VinFast: ಇದೆ ತಿಂಗಳು ಹೊಸ 7-ಸೀಟರ್ ಕಾರು ಬಿಡುಗಡೆಗೆ ಸರ್ವ ಸಿದ್ಧ: ವಿಶೇಷತೆಗಳೇನು?
ವಿಯೆಟ್ನಾಂ ಮೂಲದ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ವಿನ್‌ಫಾಸ್ಟ್ ಹೊಸ 7-ಸೀಟರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಹೆಸರು 'ವಿನ್‌ಫಾಸ್ಟ್ ಲಿಮೊ ಗ್ರೀನ್' (VinFast Limo Green) ಎಂದು ಬ್ರ್ಯಾಂಡ್ ಧೃಡಪಡಿಸಿದೆ. ಈ ಹೊಸ 7-ಸೀಟರ್ ಎಲೆಕ್ಟ್ರಿಕ್ ಎಂಪಿವಿ ಆಗಿದ್ದು, ಭಾರತದಲ್ಲಿ ಪ್ರಸ್ತುತ ಈ ಕಾರಿನ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಮುಂಭಾಗದಲ್ಲಿ 2 ಆಸನಗಳು, ಮಧ್ಯದಲ್ಲಿ 3 ಆಸನಗಳು ಮತ್ತು ಮೂರನೇ ಸಾಲಿನಲ್ಲಿ 2 ಆಸನಗಳೊಂದಿಗೆ ಮೂರು-ಸಾಲಿನ ಆಸನಗಳನ್ನು ಹೊಂದಿದೆ. ಈ ಕಾರಿನ ಕುರಿತು ಇನ್ನೂ ಹೆಚ್ಚಿನ ಮಾಹಿರಿ ಇಲ್ಲಿದೆ.
ವಿನ್‌ಫಾಸ್ಟ್ ಲಿಮೊ ಗ್ರೀನ್ 7-ಸೀಟರ್ ಎಲೆಕ್ಟ್ರಿಕ್ MPV ಫೆಬ್ರವರಿ 2026 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಒಮ್ಮೆ ಬಿಡುಗಡೆಯಾದ ನಂತರ, ಕಿಯಾ ಕಾರೆನ್ಸ್ ಕ್ಲಾವಿಸ್ ಇವಿ ಮತ್ತು ಬಿವೈಡಿ ಇಮ್ಯಾಕ್ಸ್-7 ವಿರುದ್ಧ ಸ್ಪರ್ಧಿಸಲಿದೆ. ಮುಂಬರುವ ವಿನ್‌ಫಾಸ್ಟ್ ಲಿಮೊ ಗ್ರೀನ್ 7-ಸೀಟರ್ ಎಲೆಕ್ಟ್ರಿಕ್ ಎಂಪಿವಿಯ ಡಿಸೈನ್, ಫೀಚರ್ಸ್ ಮತ್ತು ಬ್ಯಾಟರಿ ಕುರಿತ ಮಾಹಿತಿಯನ್ನು ನೋಡೋಣ.

ಬ್ಯಾಟರಿ ಮತ್ತು ಫೀಚರ್ಸ್:
ವಿನ್‌ಫಾಸ್ಟ್ ಲಿಮೋ ಗ್ರೀನ್ ಎಲೆಕ್ಟ್ರಿಕ್ MPV 4-ವೀಲ್ ಡ್ರೈವ್ ಕಾನ್ಫಿಗರೇಶನ್ ಹೊಂದಿದ್ದು, 60.13 kWh ಬ್ಯಾಟರಿ ಪ್ಯಾಕ್ ಮೂಲಕ ಒಂದೇ ಚಾರ್ಜ್‌ನಲ್ಲಿ 450 ಕಿ.ಮೀ ರೇಂಜ್ ನೀಡಲಿದೆ. ಲಿಮೋ ಗ್ರೀನ್ 11 kW AC ಚಾರ್ಜಿಂಗ್ ಮತ್ತು 80 kW DC ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಇದು ABS, 4 ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಹೊಂದಿದೆ.
ಇದರ ಪವರ್‌ಫುಲ್ ಎಲೆಕ್ಟ್ರಿಕ್ ಮೋಟರ್ ಅನ್ನು ಮುಂಭಾಗದ ಆಕ್ಸಲ್ ನಲ್ಲಿ ಇರಿಸಲಾಗಿದ್ದು, 201 hp ಪವರ್ ಮತ್ತು 280 Nm ಟಾರ್ಕ್ ಉತ್ಪಾದಿಸುತ್ತದೆ. ವಿನ್‌ಫಾಸ್ಟ್‌ನ ಎಲೆಕ್ಟ್ರಿಕ್ MPV ಮುಂಭಾಗದಲ್ಲಿ 2 - ಆಸನಗಳು, ಮಧ್ಯದಲ್ಲಿ - 3 ಆಸನಗಳು ಮತ್ತು ಮೂರನೇ ಸಾಲಿನಲ್ಲಿ 2 - ಆಸನಗಳೊಂದಿಗೆ ಮೂರು-ಸಾಲಿನ ಆಸನಗಳನ್ನು ಹೊಂದಿದೆ.

ವಿನ್‌ಫಾಸ್ಟ್ ಲಿಮೋ ಗ್ರೀನ್ ಎಲೆಕ್ಟ್ರಿಕ್ MPV ಇಂಟೀರಿಯರ್‌ನಲ್ಲಿ ದೊಡ್ಡ 10.1 - ಇಂಚಿನ ಟಚ್ ಸ್ಕ್ರೀನ್ - ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿ ರೈಡ್ ಮೋಡ್‌ಗಳು, ಸಿಂಗಲ್ - ಝೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಮ್, USB ಟೈಪ್ - ಸಿ ಪೋರ್ಟ್ ಮತ್ತು ಇನ್ನೂ ಹೆಚ್ಚಿನವುಗಳಂತಹ ಹಲವಾರು ಸುಧಾರಿತ ಫೀಚರ್‌ಗಳೊಂದಿಗೆ ಬರುತ್ತದೆ ಎಂದು ತಿಳಿದುಬಂದಿದೆ.
ಡಿಸೈನ್ ಮತ್ತು ಆಯಾಮಗಳು
ಲಿಮೋ ಗ್ರೀನ್ ವಿನ್‌ಫಾಸ್ಟ್‌ನ ಮುಂಭಾಗದಲ್ಲಿ ಸಿಗ್ನೇಚರ್ ಶೈಲಿಯ V-ಆಕಾರದ DRL, ಇದರ ಕೆಳಗೆ ಇರಿಸಲಾದ ಲಂಬವಾದ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಏರ್ ಇಂಟೇಕ್‌ಗಳನ್ನು ಮುಂಭಾಗದ ಬಂಪರ್‌ಗೆ ಸಂಯೋಜಿಸಲಾಗಿದೆ. ಹಿಂಭಾಗದಲ್ಲಿ, ಇದು ಚಂಕ್‌ಬ್ಯಾಶ್ ಪ್ಲೇಟ್‌ನೊಂದಿಗೆ ಕನೆಕ್ಟೆಡ್ ಟೈಲ್‌ಲೈಟ್‌ಗಳನ್ನು ಮತ್ತು ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್‌ನೊಂದಿಗೆ ರೂಫ್ ಸ್ಪಾಯ್ಲರ್ ನೀಡಲಾಗಿದೆ.

ವಿನ್‌ಫಾಸ್ಟ್ ಲಿಮೋ ಗ್ರೀನ್ ಎಲೆಕ್ಟ್ರಿಕ್ MPV ಕಾರು ಗಾತ್ರದಲ್ಲಿ ದೊಡ್ಡದಾಗಿದ್ದು, 4,740mm ಉದ್ದ, 1872mm ಅಗಲ ಮತ್ತು 1,782mm ಎತ್ತರವನ್ನು ಹೊಂದಿದೆ. ಹಾಗೆಯೇ ಇದು 2,840mm ವೀಲ್‌ಬೇಸ್ ಅನ್ನು ಹೊಂದಿದೆ. ಒಟ್ಟಾರೆ 7 ಮಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಬಿಡುಗಡೆಯಾದ ನಂತರ ಈ ಕಾರು ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








