Kia Seltos: ಇಂದೇ ಬಿಡುಗಡೆ.. ನೂತನ ಕಿಯಾ ಸೆಲ್ಟೋಸ್ ಕಾರಿನ ವೇರಿಯೆಂಟ್‌ವಾರು ಬೆಲೆ ವಿವರಗಳು
ಇಂದು 2026ರ ಹೊಸ ಕಿಯಾ ಸೆಲ್ಟೋಸ್ (Kia Seltos) ಎಸ್‌ಯುವಿ ಮಾರಾಟಕ್ಕೆ ಬಂದಿದೆ. ಈ ಕಾರು ರೂ.10,99 ಲಕ್ಷದಿಂದ ರೂ.19,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್‌ಟಿಇ, ಹೆಚ್‌ಟಿಇ (ಒ), ಹೆಚ್‌ಟಿಕೆ, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ (ಎ) ಹಾಗೂ ಜಿಟಿಎಕ್ಸ್ (ಎ) ಸೇರಿದಂತೆ ವಿವಿಧ ರೂಪಾಂತರಗಳೊಂದಿಗೂ ಲಭ್ಯವಿದೆ. ಡಿಸೆಂಬರ್ 11ರಿಂದಲೇ ಬುಕ್ಕಿಂಗ್ ಪ್ರಕ್ರಿಯೆಯೂ ಶುರುವಾಗಿದೆ. ಆಸಕ್ತರು ರೂ.25,000 ಮುಂಗಡ ಹಣ ಪಾವತಿಸಿ, ಸಮೀಪದ ಶೋರೂಂ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಕಾಯ್ದಿರಬಹುದು. ಇಲ್ಲಿ ನೂತನ 'ಸೆಲ್ಟೋಸ್' ಕಾರಿನ ವೇರಿಯೆಂಟ್‌ವಾರು ದರದ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಟಿ (ಮ್ಯಾನುವಲ್ ಟ್ರಾಸ್ಮಿಷನ್) ಮಾಡೆಲ್‌ಗಳು:
ಈ ಕಾರಿನ ಹೆಚ್‌ಟಿಇ ವೇರಿಯೆಂಟ್ ರೂ.10,99 ಲಕ್ಷ ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಹೆಚ್‌ಟಿಇ (ಒ) ರೂ.12.09 ಲಕ್ಷ, ಹೆಚ್‌ಟಿಕೆ ರೂ.13.09 ಲಕ್ಷ, ಹೆಚ್‌ಟಿಕೆ (ಒ) ರೂ.14.19 ಲಕ್ಷ, ಹೆಚ್‌ಟಿಎಕ್ಸ್ ರೂ.15.59 ಲಕ್ಷ ಹಾಗೂ ಹೆಚ್‌ಟಿಎಕ್ಸ್ (ಎ) ರೂ.16.69 ಲಕ್ಷ ದರವನ್ನು ಪಡೆದಿದೆ.

1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಸಿವಿಟಿ ಮಾಡೆಲ್‌ಗಳು:
ಇದರ ಹೆಚ್‌ಟಿಇ (ಒ) ವೇರಿಯೆಂಟ್ ರೂ.13.39 ಲಕ್ಷ ದರವನ್ನು ಒಳಗೊಂಡಿದೆ. ಜೊತೆಗೆ ಹೆಚ್‌ಟಿಕೆ ರೂ.14.39 ಲಕ್ಷ, ಹೆಚ್‌ಟಿಕೆ (ಒ) ರೂ.15.49 ಲಕ್ಷ, ಹೆಚ್‌ಟಿಎಕ್ಸ್ ರೂ.16.89 ಲಕ್ಷ, ಹೆಚ್‌ಟಿಎಕ್ಸ್ (ಎ) ರೂ.17.99 ಲಕ್ಷ, ಜಿಟಿಎಕ್ಸ್ ರೂ.18.39 ಲಕ್ಷ ಮತ್ತು ಜಿಟಿಎಕ್ಸ್ (ಎ) ರೂ.19.49 ಬೆಲೆಯನ್ನು ಹೊಂದಿದೆ.
1.5-ಲೀಟರ್ ಟರ್ಬೊ ಪೆಟ್ರೋಲ್ ಐಎಂಟಿ (ಮ್ಯಾನುವಲ್ ಟ್ರಾಸ್ಮಿಷನ್) ಮಾಡೆಲ್‌ಗಳು:
ಈ ಎಸ್‌ಯುವಿಯು ಕೇವಲ 3 ವೇರಿಯೆಂಟ್ ಆಯ್ಕೆಯಲ್ಲಿ ಮಾತ್ರ ಗ್ರಾಹಕರ ಲಭ್ಯವಿದೆ. ಹಾಗೆಯೇ ಹೆಚ್‌ಟಿಇ (ಒ) ರೂ.12.89 ಲಕ್ಷ ಬೆಲೆಯನ್ನು ಪಡೆದಿದೆ. ಹೆಚ್‌ಟಿಕೆ ರೂ.13.89 ಲಕ್ಷ ಹಾಗೂ ಹೆಚ್‌ಟಿಕೆ (ಒ) ರೂ.14.99 ಲಕ್ಷ ದರವನ್ನು ಒಳಗೂಂಡಿದೆ.
1.5-ಲೀಟರ್ ಟರ್ಬೊ ಪೆಟ್ರೋಲ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಮಾಡೆಲ್‌ಗಳು:
ಇದರ ಹೆಚ್‌ಟಿಕೆ (ಒ) ವೇರಿಯೆಂಟ್ ರೂ.16.29 ಲಕ್ಷ ದರವನ್ನು ಪಡೆದಿದೆ. ಅದೇ ರೀತಿಯಲ್ಲಿ ಹೆಚ್‌ಟಿಎಕ್ಸ್ ರೂ.17.69 ಲಕ್ಷ, ಹೆಚ್‌ಟಿಎಕ್ಸ್ (ಎ) ರೂ.18.79 ಲಕ್ಷ, ಜಿಟಿಎಕ್ಸ್ ರೂ.19.19 ಲಕ್ಷ ಮತ್ತು ಜಿಟಿಎಕ್ಸ್ (ಎ) ರೂ.19.99 ಲಕ್ಷ ಬೆಲೆಯನ್ನು ಹೊಂದಿದೆ.
1.5-ಲೀಟರ್ ಡಿಸೇಲ್ ಎಂಟಿ (ಮ್ಯಾನುವಲ್ ಟ್ರಾಸ್ಮಿಷನ್) ಮಾಡೆಲ್‌ಗಳು:
ಈ ಕಾರಿನ ಹೆಚ್‌ಟಿಇ ವೇರಿಯೆಂಟ್ ರೂ.12.59 ಲಕ್ಷ ಬೆಲೆಯನ್ನು ಒಳಗೊಂಡಿದೆ. ಹೆಚ್‌ಟಿಇ (ಒ) ರೂ.13.69 ಲಕ್ಷ, ಹೆಚ್‌ಟಿಕೆ ರೂ.14.69 ಲಕ್ಷ, ಹೆಚ್‌ಟಿಕೆ (ಒ) ರೂ.15.79 ಲಕ್ಷ, ಹೆಚ್‌ಟಿಎಕ್ಸ್ ರೂ.17.19 ಲಕ್ಷ ಹಾಗೂ ಹೆಚ್‌ಟಿಎಕ್ಸ್ (ಎ) ರೂ.18.29 ಲಕ್ಷ ದರವನ್ನು ಪಡೆದಿದೆ.
1.5-ಲೀಟರ್ ಡಿಸೇಲ್ ಎಟಿ (ಆಟೋಮೆಟಿಕ್ ಟ್ರಾಸ್ಮಿಷನ್) ಮಾಡೆಲ್‌ಗಳು:
ಇದರ ಹೆಚ್‌ಟಿಇ (ಒ) ವೇರಿಯೆಂಟ್ ರೂ.14.99 ಲಕ್ಷ ದರವನ್ನು ಒಳಗೊಂಡಿದೆ. ಹೆಚ್‌ಟಿಕೆ ರೂ.15.99 ಲಕ್ಷ, ಹೆಚ್‌ಟಿಕೆ (ಒ) ರೂ.17.09 ಲಕ್ಷ, ಹೆಚ್‌ಟಿಎಕ್ಸ್ ರೂ.18.49 ಲಕ್ಷ, ಹೆಚ್‌ಟಿಎಕ್ಸ್ (ಎ) ರೂ.19.59 ಲಕ್ಷ, ಜಿಟಿಎಕ್ಸ್ ರೂ.19.79 ಲಕ್ಷ ಮತ್ತು ಜಿಟಿಎಕ್ಸ್ (ಎ) ರೂ.19.99 ಲಕ್ಷ ಬೆಲೆಯನ್ನು ಹೊಂದಿದೆ.
'ಕಿಯಾ ಸೆಲ್ಟೋಸ್' ವಿಶೇಷತೆಗಳೇನು:
ನೂತನ ಎಸ್‌ಯುವಿಯು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಪ್ರೊಜೆಕ್ಷನ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್-ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ. ಮಾರ್ನಿಂಗ್ ಹೇಸ್, ಮ್ಯಾಗ್ಮಾ ರೆಡ್, ಐವರಿ ಸಿಲ್ವರ್ ಗ್ಲೋಸ್, ಇಂಪೀರಿಯಲ್ ಬ್ಲೂ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.
ಈ ಕಾರು ಸಾಕಷ್ಟು ದೊಡ್ಡದಾಗಿದೆ. 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,690 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ದೂರದ ಊರುಗಳಿಗೆ ತೆರಳುವಾಗ ಹೆಚ್ಚಿನ ಲಗೇಜ್ ಸಾಗಿಸಲು 447 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಇದು ಇನ್ಫೋಟೈನ್‌ಮೆಂಟ್ ಸಿಸ್ಟಮ್ - ಡ್ರೈವರ್ಸ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್ ಸೆಟಪ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








