ಹೊಸ ಎಂಜಿ ಮೆಜೆಸ್ಟರ್ vs ಟೊಯೊಟಾ ಫಾರ್ಚುನರ್: ಇವೆರೆಡು ಆನೆ ಗಾತ್ರದ ಎಸ್‌ಯುವಿಗಳು.. ಯಾವುದು ಬೆಸ್ಟ್?

ದೇಶೀಯ ಮಾರುಕಟ್ಟೆಯಲ್ಲಿಂದು ನೂತನ ಎಂಜಿ ಮೆಜೆಸ್ಟರ್ (MG Majestor) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಇದಕ್ಕೆ ಟೊಯೊಟಾ ಫಾರ್ಚುನರ್ (Toyota Fortuner) ನೇರವಾದ ಎದುರಾಳಿಯಾಗಿದೆ. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ನಾವಿಲ್ಲಿ ಈ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬೆಲೆ (Price):

ಸದ್ಯಕ್ಕೆ 'ಎಂಜಿ ಮೆಜೆಸ್ಟರ್' ಬೆಲೆಯನ್ನು ಘೋಷಣೆ ಮಾಡಿಲ್ಲ. ಆದರೂ ರೂ.40 ಲಕ್ಷದಿಂದ ರೂ.45 ಲಕ್ಷ ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಹೊಸ 'ಟೊಯೊಟಾ ಫಾರ್ಚುನರ್' ರೂ.33.43 ಲಕ್ಷದಿಂದ ರೂ.51.44 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ ಫಾರ್ಚುನರ್‌ಗಿಂತ ಮೆಜೆಸ್ಟರ್ ಸ್ವಲ್ಪ ಮಟ್ಟಿಗೆ ದುಬಾರಿಯಾಗಿರಲಿದೆ ಎನ್ನಲಾಗಿದೆ.

New MG Majestor vs Toyota Fortuner Which Car Best Details

ವಿನ್ಯಾಸ (Design):

ಈ ಕಾರುಗಳು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿವೆ. ನೂತನ 'ಎಂಜಿ ಮೆಜೆಸ್ಟರ್' ಎಲ್ಇಡಿ ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು ಹಾಗೂ 19-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮೆಟಲ್ ಬ್ಲ್ಯಾಕ್, ಪರ್ಲ್ ವೈಟ್, ಮೆಟಲ್ ಆಶ್ ಮತ್ತು ಕಾಂಕ್ರೀಟ್ ಗ್ರೇ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

'ಟೊಯೊಟಾ ಫಾರ್ಚುನರ್' ಎಲ್ಇಡಿ ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗ‌ಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 20-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಪ್ಲಾಟಿನಂ ವೈಟ್ ಪರ್ಲ್, ಅವಾಂತ್ ಗಾರ್ಡ್ ಬ್ರೋನ್, ಆಟಿಟ್ಯೂಡ್ ಬ್ಲ್ಯಾಕ್, ಸೂಪರ್ ವೈಟ್, ಸಿಲ್ವರ್ ಮೆಟಾಲಿಕ್ ಮತ್ತು ಫ್ಯಾಂಟಮ್ ಬ್ರೌನ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

New MG Majestor vs Toyota Fortuner Which Car Best Details

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

'ಎಂಜಿ ಮೆಜೆಸ್ಟರ್' 6/ 7 ಆಸನಗಳನ್ನು ಹೊಂದಿದೆ. ಅದೇ ರೀತಿಯಲ್ಲಿ 'ಟೊಯೊಟಾ ಫಾರ್ಚುನರ್' 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 'ಮೆಜೆಸ್ಟರ್' 343 ಲೀಟರ್ ಹಾಗೂ 296 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):

ಇವೆರೆಡು ಎಸ್‌ಯುವಿಗಳು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿವೆ. 'ಎಂಜಿ ಮೆಜೆಸ್ಟರ್' ಏಕೈಕ 2.0-ಲೀ. ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 10 ರಿಂದ 12 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

'ಟೊಯೊಟಾ ಫಾರ್ಚುನರ್' 2.8-ಲೀ. ಮೈಲ್ಡ್ ಹೈಬ್ರಿಡ್ ಡೀಸೆಲ್, 2.8-ಲೀ. ಡೀಸೆಲ್ ಮತ್ತು 2.7-ಲೀ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 10.3 ರಿಂದ 14 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ.

ವೈಶಿಷ್ಟ್ಯಗಳು (Features):

'ಎಂಜಿ ಮೆಜೆಸ್ಟರ್' 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ತ್ರಿ-ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯಲ್ ವೈರ್‌ಲೆಸ್ ಚಾರ್ಜರ್‌ಗಳು ಹಾಗೂ 12-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾ ಒಳಗೊಂಡಿದೆ.

'ಟೊಯೊಟಾ ಫಾರ್ಚುನರ್' 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕಿಕ್-ಟು-ಓಪನ್ ಪವರ್ಡ್ ಟೈಲ್‌ಗೇಟ್, ಡುಯಲ್-ಜೋನ್ ಎಸಿ ಹಾಗೂ ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Thursday, February 12, 2026, 22:49 [IST]
English summary
New mg majestor vs toyota fortuner which car best details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+