಾಗಲೂ ಅವರ ಅತ್ಯಂತ ಆದ್ಯತೆಯ ಆಯ್ಕೆಯಾಗಿದೆ. ನಗರಗಳ ಸಂಚಾರ ದಟ್ಟಣೆಯಲ್ಲಿ ಸುಲಭವಾಗಿ ಚಲಿಸಬಹುದು ಮತ್ತು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಸಿಟಿ ಮಂದಿಗೆ ಹ್ಯಾಚ್‌ಬ್ಯಾಕ್‌ಗಳು ಬೆಸ್ಟ್ ಆಯ್ಕೆಯಾಗಿವೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಈ ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಮುನ್ನಡೆ ಸಾಧಿಸುತ್ತಿವೆ. ಎರಡೂ ಹ್ಯಾಚ್‌ಬ್ಯಾಕ್‌ಗಳು ಡಿಸೈನ್ ಮತ್ತು ಪ್ರಾಯೋಗಿಕತೆ ಜೊತೆಗೆ ಅತ್ಯುತ್ತಮ ಫೀಚರ್ಸ್ ಹೊಂದಿವೆ. ಆದರೆ ಯಾವುದು ನಿಮಗೆ ಉತ್ತಮವಾಗಿ ಸರಿಹೊಂದಬಹುದು? ಹೋಲಿಕೆ ಮಾಡಿ ನೋಡೋಣ ಬನ್ನಿ.

ಬೆಲೆ: ಪ್ರಸ್ತುತ ಭಾರತದಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆಯು ರೂ. 5,78,900 (ಎಕ್ಸ್‌ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ - ಎಂಡ್ ವೇರಿಯೆಂಟ್ ಬೆಲೆಯು ರೂ. 8,79,900 (ಎಕ್ಸ್‌ - ಶೋರೂಂ) ವರೆಗೆ ಇದೆ. ಬೆಲೆಗೆ ತಕ್ಕ ಫೀಚರ್ಸ್ ಹಾಗೂ ಸೌಕರ್ಯವನ್ನು ಒದಗಿಸುವ ಈ ಕಾರಿನಲ್ಲಿ ಐದು ಮಂದಿ ಕುಳಿತು ಆರಾಮವಾಗಿ ಪ್ರಯಾಣಿಸಬಹುದಾಗಿದೆ.

maruti-suzuki-swift-vs-hyundai-grand-i10-nios-price-features-mileage

ಪ್ರಸ್ತುತ ಭಾರತದಲ್ಲಿ ಹೊಸ ಹ್ಯುಂಡೈ ಐ10 ನಿಯೋಸ್ ಬೆಲೆಯು ರೂ. 5,55,000 (ಎಕ್ಸ್‌ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ - ಎಂಡ್ ವೇರಿಯೆಂಟ್ ಬೆಲೆಯು ರೂ. 7,91,692 (ಎಕ್ಸ್‌ - ಶೋರೂಂ) ವರೆಗೆ ಇದೆ. ಈ ಕಾರಿನಲ್ಲಿಯೂ ಐದು ಮಂದಿ ಕುಳಿತು ಆರಾಮವಾಗಿ ಪ್ರಯಾಣಿಸಬಹುದಾಗಿದ್ದು, ಉತ್ತಮ ಫೀಚರ್ಸ್‌ನೊಂದಿಗೆ ಆಕರ್ಷಕ ಡಿಸೈನ್ ಹೊಂದಿದೆ.

ಫೀಚರ್ಸ್: ಸ್ವಿಫ್ಟ್ ಇಂಟೀರಿಯರ್‌ನಲ್ಲಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪುಶ್-ಬಟನ್ ಸ್ಟಾರ್ಟ್, ಆಟೋ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಮತ್ತು ರೇರ್ ಎಸಿ ವೆಂಟ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌‌ಗಳನ್ನು ನೀಡಡಲಾಗಿದ್ದು ಬೆಲೆಗೆ ತಕ್ಕ ಫೀಚರ್ಸ್ ಪಡೆದುಕೊಂಡಿದೆ.

maruti-suzuki-swift-vs-hyundai-grand-i10-nios-price-features-mileage

ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ವಿಷಯಕ್ಕೆ ಬಂದರೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿಯರ್ ಎಸಿ ವೆಂಟ್‌ಗಳು, ಕ್ರೂಸ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಪುಶ್ - ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ.

ಎಂಜಿನ್ ಮತ್ತು ಮೈಲೇಜ್: ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ 2 ಪವರ್ ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್, ಜೊತೆಗೆ 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಸಿಎನ್‌ಜಿ ಎಂಜಿನ್ ಆಯ್ಕೆಯೂ ಇದ್ದು, ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ.

maruti-suzuki-swift-vs-hyundai-grand-i10-nios-price-features-mileage

ಮಾರುತಿ ಸುಜುಕಿ ಸ್ವಿಫ್ಟ್ ಎಂಜಿನ್ ವಿಶೇಷತೆಗಳನ್ನು ನೋಡುವುದಾದರೆ ಈ ಕಾರು 1.2 - ಲೀ, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಜೊತೆಗೆ ಬರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ನೀಡಲಾಗಿದೆ. ಸ್ವಿಫ್ಟ್ ಕೂಡ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ.

ಮೈಲೇಜ್ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 24.80 ಕಿ.ಮೀ ಮೈಲೇಜ್ ನೀಡಿದರೆ ಸಿಎನ್‌ಜಿನಲ್ಲಿ 32.85 ಕಿ.ಮೀವರೆಗೆ ಮೈಲೇಜ್ ನೀಡುವುದಾಗಿ ಮಾರುತಿ ಹೇಳಿಕೊಂಡಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಮೈಲೇಜ್ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ವೇರಿಯೆಂಟ್‌ಗಳು 16 ಕಿ.ಮೀ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳು 27 ಕಿ.ಮೀ ಮೈಲೇಜ್ ನೀಡುತ್ತವೆ ಎಂದು ಹ್ಯುಂಡೈ ಹೇಳಿಕೊಂಡಿದೆ.

More from DriveSpark

Article Published On: Sunday, February 15, 2026, 10:20 [IST]
English summary
Maruti suzuki swift vs hyundai grand i10 nios price features mileage
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+