ನಿಸ್ಸಾನ್ ಗ್ರಾವೈಟ್ vs ಮಾರುತಿ ಸುಜುಕಿ ಎರ್ಟಿಗಾ: ಅಗ್ಗದ ಎಂಪಿವಿಗಳಿವು.. ಯಾವುದು ಬೆಸ್ಟ್?

ಈಚೆಗೆ ನಿಸ್ಸಾನ್ ಗ್ರಾವೈಟ್ (Nissan Gravite) ಎಂಪಿವಿಯನ್ನು ಬಿಡುಗಡೆಗೊಳಿಸಲಾಯಿತು. ಇದಕ್ಕೆ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ನೇರವಾದ ಎದುರಾಳಿಯಾಗಿದೆ. ಇವೆರೆಡು ಕಾರುಗಳು ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಲೆ (Price):

ಹೊಚ್ಚ ಹೊಸ ನಿಸ್ಸಾನ್ ಗ್ರಾವೈಟ್ ರೂ.5.65 ಲಕ್ಷದಿಂದ ರೂ.8.93 ಲಕ್ಷ ದರವನ್ನು ಪಡೆದಿದೆ. ಅದೇ ರೀತಿಯಲ್ಲಿ ಮಾರುತಿ ಎರ್ಟಿಗಾ ರೂ.8.80 ಲಕ್ಷದಿಂದ ರೂ.12.94 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ ಎರ್ಟಿಗಾಗಿಂತ ಗ್ರಾವೈಟ್ ತುಂಬಾ ಅಗ್ಗವಾಗಿದೆ.

Nissan Gravite vs Maruti Suzuki Ertiga Which Car Best Details

ವಿನ್ಯಾಸ (Design):

ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಅದ್ಭುತವಾದ ವಿನ್ಯಾಸವನ್ನು ಒಳಗೊಂಡಿವೆ. ನಿಸ್ಸಾನ್ ಗ್ರಾವೈಟ್ ಉತ್ತಮವಾದ ಸಿಗ್ನೇಚರ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 15-ಇಂಚಿನ ವೀಲ್‌ಗಳನ್ನು ಪಡೆದಿದೆ. ಫಾರೆಸ್ಟ್ ಗ್ರೀನ್, ಓನಿಕ್ಸ್ ಬ್ಯ್ಲಾಕ್, ಮೆಟಾಲಿಕ್ ಗ್ರೇ, ಬ್ಲೇಡ್ ಸಿಲ್ವರ್ ಮತ್ತು ಸ್ಟಾರ್ಮ್ ವೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 182 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,636 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

ಮಾರುತಿ ಎರ್ಟಿಗಾದ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಮೆಟಾಲಿಕ್ ಮ್ಯಾಗ್ಮಾ, ಪರ್ಲ್ ಮೆಟಾಲಿಕ್ ಆಬರ್ನ್ ರೆಡ್, ಪರ್ಲ್ ಮೆಟಾಲಿಕ್ ಆಕ್ಸ್‌ಫರ್ಡ್ ಬ್ಲೂ, ಡಿಗ್ನಿಟಿ ಬ್ರೌನ್, ಪರ್ಲ್ ಆರ್ಕ್ಟಿಕ್ ವೈಟ್ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,740 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Nissan Gravite vs Maruti Suzuki Ertiga Which Car Best Details

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಈ ಎಂಪಿವಿಗಳು 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ಗ್ರಾವೈಟ್ ಸಣ್ಣದಾಗಿರುವ 84 ಲೀಟರ್ ಹಾಗೂ ಎರ್ಟಿಗಾ ದೊಡ್ಡದಾದ 209 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):

ನಿಸ್ಸಾನ್ ಗ್ರಾವೈಟ್ ಹಾಗೂ ಮಾರುತಿ ಸುಜುಕಿ ಎರ್ಟಿಗಾಗಳು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿವೆ. ಗ್ರಾನೈಟ್ ಕಾರು, 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 19.6 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ.

ಎರ್ಟಿಗಾ ಎಂಪಿವಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 20 ರಿಂದ 26 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಗ್ರಾವೈಟ್‌ಗಿಂತ ಎರ್ಟಿಗಾವು ಹೆಚ್ಚು ದೂರ ಕ್ರಮಿಸಬಲ್ಲದು.

ವೈಶಿಷ್ಟ್ಯಗಳು (Features):

ಇವೆರೆಡು ಕಾರುಗಳು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿವೆ. ಗ್ರಾವೈಟ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಮ್ಯಾನುವಲ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಹಾಗೂ ಹಿಲ್ ಅಸಿಸ್ಟ್‌ನ್ನು ಒಳಗೊಂಡಿದೆ.

ಎರ್ಟಿಗಾ ಎಂಪಿವಿಯು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್ಸ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆದಿದೆ.

More from DriveSpark

Article Published On: Friday, February 20, 2026, 18:26 [IST]
English summary
Nissan gravite vs maruti suzuki ertiga which car best details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+