ಶ್ರೀಮಂತ ಗ್ರಾಹಕರಿಗಾಗಿ ಬೆಂಗಳೂರಿನಲ್ಲಿ ಅತ್ಯಾಧುನಿಕ ಐಷಾರಾಮಿ ಬೆಂಝ್ ಶೋರೂಂ ಉದ್ಘಾಟನೆ

ಅತ್ಯಂತ ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್-ಬೆಂಜ್ ಇಂಡಿಯಾ, ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕವಾದ ಹೊಸ ಐಷಾರಾಮಿ ಮಾರಾಟ ಮತ್ತು ಸೇವಾ ಘಟಕ 'ವಿವಾ ಸ್ಟಾರ್' ಅನ್ನು ಉದ್ಘಾಟಿಸಿದೆ. ಈ ಹೊಸ ಡೀಲರ್‌ ಶಿಪ್ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಮರ್ಸಿಡಿಸ್- ಬೆಂಜ್‌ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲಿದೆ. ವಿವಾ ಸ್ಟಾರ್ ಮೂಲಕ ಕಾರ್ಯನಿರ್ವಹಿಸುವ ಈ ಹೊಸ ಐಷಾರಾಮಿ ಶೋರೂಂ ಸಂಸ್ಥೆಯ 'ಗೋ ಟು ಕಸ್ಟಮರ್' ಕಾರ್ಯತಂತ್ರಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಘನತೆವೆತ್ತ ಗ್ರಾಹಕರಿಗೆ ಮರ್ಸಿಡಿಸ್- ಬೆಂಜ್ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ ಮೇಬ್ಯಾಕ್ ಲಾಂಜ್ ಬೆಂಗಳೂರಿನ ವಿವಾ ಸ್ಟಾರ್‌ ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ 'ಮರ್ಸಿಡಿಸ್- ಮೇಬ್ಯಾಕ್ ಲಾಂಜ್' ಅನ್ನು ಹೊಂದಿದ್ದು, ಇದು ಉನ್ನತ ದರ್ಜೆಯ ಗ್ರಾಹಕರಿಗೆ ಮತ್ತು ಐಷಾರಾಮಿ ಕಾರು ಪ್ರಿಯರಿಗೆ ವಿಶಿಷ್ಟವಾದ ಮೇಬ್ಯಾಕ್ ಬ್ರ್ಯಾಂಡ್ ಅನುಭವವನ್ನು ಒದಗಿಸುತ್ತದೆ.

mercedes-benz-inaugurates-bengalurus-latest-luxury-facility

ಈ 'ಮೇಬ್ಯಾಕ್ ಲಾಂಜ್' ಕರ್ನಾಟಕದಲ್ಲಿ ಮೊದಲ ಬಾರಿಗೆ ಮೇಬ್ಯಾಕ್ ಶಾಪ್-ಇನ್- ಶಾಪ್ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ನವೀನವಾದ ಮೇಬ್ಯಾಕ್ ರಿಟೇಲ್ ಕಿಟ್ ಮೂಲಕ ವಿಶಿಷ್ಟವಾದ ರೀಟೇಲ್ ಅಂಶಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಮೇಬ್ಯಾಕ್ ರಿಟೇಲ್ ಕಿಟ್ ಗ್ರಾಹಕರಿಗೆ ಕಾರನ್ನು ತಮ್ಮಿಚ್ಛೆಯಂತೆ ವಿನ್ಯಾಸಗೊಳಿಸಲು ವಿಶೇಷವಾದ 'ಮ್ಯಾನುಫ್ಯಾಕ್ಟರ್' ಸರಣಿಯ ಕಸ್ಟಮೈಸೇಷನ್ ಆಯ್ಕೆಯನ್ನು ಒದಗಿಸುತ್ತದೆ.

ಈ ಮೇಬ್ಯಾಕ್ ರಿಟೇಲ್ ಕಿಟ್‌ ಗಳನ್ನು ಜರ್ಮನಿಯಲ್ಲಿ ವಿನ್ಯಾಸಗೊಳಿಸಿ, ಕೈಯಿಂದಲೇ ಸಿದ್ಧಪಡಿಸಿ ತಯಾರಿಸಲಾಗಿದೆ. ಐಷಾರಾಮಿ ಮಾದರಿಗಳ ಪ್ರದರ್ಶನದ ಜೊತೆಗೆ ಗ್ರಾಹಕರಿಗೆ ಉನ್ನತ ಮಟ್ಟದ ಸಮಾಲೋಚನಾ ಅನುಭವವನ್ನು ನೀಡಲಿವೆ. ಮೇಬ್ಯಾಕ್ ರಿಟೇಲ್ ಕಿಟ್ ಗ್ರಾಹಕರಿಗೆ ಅತ್ಯಂತ ಐಷಾರಾಮಿ ವೈಟ್ ಗ್ಲೌ ಪ್ರೆಸೆಂಟೇಷನ್ ಮೂಲಕ ಕಾರಿನ ವಿನ್ಯಾಸದ ಮಾದರಿಗಳನ್ನು ಪರಿಚಯಿಸುತ್ತದೆ, ಇದರಿಂದ ಗ್ರಾಹಕರು ಅತ್ಯುನ್ನತ ಮಟ್ಟದ ಮಾರಾಟ ಸೇವಾ ಅನುಭವವನ್ನು ಪಡೆಯಲಿದ್ದಾರೆ.

mercedes-benz-inaugurates-bengalurus-latest-luxury-facility

ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರಿನ ವಿವಾ ಸ್ಟಾರ್ ಘಟಕವು ಐಷಾರಾಮಿ ರೀಟೇಲ್ ಶೋರೂಮ್ ಮತ್ತು ಆಧುನಿಕ ಸೇವಾ ಕೇಂದ್ರವನ್ನು ಒಂದೇ ಸೂರಿನಡಿ ತಂದಿದೆ. ಇದು ಗ್ರಾಹಕರಿಗೆ ವಾಹನ ಖರೀದಿ ಮತ್ತು ಮಾಲೀಕತ್ವದ ಪಯಣದಲ್ಲಿ ಯಾವುದೇ ತೊದರೆಯಾಗದಂತಹ ವಿಶಿಷ್ಟ ಅನುಭವವನ್ನು ನೀಡುತ್ತದೆ. ಈ ಕೇಂದ್ರವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗ್ರಾಹಕ ಸಮಾಲೋಚನಾ ಸ್ಥಳಗಳು ಮತ್ತು ವಾಹನ ಹಸ್ತಾಂತರದ ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿದೆ.

ಈ ಮೂಲಕ ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಗುರಿ ಹೊಂದಿದೆ. ದಕ್ಷಿಣ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಮತ್ತು ಸುಲಭವಾಗಿ ಗುರುತಿಸಬಹುದಾದ, ಅತಿ ಹೆಚ್ಚು ಬೇಡಿಕೆ ಇರುವ ಪ್ರದೇಶದಲ್ಲಿ ನೆಲೆಸಿರುವ ವಿವಾ ಸ್ಟಾರ್, ಪ್ರಮುಖ ವಸತಿ ಪ್ರದೇಶಗಳಿಗೆ ಹತ್ತಿರದಲ್ಲಿದೆ. ಅಲ್ಲದೆ, ಇದು ಇತರ ಐಷಾರಾಮಿ ಬ್ರ್ಯಾಂಡ್‌ ಗಳ ಉಪಸ್ಥಿತಿ ಇರುವ ಪ್ರದೇಶದಲ್ಲಿದ್ದು, ಗ್ರಾಹಕರು ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಲಿದ್ದಾರೆ ಎಂದು ಬೆಂಝ್ ತಿಳಿಸಿದೆ.

ಈ ಶೋರೂಮ್‌ ನಲ್ಲಿ ಆರು ಕಾರುಗಳ ಪ್ರದರ್ಶನಕ್ಕೆ ಅವಕಾಶವಿದ್ದು, ವಾಹನ ವಿತರಣೆಗಾಗಿ ಪ್ರತ್ಯೇಕ ವ್ಯವಸ್ಥೆ ಇದೆ. ಖಾಸಗಿ ಮತ್ತು ಅರೆ- ಖಾಸಗಿ ಸಮಾಲೋಚನಾ ಸ್ಥಳಗಳು, ಆಕರ್ಷಕ ಲೈಫ್‌ ಸ್ಟೈಲ್ ಬೊಟಿಕ್ ವಸ್ತುಗಳು ಮತ್ತು ವಿಶೇಷ ವಿತರಣಾ ಸಂದರ್ಭಗಳಿಗೆ ಕೀ ಪ್ರೆಸೆಂಟರ್ ಸೌಲಭ್ಯವಿರುವ ಹ್ಯಾಂಡೋವರ್ ಬೇ ಸೇರಿದಂತೆ ಹಲವು ಐಷಾರಾಮಿ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ.

ವಿವಾ ಸ್ಟಾರ್ ಬೆಂಗಳೂರು ಸೇವಾ ಕೇಂದ್ರದ ಮುಖ್ಯಾಂಶಗಳು:

ಬೆಂಗಳೂರಿನ ಈ ಸೇವಾ ಕೇಂದ್ರವನ್ನು ಐಷಾರಾಮಿ ಗುಣಮಟ್ಟದ ಸೇವೆ, ತ್ವರಿತ ಕಾರ್ಯನಿರ್ವಹಣೆ ಮತ್ತು ತೊಂದರೆ ರಹಿತ ಮಾಲೀಕತ್ವದ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಸೇವಾ ಕೇಂದ್ರವು 16,600 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಗ್ರಾಹಕರಿಗೆ ವೈಯಕ್ತಿಕ ಕಾಳಜಿಯೊಂದಿಗೆ ಸೇವೆ ನೀಡಲು ಪ್ರಮಾಣೀಕೃತ ತಂತ್ರಜ್ಞರ ತಂಡವನ್ನು ಒಳಗೊಂಡಿದೆ.

ಈ ಸೇವಾ ಕೇಂದ್ರವು ಪಿಎಂಜಿಆರ್ (ಪ್ರಿವೆಂಟಿವ್ ಮೇಂಟೆನೆನ್ಸ್ ಮತ್ತು ಜನರಲ್ ರಿಪೇರಿ), ಬಾಡಿ ಮತ್ತು ಪೇಂಟ್ ಹಾಗೂ ಇತರ ಪೂರಕ ವಿಭಾಗಗಳನ್ನು ಒಳಗೊಂಡಂತೆ ಒಟ್ಟು 19 ವರ್ಕಿಂಗ್ ಬೇಗಳನ್ನು ಹೊಂದಿದೆ. ವಿಶೇಷವಾಗಿ ಇಲ್ಲಿ ಸಮಗ್ರವಾದ ಮಾರಾಟದ ನಂತರದ ಸೇವಾ ವಿಭಾಗ ದೊರೆಯಲಿದೆ.

ಗ್ರಾಹಕರು ಇಲ್ಲಿ ವಾಹನವನ್ನು ಸರ್ವೀಸ್ ಗಾಗಿ ಹಸ್ತಾಂತರಿಸಿದ ಸಮಯದಿಂದ ಹಿಡಿದು ವಾಪಸ್ ಪಡೆಯುವವರೆಗೆ, ಮುನ್ನೆಚ್ಚರಿಕೆಯ ನಿರ್ವಹಣೆ ಮತ್ತು ಸಾಮಾನ್ಯ ದುರಸ್ತಿಗಳ ಜೊತೆಗೆ ಸಂಪೂರ್ಣ ಬಾಡಿ ಮತ್ತು ಪೇಂಟ್ ಕೆಲಸಗಳನ್ನೂ ಒಳಗೊಂಡಂತೆ ಎಂಡ್ -ಟು -ಎಂಡ್ ಸೇವಾ ಸೌಲಭ್ಯವನ್ನು ನಿರೀಕ್ಷಿಸಬಹುದು. ಅಲ್ಲದೆ, ಅಸಲಿ ಬಿಡಿಭಾಗಗಳ ಸುಲಭ ಲಭ್ಯತೆಯನ್ನು ಒದಗಿಸಲು ಇಲ್ಲಿ ಪ್ರತ್ಯೇಕ ಒರಿಜಿನಲ್ ಬಿಡಿಭಾಗಗಳ ಸಂಗ್ರಹಣಾ ಪ್ರದೇಶವೂ ಇದೆ.

More from DriveSpark

Article Published On: Sunday, January 25, 2026, 13:16 [IST]
English summary
Mercedes benz inaugurates bengalurus latest luxury facility
Read more on mercedes benz india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+