ಹೊಸ ಹ್ಯುಂಡೈ ಎಸ್‌ಯುವಿಗೆ ಫುಲ್ ಡಿಮ್ಯಾಂಡ್: 1 ಲಕ್ಷ ಆರ್ಡರ್... ಡೆಲಿವರಿ ಫುಲ್ ಜೋರು!
ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ತನ್ನ ಹೊಚ್ಚ ಹೊಸ ಹುಂಡೈ ವೆನ್ಯೂ (Hyundai VENUE) ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಹೈ - ಪರ್ಫಾಮೆನ್ಸ್ ಮತ್ತು ವಿವಿಧ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಚ್ಚ ಹೊಸ ಹುಂಡೈ ವೆನ್ಯೂ ಈಗ ದಾಖಲೆಯ ಬುಕಿಂಗ್ಸ್ ಪಡೆದುಕೊಂಡಿದೆ. ಜೊತೆಗೆ ಕಂಪನಿ ಕೂಡ ಗ್ರಾಹಕರ ಮನಗೆಲ್ಲಲು ವೇಗವಾಗಿ ಡೆಲಿವರಿಗಳನ್ನು ನೀಡುತ್ತಿದೆ. ಈ ಕಾರಿಗೆ ಗ್ರಾಹಕರಿಂದ ಈ ಮಟ್ಟದ ಬೇಡಿಕೆ ವ್ಯಕ್ತವಾಗಲು ಹಲವು ಕಾರಗಳಿವೆ.
ಭಾರತದಲ್ಲಿ ಕಾರು ಖರೀದಿಸುವವರು ಒಬ್ಬೊಬ್ಬರು ಒಂದೊಂದು ರೀತಿಯ ಚಾಲನಾ ಅನುಭವ ಬಯಸುತ್ತಾರೆ. ಕೆವರಿಗೆ ಉತ್ತಮ ಮೈಲೇಜ್ ಬೇಕಿದ್ದರೆ, ಇನ್ನೂ ಕೆಲವರು ಹೈ-ಪರ್ಫಾಮೆನ್ಸ್ ಬಯಸುತ್ತಾರೆ. ಹಾಗೆಯೇ ಹೆಚ್ಚಿನ ಮಂದಿ ಪ್ರೀಮಿಯಂ ಹಾಗೂ ಸೌಕರ್ಯಯುತ ಪ್ರಯಾಣಕ್ಕೆ ಸೂಕ್ತ ಕಾರನ್ನು ಹುಡುಕುತ್ತಾರೆ. ಇದಕ್ಕೆ ತಕ್ಕಂತೆ ಹ್ಯುಂಡೈ ವೆನ್ಯೂ ವಿವಿಧ ಎಂಜಿನ್ ಆಯ್ಕೆ, ಆಧುನಿಕ ಫೀಚರ್ಸ್ ಹಾಗೂ ವಿಶಾಲವಾದ ಕ್ಯಾಬಿಕ್ ಹೊಂದಿದೆ.

ಪವರ್‌ಟ್ರೇನ್ ಆಯ್ಕೆಗಳು:
ಹೊಸ ಹ್ಯುಂಡೈ ವೆನ್ಯೂ ಕಪ್ಪಾ 1.2ಲೀ MPi ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ದೈನಂದಿನ ಚಾಲನೆಗೆ ಸೂಕ್ತವಾಗಿದ್ದು ಉತ್ತಮ ಮೈಲೇಜ್ ನೀಡುತ್ತದೆ. ಮತ್ತೊಂದು ಕಪ್ಪಾ 1.0ಲೀ ಟರ್ಬೊ GDi ಪೆಟ್ರೋಲ್ ಎಂಜಿನ್ ಹೆಚ್ಚು ಪವರ್ ಬಯಸುವವರಿಗೆ ಗರಿಷ್ಠ ಪರ್ಫಾಮೆನ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು ಐಡಲ್ ಸ್ಟಾಪ್ ಮತ್ತು ಗೋ (ISG) ನೊಂದಿಗೆ ಬರುತ್ತದೆ.
ಮೂರನೇಯದು U2 1.5ಲೀ CRDi ಡೀಸೆಲ್ ಎಂಜಿನ್ ಆಗಿದ್ದು, ಇದು ರಾಜಿ ಇಲ್ಲದ ಪರ್ಫಾಮೆನ್ಸ್ ಬಯಸುವವರಿಗಾಗಿ ವಿನ್ಯಾಸಗೊಳಿಸಲಾದ ಡೀಸೆಲ್ ಎಂಜಿನ್ ಆಗಿದೆ. ಅದ್ಭುತ ಮೈಲೇಜ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ. ಇದು ಹೊಸದಾಗಿ ಪರಿಚಯಿಸಲಾದ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಹೊಸ ಹುಂಡೈ ವೆನ್ಯೂ ಡೀಸೆಲ್ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೇಟೆಡ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ.

ಉತ್ತಮ ಸೌಕರ್ಯ ಮತ್ತು ಆಧುನಿಕ ಫೀಚರ್ಸ್:
ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಬ್ಬರಿಗೂ ವಿಶಾಲವಾದ ಸ್ಥಳಾವಕಾಶವನ್ನು ನೀಡುವ ಈ ಕಾರು, ಡ್ಯುಯಲ್ ಟೋನ್ ಲೆದರ್ ಸೀಟುಗಳನ್ನು ಹೊಂದಿದೆ. ಪ್ರೀಮಿಯಂ ಲೆದರ್ ಆರ್ಮ್‌ರೆಸ್ಟ್, ಡಿ-ಕಟ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರಿಕ್ 4-ವೇ ಡ್ರೈವರ್ ಸೀಟ್, 2-ಸ್ಟೆಪ್ ಒರಗುವ ಹಿಂಭಾಗದ ಸೀಟುಗಳು, ಫ್ರಂಟ್ ವೆಂಟಿಲೇಟೆಡ್ ಸೀಟುಗಳು ಹಾಗೂ ಹಿಂಭಾಗದ AC ವೆಂಟ್‌ಗಳನ್ನು ನೀಡಲಾಗಿದೆ.
ಆಧುನಿಕ ಫೀಚರ್‌ಗಳಾದ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವಾಯಿಸ್ ಎನೆಬಲ್ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್, ಬೋಸ್ ಪ್ರೀಮಿಯಂ ಸೌಂಡ್ 8 ಸ್ಪೀಕರ್ ಸಿಸ್ಟಮ್, ಸರೌಂಡ್ ವ್ಯೂ ಮಾನಿಟರ್ (SVM), ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ (BVM), ಓವರ್-ದಿ-ಏರ್ (OTA) ನವೀಕರಣ, 70 ಹುಂಡೈ ಬ್ಲೂ ಲಿಂಕ್ ಕನೆಕ್ಟ್ ನಂತಹ ಆಧುನಿಕ ಫಿಚರ್ಸ್ ಒಳಗೊಂಡಿದೆ.

1 ಲಕ್ಷ ಬುಕಿಂಗ್ ದಾಟಿದೆ:
ಪ್ರಸ್ತುತ ಟ್ರೆಂಡ್‌ಸೆಟ್ಟಿಂಗ್ ಕಾಂಪ್ಯಾಕ್ಟ್ SUV ಎಂದು ಗುರ್ತಿಸಿಕೊಂಡಿರುವ ಹೊಚ್ಚ ಹೊಸ ಹುಂಡೈ ವೆನ್ಯೂ 1 ಲಕ್ಷ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಆಧುನಿ ತಂತ್ರಜ್ಞಾನ, ವರ್ಧಿತ ಸೌಕರ್ಯ ಮತ್ತು ಹೈ-ಪರ್ಫಾಮೆನ್ಸ್ ನೀಡುವ ಮೂಲಕ ಅತ್ಯಾಧುನಿಕ ಮತ್ತು ಅನುಕೂಲಕರ ಚಾಲನಾ ಅನುಭವವನ್ನು ಬಯಸುವ ಗ್ರಾಹಕರಿಗೆ ಹುಂಡೈ ವೆನ್ಯೂ ಗ್ರಾಹಕರಲ್ಲಿ ಆಕರ್ಷಣೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ದೇಶದಲ್ಲಿ ಹುಂಡೈನ ವ್ಯಾಪಕ ಮಾರಾಟ ಮತ್ತು ಸರ್ವಿಸ್ ನೆಟ್‌ವರ್ಕ್ ಇರುವುದರಿಂದ ಗ್ರಾಹಕರು ಹೆಚ್ಚಾಗಿ ಈ ಕಾರನ್ನು ಖರೀದಿಸುತ್ತಿದ್ದಾರೆ. ಅಲ್ಲದೆ ಕೇವಲ ರೂ. 7.99 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಸಂಪೂರ್ಣ ಟಾಪ್ ಎಂಡ್ ವೇರಿಯೆಂಟ್ ಬಯಸುವವರು ರೂ. 15.69 ಲಕ್ಷ (ಎಕ್ಸ್ ಶೋರೂಂ) ಬೆಲೆಯ ವೆನ್ಯೂ ಎಸ್‌ಯುವಿಯನ್ನು ಖರೀದಿಸಬಹುದು.


Click it and Unblock the Notifications








