Nissan: ಫೆಬ್ರವರಿ 17 ಮುಹೂರ್ತ ಫಿಕ್ಸ್: ಹೊಸ 7-ಸೀಟರ್ ಅನಾವರಣಕ್ಕೆ ಸಜ್ಜು: ತೀರ ಕಮ್ಮಿ ಬೆಲೆ
ಫೆಬ್ರವರಿ 17 ರಂದು ಅನಾವರಣಗೊಳ್ಳಲಿರುವ ನಿಸ್ಸಾನ್ ಗ್ರಾವೈಟ್ (Nissan Gravite) ಕಾರಿನ ಇಂಟೀರಿಯರ್ ಕುರಿತ ಮಾಹಿತಿಯನ್ನು ಇತ್ತೀಚೆಗೆ ಹೊಸ ಟೀಸರ್‌ನಲ್ಲಿ ಬಹಿರಂಗಪಡಿಸಲಾಗಿದೆ. ನಿರೀಕ್ಷೆಯಂತೆ, ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ಹೊಂದಿದ್ದು, ಬಾಗಿಲುಗಳಲ್ಲಿ ಬೀಜ್ ಬಣ್ಣದ ಇನ್ಸರ್ಟ್‌ಗಳನ್ನು ನೀಡಲಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್‌ನಲ್ಲಿ ಕ್ರೋಮ್ ಇನ್ಸರ್ಟ್‌ಗಳು, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್‌ಗಳನ್ನು ಬಹಿರಂಗಪಡಿಸಲಾಗಿದೆ. ಜೊತೆಗೆ ಹೊಸ ಟೀಸರ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಮತ್ತು ಕಾರನ್ನು AMT ಮತ್ತು MT ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.
ನಿಸ್ಸಾನ್ ಗ್ರಾವೈಟ್ ನಿರೀಕ್ಷೆಗಳು
ನಿಸ್ಸಾನ್ ಗ್ರಾವೈಟ್ ಸಬ್ - 4 ಮೀಟರ್ ಕಾಂಪ್ಯಾಕ್ಟ್ MPV ಆಗಿದ್ದು, ಇದೇ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ. ಹೊರಭಾಗವು ದಪ್ಪ ಮುಂಭಾಗದ ಗ್ರಿಲ್, ಆಕರ್ಷಕ ಬಂಪರ್, 15 - ಇಂಚಿನ ಅಲಾಯ್ ವೀಲ್‌ಗಳು ಮತ್ತು ನಯವಾದ LED ಟೈಲ್ - ಲ್ಯಾಂಪ್ ಗಳೊಂದಿಗೆ ಹೊಸ ನಿಸ್ಸಾನ್ ಹೊರಹೊಮ್ಮಲಿದೆ. 4 ಮೀಟರ್‌ಗಿಂತ ಕಡಿಮೆ ಉದ್ದವಿರಲಿರುವ ನಿಸ್ಸಾನ್ ಗ್ರಾವೈಟ್, ನಗರ ಪ್ರಯಾಣಿಕರು ಮತ್ತು ದೊಡ್ಡ ಕುಟುಂಬಗಳಿಗೆ ಆಕರ್ಷಕ ಕಾರಾಗಲಿದೆ.

ನಿರೀಕ್ಷಿತ ಬೆಲೆಯು ರೂ. 6.20 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ. ಮಾರ್ಚ್ 2026 ರಲ್ಲಿ ಮಾರುಕಟ್ಟೆಗೆ ಬರಲಿದೆ, ಇದರ ಬಿಡುಗಡೆ ಮೂಲಕ ನಿಸ್ಸಾನ್ ಬಜೆಟ್ ಸ್ನೇಹಿ MPV ವಾಹನ ವಿಭಾಗಕ್ಕೆ ದಿಟ್ಟ ಹೆಜ್ಜೆ ಇಡಲಿದೆ. ಇದು ರೆನಾಲ್ಟ್ ಟ್ರೈಬರ್‌ನ CMF-A+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಈ ಕಾರಿನೊಂದಿಗೆ, ನಿಸ್ಸಾನ್ ಹೆಚ್ಚಿನ ಪ್ರಮಾಣದ ಫ್ಯಾಮಿಲಿ ಕಾರು ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಗ್ರಾವೈಟ್, ಮ್ಯಾಗ್ನೈಟ್ ನಂತರ ನಿಸ್ಸಾನ್‌ನ ಎರಡನೇ ಪ್ರಮುಖ ಕಾರಾಗಿದೆ. ಎಂಜಿನ್ ವಿಷಯಕ್ಕೆ ಬಂದರೆ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು 72bhp ಪವರ್ ಮತ್ತು 96Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5, 6, ಅಥವಾ 7 ಪ್ರಯಾಣಿಕರಿಗೆ ಹೊಂದಿಕೊಳ್ಳುವ ಆಸನಗಳನ್ನು ನೀಡುತ್ತದೆ.

ಆಪ್ಟಿಮೈಸ್ಡ್ ಕಾರ್ಗೋ ಸ್ಥಳಕ್ಕಾಗಿ ಎರಡನೇ ಸಾಲಿನ ಸೀಟುಗಳನ್ನು ಸ್ಲೈಡಿಂಗ್ ಮಾಡುತ್ತದೆ - ಮೂರನೇ ಸಾಲನ್ನು ಮಡಚಿ 625 - ಲೀಟರ್‌ಗಳವರೆಗೆ ಬೂಟ್ ಪಡೆಯಬಹುದು. ಇದನ್ನು ಸುಲಭವಾದ ನಗರ ಡ್ರೈವ್‌ಗಳಿಗಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೇಟೆಡ್ ಟ್ರಾನ್ಸ್ ಮಿಷನ್ (AMT) ಗೆ ಜೋಡಿಸಲಾಗಿದೆ. ಈ ಎಂಜಿನ್ ಮೂಲಕ 18 ರಿಂದ 20 kmpl ಮೈಲೇಜ್ ನಿರೀಕ್ಷಿಸಲಾಗಿದೆ.
ಒಳಗೆ, ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿಯೊಂದಿಗೆ ಪ್ರೀಮಿಯಂ ಕ್ಯಾಬಿನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ 8 - ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪುಶ್-ಬಟನ್ ಸ್ಟಾರ್ಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ನಿರೀಕ್ಷಿಸಬಹುದು. ಹೊಸ ನಿಸ್ಸಾನ್ ಗ್ರಾವೈಟ್ ಭಾರತದ ದಟ್ಟಣೆಯ ರಸ್ತೆಗಳು ಮತ್ತು ದೀರ್ಘ ಹೆದ್ದಾರಿ ಪ್ರಯಾಣಗಳಿಗೆ ಸರಿಹೊಂದುತ್ತದೆ.
ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಉನ್ನತ ಟ್ರಿಮ್‌ಗಳಲ್ಲಿ 360 - ಡಿಗ್ರಿ ಕ್ಯಾಮೆರಾದೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ನಿಸ್ಸಾನ್ ಗ್ರಾವೈಟ್ MPV ಬಿಡುಗಡೆಯಾದ ನಂತರ, ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications