Tata: ನಿನ್ನೆ ಬಿಡುಗಡೆಯಾಗಿದೆ ಸಣ್ಣ ಟಾಟಾ SUV: ಪ್ರತಿಯೊಬ್ಬರು ಖರೀದಿಸಬಹುದು, ಬೆಲೆ ಇಷ್ಟೇನಾ?

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಭಾರತದ ಪ್ರಮುಖ ಕಾರು ತಯಾರಕ ಟಾಟಾ ಮೋಟಾರ್ಸ್ (Tata Motors), ತನ್ನ ಜನಪ್ರಿಯ ಪಂಚ್ ಇವಿ (Punch.ev)ನ ಹೊಸ ಅವತಾರವನ್ನು ನಿನ್ನೆ (ಫೆ. 20) ಪರಿಚಯಿಸಿದೆ. ಕೈಗೆಟುಕುವ ಬೆಲೆ, ಅತ್ಯುತ್ತಮ ರೇಂಜ್, ಉತ್ತಮ ಚಾರ್ಜಿಂಗ್ ಅನುಕೂಲತೆ ಮತ್ತು ಬ್ಯಾಟರಿ ಭರವಸೆಯನ್ನು ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಪ್ಯಾಕೇಜ್ ನೀಡುತ್ತಿರುವುದಾಗಿ ಹೇಳಿದೆ. ಗ್ರಾಹಕರಿಗೆ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಖರೀದಿ ಸುಲಭವಾಗುವಂತೆ ತೀರಾ ಕಡಿಮೆ ಬೆಲೆಯಲ್ಲಿ ಫೇಸ್‌ಲಿಫ್ಟ್ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ. ಈ ಕಾರಿನ ಪ್ರಮುಖ ವಿಶೇಷತೆಗಳು ಇಲ್ಲಿವೆ.

ಕೇವಲ ರೂ. 9.69 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಟಾಟಾ ಪಂಚ್ ಇವಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬೆಲೆ ಕೂಡ ದುಬಾರಿ, ನಮಗೆ ಖರೀದಿಸಲು ಆಗುವುದಿಲ್ಲ ಎನ್ನುವವರಿಗೆ ಕೇವಲ ರೂ. 6.49 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುವ BaaS (ಬ್ಯಾಟರಿ ಆಸ್-ಎ-ಸರ್ವಿಸ್) ಆಯ್ಕೆಯನ್ನು ಸಹ ನೀಡುತ್ತಿದೆ. ಈ BaaS ಯೋಜನೆ ಅಡಿಯಲ್ಲಿ ಪ್ರತಿ ಕಿಲೋ ಮೀಟರ್‌ಗೆ ಕೇವಲ 2 ರೂಪಾಯಿ 60 ಪೈಸೆ ಬ್ಯಾಟರಿ EMI ಪಾವತಿಸಬೇಕಾಗುತ್ತದೆ.

new-punch-ev-price-features-battery-and-baas-details

ವಿವರವಾಗಿ ಹೇಳುವುದಾದರೆ, ರೂ. 6.49 ಲಕ್ಷ (ಎಕ್ಸ್‌ ಶೋರೂಂ) ಪಾವತಿಸಿ ಕಾರನ್ನು ಮನೆಗೆ ಕೊಂಡೊಯ್ಯಬಹುದು, ಆದರೆ ಬ್ಯಾಟರಿಯನ್ನು ಬಾಡಿಗೆ ಪಡೆಯಬೇಕಾಗುತ್ತದೆ. ಈ ಬ್ಯಾಟರಿಗೆ ಪ್ರತಿ ಕಿ.ಮೀಗೆ ರೂ. 2.6 ಪಾವತಿಸಬೇಕು. ಗ್ರಾಹಕರು ಬ್ಯಾಟರಿಗೆ ಮಾಸಿಕವಾಗಿ ಬಾಡಿಗೆಯನ್ನು ಪಾವತಿಸಬಹುದು, ಇದನ್ನು ಚಾಲನೆ ಮಾಡುವ ದೂರವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ.

ಹೊಸ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ ವಿಶೇಷತೆಗಳು

ಹೊಚ್ಚ ಹೊಸ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ 30 kWh ಹಾಗೂ 40 kWh ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ಖರೀದಿಗೆ ಲಭ್ಯವಿದೆ. 30 kWh ವೇರಿಯೆಂಟ್ ಬೆಲೆಯು ರೂ.9.69 ಲಕ್ಷ ಹಾಗೂ 40 kWh ವೇರಿಯೆಂಟ್ ಬೆಲೆ ರೂ.12.59 ಲಕ್ಷ (ಎಕ್ಸ್-ಶೋರೂಂ) ಇದೆ. ದೊಡ್ಡ 40 kWh ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿ 468 ಕಿ.ಮೀ ಓಡಿಸಬಹುದು ಹಾಗೆಯೇ ಸಣ್ಣ 30 kWh ಬ್ಯಾಟರಿಯಲ್ಲಿ 365 ಕಿ.ಮೀ ಓಡಿಸಬಹುದು.

new-punch-ev-price-features-battery-and-baas-details

ಫಾಸ್ಟ್ ಚಾರ್ಜಿಂಗ್ ಮೂಲಕ ಬ್ಯಾಟರಿಯು ಕೇವಲ 26 ನಿಮಿಷಗಳಲ್ಲಿ ಶೇ20 ರಿಂದ ಶೇ80 ವರೆಗೆ ತ್ವರಿತವಾಗಿ ಚಾರ್ಜ್ ಮಾಡಬಹುದು. ಇದಲ್ಲದೆ, ಇದು ಕೇವಲ 15 ನಿಮಿಷಗಳ ಚಾರ್ಜಿಂಗ್‌ನಲ್ಲಿ 135 ಕಿ.ಮೀ ಓಡಿಸಬಹುದು. ಹೊಸ ಪಂಚ್ ಇವಿ ಕಾರು ಅನಿಯಮಿತ ಕಿ.ಮೀಗಳನ್ನು ಒಳಗೊಂಡಿರುವ ಜೀವಮಾನದ HV ಬ್ಯಾಟರಿ ವಾರೆಂಟಿಯೊಂದಿಗೆ ಬರುತ್ತದೆ ಎಂದು ಟಾಟಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರೀಮಿಯಂ ಸೌಕರ್ಯ: ಹೊಸ ಪಂಚ್ ಇವಿನಲ್ಲಿ ಪ್ಲಶ್ ಲೆದರೆಟ್ ಅಲ್ಟ್ರಾ ಕಂಫರ್ಟ್ ಸೀಟುಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಏರ್ ಪ್ಯೂರಿಫೈಯರ್, ವಾಯ್ಸ್ ಅಸಿಸ್ಟೆಡ್ ಎಲೆಕ್ಟ್ರಿಕ್ ಸನ್‌ರೂಫ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಆಟೋ-ಡಿಮ್ಮಿಂಗ್ IRVM, 366 ಲೀ. ಬೂಟ್ ಸ್ಪೇಸ್ ಒದಗಿಸಲಾಗಿದೆ.

new-punch-ev-price-features-battery-and-baas-details

10.25 ಇಂಚಿನ ಇನ್ಫೋಟೈನ್‌ಮೆಂಟ್, 10 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೆ, ಕಾಕ್‌ಪಿಟ್‌ನಲ್ಲಿ ಎಂಬೆಡೆಡ್ ನ್ಯಾವಿಗೇಷನ್ ವ್ಯೂ, 6 ಭಾಷೆಗಳಲ್ಲಿ 200+ ವಾಯಿಸ್ ಕಮಾಂಡ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ರೈನ್ ಸೆನ್ಸಾರ್ ವೈಪರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ (PEPS) ನೊಂದಿಗೆ ಕೀ ಲೆಸ್ ಎಂಟ್ರಿ, ರಿಯರ್ ವೈಪರ್ ಮತ್ತು ಆಟೋ ಡಿಫೋಗರ್ ನೀಡಲಾಗಿದೆ.

ಸುರಕ್ಷತೆಗಾಗಿ 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ ಅನ್ನು ಹೊಂದಿದೆ.

More from DriveSpark

Article Published On: Saturday, February 21, 2026, 19:11 [IST]
English summary
New punch ev price features battery and baas details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+