Hyundai: ಹೈ-ಪರ್ಫಾಮೆನ್ಸ್ ಪವರ್‌ಫುಲ್ ಹ್ಯುಂಡೈ ಕಾರು ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ಇಂದು ತನ್ನ ಹೊಸ ಹುಂಡೈ ವೆರ್ನಾ (Hyundai VERNA) ಬಿಡುಗಡೆ ಮಾಡಿದೆ. ನಿಜವಾದ ಕಾರು ಹೇಗಿರಬೇಕು ಎಂಬುದರ ಸಾರವನ್ನು ಹೊಸ 'ಹುಂಡೈ ವರ್ನಾ' ಪ್ರತಿನಿಧಿಸುತ್ತದೆ. ಸ್ಥಿರತೆ, ಗುಣಮಟ್ಟ ಮತ್ತು ಪ್ರೀಮಿಯಂ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೆ ನಿರ್ಮಾಣಗೊಂಡಿದೆ. ದಿಟ್ಟ ವಿನ್ಯಾಸ, ಸುಧಾರಿತ ಸುರಕ್ಷತೆ ಮತ್ತು ಉಲ್ಲಾಸಕರ ಪರ್ಫಾಮೆನ್ಸ್‌ನೊಂದಿಗೆ ಹೊಸ ಹುಂಡೈ ವರ್ನಾ ಭಾರತೀಯ ಗ್ರಾಹಕರಿಗೆ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ವಿಶಿಷ್ಟ ಆಕರ್ಷಣೆಯೊಂದಿಗೆ ಹೊರಹೊಮ್ಮಿರುವ ಹೊಸ ಹುಂಡೈ ವರ್ನಾ, ಉದ್ದವಾದ ವೀಲ್‌ಬೇಸ್ (2670 mm), ವಿಭಾಗದಲ್ಲಿಯೇ ಅತ್ಯಂತ ಅಗಲ (1765 mm) ಮತ್ತು ಉದ್ದ (4565 mm) ಹೊಂದಿರುವ ಉನ್ನತ ಕ್ಯಾಬಿನ್ ಒದಗಿಸುತ್ತದೆ. ಹೊಸ ಹುಂಡೈ ವೆರ್ನಾ ಆರಂಭಿಕ ಬೆಲೆಯು ರೂ. 10,98,400 ಎಕ್ಸ್‌ ಶೋರೂಂ ಇದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 18,25,400 ಎಕ್ಸ್‌ ಶೋರೂಂ ಇದೆ.

new-hyundai-verna-launched-at-starting-price-of-rs-1098400

ಹೊಸ ಹುಂಡೈ ವೆರ್ನಾ ವಿಶೇಷತೆಗಳು

ಪ್ರಮುಖ ಹೊಸ ಬಾಹ್ಯ ವರ್ಧನೆಗಳು: ಬ್ಲಾಕ್ ಕ್ರೋಮ್ ರೇಡಿಯೇಟರ್ ಗ್ರಿಲ್, ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಹೊಸ ಬಂಪರ್ ಡಿಸೈನ್, (ಮುಂಭಾಗ ಮತ್ತು ಹಿಂಭಾಗ), R16 (D= 405.6 ಮಿಮೀ) ಡೈಮಂಡ್ ಕಟ್ ಅಲಾಯ್ ವೀಲ್‌ಗಳೊಂದಿಗೆ ಹೊಸ ಹುಂಡೈ ವರ್ನಾದ ಪ್ರತಿಯೊಂದು ವಿನ್ಯಾಸ ಅಂಶಗಳು ಪ್ರೀಮಿಯಂ ಸೆಡಾನ್ ಆಗಿ ಅದರ ಗುರುತನ್ನು ಮತ್ತಷ್ಟು ಹೆಚ್ಚಿಸಿವೆ.

ಪ್ರೀಮಿಯಂ ಇಂಟೀರಿಯರ್: ಡಿ-ಕಟ್ ಸ್ಟೀರಿಂಗ್ ವೀಲ್, ಲೆದರೆಟ್ ಸೀಟ್ ಅಪ್ಹೋಲ್ಸ್ಟರಿ, ಎಲೆಕ್ಟ್ರಿಕ್ 8-ವೇ ಅಡ್ಜಸ್ಟಬಲ್ ಡ್ರೈವರ್ ಸೀಟ್, ಡ್ರೈವರ್ ಮೆಮೊರಿ ಸೀಟ್, ಪ್ಯಾಸೆಂಜರ್ ಸೀಟ್ ಎಲೆಕ್ಟ್ರಿಕ್ 4-ವೇ ಅಡ್ಜಸ್ಟಬಲ್, ಪ್ಯಾಸೆಂಜರ್ ಸೀಟ್ ಎಲೆಕ್ಟ್ರಿಕ್ ವಾಕ್-ಇನ್ ಡಿವೈಸ್, ಹಿಂಭಾಗದ ವಿಂಡೋ ಸನ್‌ಶೇಡ್, ವಿಭಾಗದಲ್ಲಿ 528 ಲೀಟರ್‌ಗಳ ಅತಿದೊಡ್ಡ ಬೂಟ್ ಸ್ಪೇಸ್ ಹೊಂದಿರುವ ಸ್ಮಾರ್ಟ್ ಟ್ರಂಕ್ ಒಳಗೊಂಡಿದೆ.

new-hyundai-verna-launched-at-starting-price-of-rs-1098400

ಇವಿಷ್ಟೆ ಅಲ್ಲದೆ ಆಂಬಿಯೆಂಟ್ ಲೈಟ್, ಟೈಪ್-ಸಿ ಯುಎಸ್‌ಬಿ ಪೋರ್ಟ್, ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, ಸ್ಲೈಡಿಂಗ್ ಆರ್ಮ್‌ರೆಸ್ಟ್ ಮತ್ತು ಸಂಯೋಜಿತ ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಮಧ್ಯದ ಆರ್ಮ್‌ರೆಸ್ಟ್ ಅನ್ನು ವರ್ಧಿಸಲಾಗಿದೆ. ಒಟ್ಟಾರೆ ಈ ವರ್ಧನೆಗಳು ಹೊಸ ಹುಂಡೈ ವರ್ನಾವನ್ನು ಪ್ರೀಮಿಯಂ, ಆರಾಮದಾಯಕ ಮತ್ತು ಇನ್-ಕ್ಯಾಬಿನ್ ಅನುಭವವನ್ನು ನೀಡುತ್ತವೆ.

ಆಧುನಿಕ ಫೀಚರ್ಸ್: ವಿಭಾಗದಲ್ಲಿಯೇ ಅತಿ ದೊಡ್ಡ ಡ್ಯುಯಲ್ 10.25 + 10.25 ಇಂಚಿನ ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಸರೌಂಡ್ ವ್ಯೂ ಮಾನಿಟರ್, ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್, ವೈರ್‌ಲೆಸ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪುಶ್ ಬಟನ್ ಸ್ಟಾರ್ಟ್‌ ಸ್ಮಾರ್ಟ್ ಕೀ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ನೀಡಲಾಗಿದೆ.

new-hyundai-verna-launched-at-starting-price-of-rs-1098400

ಹೈ-ಪರ್ಫಾಮೆನ್ಸ್ ಎಂಜಿನ್: 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು IVT (ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್) ಜೊತೆ ಜೋಡಿಯಾಗಿರುವ 1.5 l MPi ಪೆಟ್ರೋಲ್ ಎಂಜಿನ್ ಹಾಗೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಹೊಂದಿರುವ 1.5 l ಟರ್ಬೊ GDi ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿವೆ.

ಹೊಸ ಹುಂಡೈ VERNA ಈ ವಿಭಾಗದಲ್ಲಿಯೇ ಅತ್ಯಂತ ಪವರ್‌ಫುಲ್ 1.5 l ಟರ್ಬೊ GDi ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 160 PS ಗರಿಷ್ಠ ಪವರ್ ಮತ್ತು 253 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಸುಧಾರಿತ ಪವರ್‌ಟ್ರೇನ್ ಆಯ್ಕೆಗಳು ಗ್ರಾಹಕರಿಗೆ ರೋಮಾಂಚಕ ಪರ್ಫಾಮೆನ್ಸ್ ಮತ್ತು ಕಡಿಮೆ ಚಾಲನಾ ವೆಚ್ಚಗಳ ಸಾಟಿಯಿಲ್ಲದ ಮಿಶ್ರಣವನ್ನು ನೀಡುತ್ತದೆ ಎಂದು ಹ್ಯುಂಡೈ ಹೇಳಿದೆ.

ಸುಧಾರಿತ ಸುರಕ್ಷತೆ: ಪ್ರೀಮಿಯಂ ಸೆಡಾನ್ 75 ಕ್ಕೂ ಹೆಚ್ಚು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಟಾಪ್ ವೇರಿಯೆಂಟ್ 20 ವೈಶಿಷ್ಟ್ಯಗಳೊಂದಿಗೆ ಹುಂಡೈ ಸ್ಮಾರ್ಟ್‌ಸೆನ್ಸ್ ಲೆವೆಲ್ 2 ADAS, 7 ಏರ್‌ಬ್ಯಾಗ್‌ಗಳು, ಡ್ಯಾಶ್‌ಕ್ಯಾಮ್ ಒಳಗೊಂಡಿದೆ. ಇವು ವಾಹನದ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಹೊಸ ವೈಶಿಷ್ಟ್ಯಗಳಾಗಿವೆ.

ಹೊಸ ಹುಂಡೈ ವರ್ನಾ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ನೋಡುವುದಾದ್ರೆ, 6 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), VSM ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಫ್ರಂಟ್ ಡಿಸ್ಕ್ ಬ್ರೇಕ್‌ಗಳು, EBD ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್, ISOFIX, ಥೆಫ್ಟ್ ವಾರ್ನಿಂಗ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

More from DriveSpark

Article Published On: Monday, March 9, 2026, 13:59 [IST]
English summary
New hyundai verna launched at starting price of rs 1098400
Read more on hyundai new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+