Nissan: ಇಂದು ಹೊಸ 7-ಸೀಟರ್ MPV ಬಿಡುಗಡೆ: ಮುಗಿಬಿದ್ದ ಜನ... ಬೆಲೆ ಬರೀ ಇಷ್ಟೇನಾ?
ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ನಿಸ್ಸಾನ್ ಮೋಟಾರ್ ಇಂಡಿಯಾ, ಇಂದು 5.65 ಲಕ್ಷ ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಹೊಚ್ಚ ಹೊಸ 7-ಸೀಟರ್ ಗ್ರಾವೈಟ್ (Nissan GRAVITE) ಎಂಪಿವಿಯನ್ನು ಬಿಡುಗಡೆ ಮಾಡಿದೆ. ಹೊಸ ಗ್ರಾವೈಟ್ ತನ್ನ ವಿಭಾಗದಲ್ಲಿ ವಿಶಿಷ್ಟವಾದ ಹುಡ್ ಬ್ರ್ಯಾಂಡಿಂಗ್ ಜೊತೆಗೆ ವಿಶಿಷ್ಟವಾದ ಹಿಂಭಾಗದ ಬಾಗಿಲಿನ ಬ್ಯಾಡ್ಜಿಂಗ್ ಅನ್ನು ಹೊಂದಿರುವ ಏಕೈಕ ವಾಹನವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ನಿಸ್ಸಾನ್‌ನ ಸಿಗ್ನೇಚರ್ C-ಆಕಾರದ ವಿನ್ಯಾಸ ಏಕೀಕರಣವು ಅದರ ಗುರುತಿನ ಕೇಂದ್ರವಾಗಿದ್ದು, ಪ್ರೀಮಿಯಂ ಲುಕ್ ನೀಡುತ್ತದೆ ಎಂದು ನಿಸ್ಸಾನ್ ಹೇಳಿದೆ.
ಬಾಹ್ಯ ಡಿಸೈನ್ ಮುಖ್ಯಾಂಶಗಳು: ಆಲ್-ರೌಂಡ್ LED ಲೈಟ್‌ಗಳು, ಇಂಟಿಗ್ರೇಟೆಡ್ DRL ಗಳೊಂದಿಗೆ ಸಿಗ್ನೇಚರ್ LED ಹೆಡ್‌ಲ್ಯಾಂಪ್‌ಗಳು, ಕ್ರಿಸ್ಟಲ್ ಎಡ್ಜ್ LED ಟೈಲ್ ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು, ವಿಶಿಷ್ಟ ಪಿಯಾನೋ ಬ್ಲ್ಯಾಕ್ 2D ಗ್ರಿಲ್, ಆಕರ್ಷಕ ರೂಫ್ ರೈಲ್‌ಗಳು, ವರ್ಧಿತ ಪ್ರಾಯೋಗಿಕತೆಗಾಗಿ ವಿಶಾಲವಾಗಿ ತೆರೆಯಬಲ್ಲ ಬಾಗಿಲುಗಳನ್ನು ನೀಡಲಾಗಿದೆ.

ಸೌಕರ್ಯಯುತ ಇಂಟೀರಿಯರ್: ನಿಸ್ಸಾನ್ ಗ್ರಾವೈಟ್ ಅಸಾಧಾರಣ ಕ್ಯಾಬಿನ್ ಸ್ಥಳಾವಕಾಶ ಮತ್ತು ಪ್ರವರ್ತಕ ಮಾಡ್ಯುಲಾರಿಟಿಯೊಂದಿಗೆ ದೊಡ್ಡ ಕುಟುಂಬಕ್ಕೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ. ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ಈ ಕಾರು, ಮೂರು ಸಾಲುಗಳಲ್ಲಿ 7-ಸೀಟುಗಳೊಂದಿಗೆ ಲೆಥೆರೆಟ್ ಕ್ವಿಲ್ಟೆಡ್ ಆಸನಗಳು ಸೌಕರ್ಯವನ್ನು ಹೆಚ್ಚಿಸುತ್ತವೆ.
ಸುಲಭವಾಗಿ ತೆಗೆಯಬಹುದಾದ ಮೂರನೇ ಸಾಲಿನ ಸೀಟ್‌ಗಳು ಬೂಟ್ ಜಾಗವನ್ನು 625 ಲೀಟರ್‌ಗಳಿಗೆ ವಿಸ್ತರಿಸುತ್ತವೆ. ಅಂದರೆ 5-ಆಸನಗಳ ಸಂರಚನೆಯಲ್ಲಿ 625 ಲೀಟರ್ ಬೂಟ್, 6-ಆಸನಗಳ ಸಂರಚನೆಯಲ್ಲಿ 320 ಲೀಟರ್ ಹಾಗೂ 7-ಆಸನಗಳ ಸಂರಚನೆಯಲ್ಲಿ 84 ಲೀಟರ್ ಬೂಟ್ ಜಾಗವನ್ನು ನೀಡುತ್ತದೆ. 3-ಸಾಲಿನಲ್ಲೂ AC ವೆಂಟ್‌ಗಳಿದ್ದು, ಎರಡನೇ ಸಾಲಿಗೆ ಪ್ರತ್ಯೇಕ ಕ್ಲೈಮೆಟ್ ಕಂಟ್ರೋಲ್‌ಗಳನ್ನು ನೀಡಲಾಗಿದೆ.

ಪ್ರಮುಖ ಫೀಚರ್ಸ್ ಮತ್ತು ಸುರಕ್ಷತೆ
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್ಪ್ಲೇ ಸಂಪರ್ಕದೊಂದಿಗೆ ಫ್ಲೋಟಿಂಗ್ 20.32 ಸೆಂ.ಮೀ ಇನ್ಫೋಟೈನ್‌ಮೆಂಟ್, 17.78 ಸೆಂ.ಮೀ ಫುಲ್ಲಿ ಡಿಜಿಟಲ್ ಅಡ್ವಾನ್ಸ್ಡ್ ಮಲ್ಟಿ-ಫಂಕ್ಷನಲ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ ಆಟೋ ಎಲ್ಇಡಿ ಹೆಡ್‌ಲ್ಯಾಂಪ್, ವಾಕ್ ಅವೇ ಲಾಕ್ (WAL) ಮತ್ತು ಅಪ್ರೋಚ್ ಅನ್‌ಲಾಕ್ (AUL), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಒದಗಿಸಲಾಗಿದೆ.
ಸುರಕ್ಷತೆಯ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಲ್-ಸ್ಟಾರ್ಟ್ ಅಸಿಸ್ಟ್ (HSA), ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ. ಒಟ್ಟಾರೆ ಈ ವೈಶಿಷ್ಟ್ಯಗಳು ಪ್ರಯಾಣಿಕರ ರಕ್ಷಣೆಯನ್ನು ಖಚಿತಪಡಿಸುತ್ತವೆ.

ಎಂಜಿನ್ ವಿಶೇಷತೆಗಳು
ಹೊಸ ನಿಸ್ಸಾನ್ ಗ್ರಾವೈಟ್ ಕಾರಿನಲ್ಲಿ 1.0 ಲೀಟರ್ 3-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 6250rpm ನಲ್ಲಿ 72PS ಪವರ್ ಹಾಗೂ 3400-3600rpm ನಲ್ಲಿ 96Nm ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ EZ-ಶಿಫ್ಟ್ (AMT) ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಕಂಪನಿಯ ಪ್ರಕಾರ, ಪ್ರತಿ ಲೀಟರ್‌ಗೆ 19.6 ಕಿ.ಮೀ/ಲೀ (AT), 19.3 ಕಿ.ಮೀ/ಲೀ (MT) ಮೈಲೇಜ್ ನೀಡುತ್ತದೆ.
ಬೆಲೆ ಮತ್ತು ವೇರಿಯೆಂಟ್: ಒಟ್ಟು ಆರು ವೇರಿಯೆಂಟ್‌ಗಳಿದ್ದು, ವಿಸಿಯಾ ವೇರಿಯೆಂಟ್ ಬೆಲೆಯು ರೂ. 5,65,000, ಅಸೆಂಟಾ ಬೆಲೆ ರೂ. 6,59,000, ಎನ್-ಕನೆಕ್ಟಾ ಬೆಲೆ ರೂ. 7,20,000, ಟೆಕ್ನಾ ಬೆಲೆ ರೂ. 7,91,000, ಎನ್-ಕನೆಕ್ಟಾ AMT ಬೆಲೆ ರೂ.7,80,000 ಹಾಗೂ ಟೆಕ್ನಾ AMT ಬೆಲೆ ರೂ. 8,49,000 ಇದೆ. ಬುಕಿಂಗ್‌ಗಳು ಇಂದು ತೆರೆದಿವೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.


Click it and Unblock the Notifications








