ದೇಶದ ಅತ್ಯಂತ ಅಗ್ಗದ 7-ಸೀಟರ್: ದೊಡ್ಡ ಕುಟುಂಬಕ್ಕೆ ಆರಾಮ ಪ್ರಯಾಣ: 19.6 ಕಿ.ಮೀ ಮೈಲೇಜ್

ಇತ್ತೀಚೆಗೆ ದೇಶದಲ್ಲಿ ನಿಸ್ಸಾನ್ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ 7-ಸೀಟರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಿದೆ. ಇದರ ಹೆಸರು ನಿಸ್ಸಾನ್ ಗ್ರಾವೈಟ್ (Nissan GRAVITE), ಇದು ಸದ್ಯ ಭಾರತದಲ್ಲಿ ಅತ್ಯಂತ ಕೈಗೆಟುಕುವ 7 - ಸೀಟರ್ ಕಾರಾಗಿದೆ. ಇದು 5 - ಸೀಟರ್, 6 - ಸೀಟರ್ ಹಾಗೂ 7 - ಸೀಟರ್ ಆಯ್ಕೆಗಳಲ್ಲಿ ಸಿಗಲಿದೆ. ಮತ್ತೊಂದು ಹೈಲೆಟ್ ಎಂದರೆ ಶೀಘ್ರದಲ್ಲೆ ಡೀಲರ್ ಮಟ್ಟದ ಸಿಎನ್‌ಜಿ ವೇರಿಯೆಂಟ್ ಕೂಡ ಬಿಡುಗಡೆಯಾಗಲಿದೆ. ಕಮ್ಮಿ ಬೆಲೆಯಲ್ಲಿ ಅತ್ಯುತ್ತಮ ಫ್ಯಾಮಿ ಕಾರು ಬಯಸುವವರಿಗೆ ಇದು ಬೆಸ್ಟ್ ಆಯ್ಕೆ ಎಂದು ಹೇಳಬಹದು.

ಪರ್ಫಾಮೆನ್ಸ್ ಹಾಗೂ ಐಷಾರಾಮಿ ಫೀಚರ್ಸ್ ಬಯಸದೆ, ಉತ್ತಮ ಪ್ರಯಾಣಕ್ಕೆ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ನೋಡುವವರು ಈ ಕಾರನ್ನು ಖರೀದಿಸಬಹುದು. ಒಟ್ಟು ಆರು ವೇರಿಯೆಂಟ್‌ಗಳಿದ್ದು, ಬೇಸ್‌ ವೇರಿಯೆಂಟ್ ಬೆಲೆಯು ಕೇವಲ ರೂ. 5,65,000 (ಎಕ್ಸ್‌ - ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 8,49,000 (ಎಕ್ಸ್‌ - ಶೋರೂಂ) ನಿಂದ ಪ್ರಾರಂಭವಾಗುತ್ತದೆ.

nissan-gravite-7-seater-mpv-price-features-engine

ನಿಸ್ಸಾನ್ ಗ್ರಾವೈಟ್ ವಿಶೇಷತೆಗಳು

ಸುರಕ್ಷತೆ: ಕಾರು ಕಡಿಮೆ ಬೆಲೆಯದ್ದಾಗಿದ್ದರೂ ಸುರಕ್ಷತೆಯ ವಿಷಯದಲ್ಲಿ ರಾಜಿಯಾಗದೆ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಲ್ - ಸ್ಟಾರ್ಟ್ ಅಸಿಸ್ಟ್ (HSA), ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ.

ಫೀಚರ್ಸ್: ಫ್ಲೋಟಿಂಗ್ 20.32 ಸೆಂ.ಮೀ ಇನ್ಫೋಟೈನ್‌ಮೆಂಟ್, 17.78 ಸೆಂ.ಮೀ ಫುಲ್ಲಿ ಡಿಜಿಟಲ್ ಅಡ್ವಾನ್ಸ್ಡ್ ಮಲ್ಟಿ-ಫಂಕ್ಷನಲ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್ಪ್ಲೇ ಸಂಪರ್ಕ, ವಾಕ್ ಅವೇ ಲಾಕ್ (WAL) ಮತ್ತು ಅಪ್ರೋಚ್ ಅನ್‌ಲಾಕ್ (AUL), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ವೈರ್‌ಲೆಸ್ ಚಾರ್ಜರ್, ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ ಆಟೋ ಎಲ್ಇಡಿ ಹೆಡ್‌ಲ್ಯಾಂಪ್ ಒದಗಿಸಲಾಗಿದೆ.

nissan-gravite-7-seater-mpv-price-features-engine

ಡಿಸೈನ್ ಮುಖ್ಯಾಂಶಗಳು: ಕ್ರಿಸ್ಟಲ್ ಎಡ್ಜ್ LED ಟೈಲ್ ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು, ವಿಶಿಷ್ಟ ಪಿಯಾನೋ ಬ್ಲ್ಯಾಕ್ 2D ಗ್ರಿಲ್, ಇಂಟಿಗ್ರೇಟೆಡ್ DRL ಗಳೊಂದಿಗೆ ಸಿಗ್ನೇಚರ್ LED ಹೆಡ್‌ಲ್ಯಾಂಪ್‌ಗಳು ಹಾಗೂ ಆಕರ್ಷಕ ರೂಫ್ ರೈಲ್‌ಗಳು, ವರ್ಧಿತ ಪ್ರಾಯೋಗಿಕತೆಗಾಗಿ ವಿಶಾಲವಾಗಿ ತೆರೆಯಬಲ್ಲ ಬಾಗಿಲುಗಳನ್ನು ನೀಡಲಾಗಿದೆ.

ಎಂಜಿನ್ ವಿಶೇಷತೆಗಳು: ಹೊಸ ನಿಸ್ಸಾನ್ ಗ್ರಾವೈಟ್ ಕಾರಿನಲ್ಲಿ 6250rpm ನಲ್ಲಿ 72PS ಪವರ್ ಹಾಗೂ 3400-3600rpm ನಲ್ಲಿ 96Nm ಪೀಕ್ ಟಾರ್ಕ್ ಹೊರಹಾಕುವ 1.0 ಲೀಟರ್ 3-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ EZ-ಶಿಫ್ಟ್ (AMT) ಗೇರ್‌ ಬಾಕ್ಸ್‌ ಆಯ್ಕೆಗಳನ್ನು ನೀಡಲಾಗಿದೆ. ಕಂಪನಿಯ ಪ್ರಕಾರ, ಪ್ರತಿ ಲೀಟರ್‌ಗೆ 19.6 ಕಿ.ಮೀ/ಲೀ (AT), 19.3 ಕಿ.ಮೀ/ಲೀ (MT) ಮೈಲೇಜ್ ನೀಡುತ್ತದೆ.

nissan-gravite-7-seater-mpv-price-features-engine

ಸುಲಭವಾಗಿ ತೆಗೆಯಬಹುದಾದ ಮೂರನೇ ಸಾಲಿನ ಸೀಟ್‌ಗಳು ಬೂಟ್ ಜಾಗವನ್ನು 625 ಲೀಟರ್‌ಗಳಿಗೆ ವಿಸ್ತರಿಸುತ್ತವೆ. ಅಂದರೆ 5-ಆಸನಗಳ ಸಂರಚನೆಯಲ್ಲಿ 625 ಲೀಟರ್ ಬೂಟ್, 6-ಆಸನಗಳ ಸಂರಚನೆಯಲ್ಲಿ 320 ಲೀಟರ್ ಹಾಗೂ 7-ಆಸನಗಳ ಸಂರಚನೆಯಲ್ಲಿ 84 ಲೀಟರ್ ಬೂಟ್ ಜಾಗವನ್ನು ನೀಡುತ್ತದೆ. 3 - ಸಾಲಿನಲ್ಲೂ AC ವೆಂಟ್‌ಗಳಿದ್ದು, ಎರಡನೇ ಸಾಲಿಗೆ ಪ್ರತ್ಯೇಕ ಕ್ಲೈಮೆಟ್ ಕಂಟ್ರೋಲ್‌ಗಳನ್ನು ನೀಡಲಾಗಿದೆ.

ಸೌಕರ್ಯಯುತ ಇಂಟೀರಿಯರ್: ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ನಿಸ್ಸಾನ್ ಗ್ರಾವೈಟ್, ಅಸಾಧಾರಣ ಕ್ಯಾಬಿನ್ ಸ್ಥಳಾವಕಾಶ ಮತ್ತು ಪ್ರವರ್ತಕ ಮಾಡ್ಯುಲಾರಿಟಿಯೊಂದಿಗೆ ದೊಡ್ಡ ಕುಟುಂಬಕ್ಕೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ. ಮೂರು ಸಾಲುಗಳಲ್ಲಿ 7 - ಸೀಟುಗಳೊಂದಿಗೆ ಲೆಥೆರೆಟ್ ಕ್ವಿಲ್ಟೆಡ್ ಆಸನಗಳು ಸೌಕರ್ಯವನ್ನು ಹೆಚ್ಚಿಸುತ್ತವೆ.

More from DriveSpark

Article Published On: Sunday, February 22, 2026, 16:20 [IST]
English summary
Nissan gravite 7 seater mpv price features engine
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+