Tata: ಬಿಡುಗಡೆಯೇ ಆಗಿಲ್ಲ.. ಹೊಸ ಅಗ್ಗದ ಟಾಟಾ ಎಸ್‌ಯುವಿ ಕುರಿತ ವೇರಿಯೆಂಟ್‌ವಾರು ಫೀಚರ್ಸ್‌ ಬಹಿರಂಗ, ಬೆಲೆ ಎಷ್ಟು?

ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಬಿಡುಗಡೆಗೊಳ್ಳುವುದಕ್ಕೆ 6 ದಿನ ಬಾಕಿಯಿದೆ. ಇದೊಂದು ಮೈಕ್ರೋ ಎಸ್‌ಯುವಿಯಾಗಿದ್ದು, ಜನವರಿ 13ರಂದು ಅದ್ದೂರಿಯಾಗಿ ಮಾರಾಟಕ್ಕೆ ಬರಲಿದೆ. ಸದ್ಯ, ಈ ಕಾರು ಸ್ಮಾರ್ಟ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಕಾಂಪ್ಲಿಶ್ಡ್ ಮತ್ತು ಅಕಾಂಪ್ಲಿಶ್ಡ್ ಪ್ಲಸ್ ಎಸ್ ಎಂಬ 6 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿಯು ಘೋಷಣೆ ಮಾಡಿದೆ. ಇವುಗಳು ಹೊಂದಿರುವ ವೈಶಿಷ್ಟ್ಯಗಳ ಬಗ್ಗೆಯೂ ಸಂಕ್ಷಿಪ್ತವಾದ ವಿವರಗಳನ್ನು ಬಹಿರಂಗಪಡಿಸಿದೆ.

ಸ್ಮಾರ್ಟ್ (Smart):

ಇದು ಆರಂಭಿಕ ಶ್ರೇಣಿ ರೂಪಾಂತರವಾಗಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಮಲ್ಟಿ-ಡ್ರೈವ್ ಮೋಡ್‌ಗಳು (ಸಿಟಿ & ಇಕೋ), 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರಿಮೋಟ್ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

New Tata Punch Facelift Suv Variant Wise Features Revealed Details

ಪ್ಯೂರ್ (Pure):

ಈ ರೂಪಾಂತರವು 'ಸ್ಮಾರ್ಟ್'ನಂತೆ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ರೇರ್ ಎಸಿ ವೆಂಟ್‌ಗಳು, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಇಂಟಿಗ್ರೇಟೆಡ್ ಸ್ಟೋರೇಜ್ ಬಾಕ್ಸ್‌, ಫ್ರಂಟ್ ಸೆಂಟ್ರಲ್ ಆರ್ಮ್‌ರೆಸ್ಟ್, ರೇರ್ ಡಿಫಾಗರ್, ಡೈ & ನೈಟ್ ಐಆರ್‌ವಿಎಂನ್ನು ಪಡೆದಿದೆ.

ಪ್ಯೂರ್ ಪ್ಲಸ್ (Pure Plus):

ಇದೊಂದು ಪ್ರಮುಖ ರೂಪಾಂತರವಾಗಿದೆ. 'ಪ್ಯೂರ್' ರೀತಿಯಲ್ಲಿಯೇ ಇದೆ. ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ರಿವರ್ಸ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಹೈಟ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಮತ್ತು ಟೈಪ್-ಸಿ ಫಾಸ್ಟ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

New Tata Punch Facelift Suv Variant Wise Features Revealed Details

ಅಡ್ವೆಂಚರ್ (Adventure):

ಈ ರೂಪಾಂತರವು 'ಪ್ಯೂರ್ ಪ್ಲಸ್'ಗೆ ಹೋಲಿಕೆಯಾಗುತ್ತದೆ. ಆದರೂ ಹೆಚ್ಚು ಪ್ರೀಮಿಯಂ ಆಗಿದೆ. 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರ್, ಪುಶ್-ಬಟನ್ ಸ್ಟಾರ್ಟ್‌, ಕೀಲೆಸ್ ಎಂಟ್ರಿ, ರೇರ್ ವೈಪರ್ & ವಾಷರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 15-ಇಂಚಿನ ಅಲಾಯ್‌ ವೀಲ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು ಹಾಗೂ ಆಟೋ ಹೆಡ್‌ಲೈಟ್‌ಗಳನ್ನು ಹೊಂದಿದೆ.

ಅಕಾಂಪ್ಲಿಶ್ಡ್ (Accomplished):

ಇದು 'ಅಡ್ವೆಂಚರ್' ರೂಪಾಂತರದ ಎಲ್ಲ ಗುಣಲಕ್ಷಣಗಳನ್ನು ಹೊಂದಿದೆ. ಅದರೊಂದಿಗೆ ದೊಡ್ಡ ಗಾತ್ರದ 16-ಇಂಚಿನ ಅಲಾಯ್‌ ವೀಲ್‌ಗಳು, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲ್ಇಡಿ ಡಿಆರ್‌ಎಲ್‌ಗಳು, ಕನೆಕ್ಟ್ಡ್ ಎಲ್ಇಡಿ ಟೈಲ್ ಲೈಟ್‌ಗಳು, ಮತ್ತು ಟಚ್ ಆಟೋಮೆಟಿಕ್ ಟೆಂಪರೇಚರ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

New Tata Punch Facelift Suv Variant Wise Features Revealed Details

ಅಕಾಂಪ್ಲಿಶ್ಡ್ ಪ್ಲಸ್ ಎಸ್ (Accomplished Plus S):

ಈ ಗರಿಷ್ಠ ಶ್ರೇಣಿ ರೂಪಾಂತರವು 'ಅಕಾಂಪ್ಲಿಶ್ಡ್' ಒಳಗೊಂಡಿರುವ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ವಾಯ್ಸ್ ಅಸಿಸ್ಟ್ ಸನ್‌ರೂಫ್, ಎಲ್ಇಡಿ ಫಾಗ್ ಲ್ಯಾಂಪ್‌ಗಳು, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಕನೆಕ್ಟ್ಡ್ ಕಾರ್ ಟೆಕ್ ಹಾಗೂ ಆಟೋ-ಡಿಮ್ಮಿಂಗ್ ಐಆರ್‌ವಿಎಂಯನ್ನು ತನ್ನದಾಗಿಸಿಕೊಂಡಿದೆ.

'ಟಾಟಾ ಪಂಚ್ ಫೇಸ್‌ಲಿಫ್ಟ್' ವಿಶೇಷತೆಗಳೇನು:

ಈ ಕಾರಿನ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎನ್ನಲಾಗಿದೆ. ಇದು ಬಲಿಷ್ಠವಾದ 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿರಲಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ. 19 ರಿಂದ 27 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ.

ನೂತನ 'ಪಂಚ್' ಎಸ್‌ಯುವಿ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ರೂ.6 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.

More from DriveSpark

Article Published On: Thursday, January 8, 2026, 8:30 [IST]
English summary
New tata punch facelift suv variant wise features revealed details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+