ಆಫ್-ರೋಡ್ ಸಾಮರ್ಥ್ಯದ ಎಸ್‌ಯುವಿಗಳನ್ನು ಖರೀದಿಸುವ ಪ್ಲಾನ್ ಇದೆಯೇ? ಇವನ್ನೊಮ್ಮೆ ನೋಡಿ
ಭಾರತದಲ್ಲಿ ಆಫ್-ರೋಡಿಂಗ್ ಕಾರುಗಳಿಗೆ ತುಂಬಾ ಬೇಡಿಕೆಯಿದೆ, ಉತ್ಸಾಹಿಗಳು ಮಾರುಕಟ್ಟೆಯಲ್ಲಿರುವ ಅತ್ಯಂತ ಕಠಿಣ SUV ಗಳನ್ನು ಹೆಚ್ಚಾಗಿ ಹುಡುಕುತ್ತಾರೆ. ಎಲ್ಲಿ ಬೇಕಾದರೂ ಮುನ್ನುಗ್ಗುವ ಹಾಗೂ ಸವಾಲಿನ ಎಲ್ಲಾ ಭೂಪ್ರದೇಶಗಳಲ್ಲಿ ಸಾಮರ್ಥ್ಯವನ್ನು ತೋರುವ ಆಫ್‌ರೋಡಿಂಗ್ ಎಸ್‌ಯುಗಳನ್ನು ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಆದರೆ ಇವುಗಳ ಬೆಲೆಗಳು ತುಸು ಹೆಚ್ಚಿರುವತ್ತವೆ, ಹಾಗೆಂದು ಖರೀದಿಸಲು ಸಾಧ್ಯವೇ ಇಲ್ಲ ಎಂದೇನಲ್ಲ. ನಿಮ್ಮ ಬಜೆಟ್ ಬೆಲೆಯಲ್ಲೂ ಒಂದಷ್ಟು ಆಫ್‌ರೋಡಿಂಗ್ ಕಾರುಗಳು ಭಾರತದಲ್ಲಿ ಖರೀದಿಗೆ ಸಿಗುತ್ತವೆ. ಬಜೆಟ್ ಬೆಲೆಯಲ್ಲಿ ಸಿಗುವ ನಾಲ್ಕು ಪ್ರಮುಖ ಆಫ್‌ರೋಡ್ ವಾಹನಗಳ ಪಟ್ಟಿ ಇಲ್ಲಿದೆ.
ಮಾರುತಿ ಸುಜುಕಿ ಜಿಮ್ನಿ: ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಪ್ರಸ್ತುತ ರೂ. 12.32 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಕಾರು ಜಾಗತಿಕವಾಗಿ ಜನಪ್ರಿಯವಾಗಿದೆ, ಆಫ್-ರೋಡ್ ಸಾಮರ್ಥ್ಯಗಳಲ್ಲಿಯೂ ಸೈ ಎನ್ನಿಸಿಕೊಂಡಿದೆ. ಇದು ಕಠಿಣ ಭೂಪ್ರದೇಶದಲ್ಲಿ ಸಹಾಯ ಮಾಡುವ ರಿಜಿಡ್ ಆಕ್ಸಲ್ ಸಸ್ಪೆನ್ಷನ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಜಿಮ್ನಿ ವಿಶ್ವಾಸಾರ್ಹ 1.5-ಲೀಟರ್ K15B ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ ಹೊಂದಿದ್ದು, ಇದು 105 hp ಪವರ್ ಮತ್ತು 134 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಇದು ಬ್ರ್ಯಾಂಡ್‌ನ ALLGRIP Pro 4x4 ಸಿಸ್ಟಮ್‌ನೊಂದಿಗೆ AT ಮತ್ತು MT ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ.
ಮಹೀಂದ್ರಾ ಬೊಲೆರೊ ಕ್ಯಾಂಪರ್: ಮಹೀಂದ್ರಾ ಬೊಲೆರೊ ಕ್ಯಾಂಪರ್ ಸಂಫುರ್ಣ ಆಫ್‌ರೋಡ್ ವಾಹನವಲ್ಲದಿದ್ದರೂ, ಬಹುತೇಕ ಆಫ್‌ರೋಡ್ ಸಾಮರ್ಥ್ಯಗಳನ್ನು ಹೊಂದಿದೆ. ಇದು ಪಿಕಪ್ ಟ್ರಕ್ ಆಗಿದ್ದು, 2.7-ಲೀಟರ್ m2DiCR ಎಂಜಿನ್ ಹೊಂದಿದೆ, 75 hp ಪವರ್ ಮತ್ತು 200 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ವಾಹನವು 4x4 ಅನ್ನು ನೀಡುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಜನಪ್ರಿಯ ಆಯ್ಕೆಯಾಗಿದೆ.

ಮಹೀಂದ್ರಾ ಥಾರ್ ರಾಕ್ಸ್: ಮಹೀಂದ್ರಾ ಥಾರ್ ರಾಕ್ಸ್ ರೂ. 12.39 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬರುತ್ತದೆ. ಟಾಪ್ ವೇರಿಯೆಂಟ್ ರೂ. 22.25 ಲಕ್ಷ (ಎಕ್ಸ್-ಶೋರೂಂ) ವರೆಗೆ ಹೋಗುತ್ತದೆ. ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಆಫ್-ರೋಡ್ ಸಾಮರ್ಥ್ಯದ SUV ಗಳಲ್ಲಿ ಒಂದಾಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ನೀಡುತ್ತದೆ.
ಜೊತೆಗೆ ಮಹೀಂದ್ರಾ ಥಾರ್ ರಾಕ್ಸ್ 4x4 ಆಯ್ಕೆಯು 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದೆ, ಇದು 171 hp ಪವರ್ ಮತ್ತು 370 Nm ಪೀಕ್ ಟಾರ್ಕ್ ಹೊರಹಾಕುತ್ತದೆ. MT ಮತ್ತು AT ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಇದು ವಿವಿಧ ಭೂಪ್ರದೇಶಗಳಲ್ಲಿ ಸುಲಭವಾಗಿ ಮುನ್ನುಗ್ಗಬಲ್ಲ ರಗಡ್ ಎಸ್‌ಯುವಿ ಎಂದು ಜನಪ್ರಿಯತೆ ಪಡೆದಿದೆ.

ಫೋರ್ಸ್ ಗೂರ್ಖಾ: ಫೋರ್ಸ್ ಗೂರ್ಖಾ ರೂ. 17.26 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು ಮರ್ಸಿಡಿಸ್‌ನಿಂದ ಪಡೆದ 2.6-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 140 hp ಪವರ್ ಮತ್ತು 320 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 18-ಇಂಚಿನ ವೀಲ್‌ಗಳು ಮತ್ತು ಇಂಡಿಪೆಂಡೆಂಟ್ ಡಬಲ್-ವಿಷ್‌ಬೋನ್ ಫ್ರಂಟ್ ಸಸ್ಪೆನ್ಷನ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








