ಕಾರು ಖರೀದಿ ಗೊಂದಲವೇ? 12 ಲಕ್ಷದೊಳಗೆ ಸಿಗುವ ಪ್ರೀಮಿಯಂ ಪವರ್‌ಫುಲ್ ಎಸ್‌ಯುವಿಗಳ ಪಟ್ಟಿ!
ಭಾರತದಲ್ಲಿ ಈ ಹಿಂದೆ ಕಾರು ಎಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಈಗ ಪ್ರತಿಯೊಬ್ಬರು ಕಾರು ಖರೀದಿಸಲು ಅನುಕೂಲಕರವಾಗಿ ಕಡಿಮೆ ಡೌನ್‌ಪೇಮೆಂಟ್ ಹಾಗೂ EMI ಗಳನ್ನು ಕಂಪನಿಗಳು ಒದಗಿಸುತ್ತಿವೆ. ಈಗ ಕೇವಲ 5 ಲಕ್ಷದೊಳಗೆ ಪುಟ್ಟ ಹ್ಯಾಚ್‌ಬ್ಯಾಕ್‌ಗಳು ಸಿಗುತ್ತಿವೆ. ಇಂತಹ ಪುಟ್ಟ ಹ್ಯಾಚ್‌ಬ್ಯಾಕ್‌ಗಳು ನಮಗೆ ಬೇಡ, ಪ್ರೀಮಿಯಂ ಇಂಟೀರಿಯರ್, ಆಧುನಿಕ ಫೀಚರ್ಸ್ ಹಾಗೂ ಸ್ಪೋರ್ಟಿ ಎಸ್‌ಯುವಿಗಳನ್ನು ನೋಡುತ್ತಿದ್ದೇವೆ. ಆದರೆ ನಮಗೆ ಯಾವುದು ಬೆಸ್ಟ್ ಎಂದು ತಿಳಿಯುತ್ತಿಲ್ಲ ಎನ್ನುವವರು 12 ಲಕ್ಷದೊಳಗೆ ಸಿಗುವ ಈ 5 ಕಾರುಗಳನ್ನು ಪರಿಶೀಲಿಸಿ.
ಟಾಟಾ ಸಿಯೆರಾ: ಹೊಸ ಟಾಟಾ ಸಿಯೆರಾ ಪ್ರಸ್ತುತ ಮಾರುಕಟ್ಟೆಯಲ್ಲಿ ರೂ. 11.49 ಲಕ್ಷ ಆರಂಭಿಕ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಕಾರಿನ ಒಳಗೆ ಕ್ಯಾಬಿನ್ ಸ್ಥಳದ ವಿಷಯದಲ್ಲಿ, ಸಿಯೆರಾ ಐದು ಜನರಿಗೆ ಸುಲಭವಾಗಿ ಹೊಂದಿಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ. ದೂರದ ಪ್ರಯಾಣಗಳಿಗೆ ಹೊಂದಿಕೊಳ್ಳುವಂತೆ ಟಾಟಾ ಸಿಯೆರಾ ಸುಮಾರು 600 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಟಾಟಾ ಸಿಯೆರಾ ಮೂರು ವಿಭಿನ್ನ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ ಮೊದಲನೇಯದು 1.5L NA ಪೆಟ್ರೋಲ್ ಎಂಜಿನ್ ಆಗಿದ್ದು, ಇದು 105 bh ಪವರ್ ಮತ್ತು 145 Nm ಟಾರ್ಕ್ ಉತ್ಪಾದಿಸುತ್ತದೆ. ಎರಡನೇಯದು 1.5L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 158bh ಪವರ್ ಮತ್ತು 255Nm ಟಾರ್ಕ್ ಉತ್ಪಾದಿಸುತ್ತದೆ. ಮೂರನೇಯದು 1.5L ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಗಿದ್ದು, 116bh ಪವರ್ ಮತ್ತು 280Nm ಟಾರ್ಕ್ ಉತ್ಪಾದಿಸುತ್ತದೆ.
MG ಹೆಕ್ಟರ್: MG ಹೆಕ್ಟರ್ ಅತ್ಯಂತ ವಿಶಾಲವಾದ ಕಾರುಗಳಲ್ಲಿ ಒಂದಾಗಿದ್ದು, ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆಯು ರೂ. 11.99 ಲಕ್ಷವಿದೆ. MG ಹೆಕ್ಟರ್ 587 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಈ SUV ಯಲ್ಲಿ ಐದು ಜನರಿಗೆ ಸುಲಭವಾಗಿ ಸ್ಥಳಾವಕಾಶ ಕಲ್ಪಿಸಬಹುದು. 1.5L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು, 141.04 bh ಪವರ್ ಮತ್ತು 250 Nm ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ಕರ್ವ್: ಹೊಸ ಟಾಟಾ ಕರ್ವ್ವ್ ರೂ.9.65 ಲಕ್ಷ ಎಕ್ಸ್-ಶೋರೂಂ ಆರಂಭಿಕ ಬೆಲೆಯನ್ನು ಹೊಂದಿದೆ. ಇದರ ವಿಶಾಲವಾದ ಒಳಾಂಗಣವು ಐದು ಪ್ರಯಾಣಿಕರಿಗೆ ಸುಲಭವಾಗಿ ಅವಕಾಶ ಕಲ್ಪಿಸುತ್ತದೆ. ಸುಮಾರು 500 ಲೀಟರ್‌ಗಳ ಉದಾರವಾದ ಬೂಟ್ ಜಾಗವನ್ನು ಹೊಂದಿದೆ. ಅಷ್ಟೇ ಅಲ್ಲ, ಟಾಟಾ ಕರ್ವ್ ಮೂರು ವಿಭಿನ್ನ ಎಂಜಿನ್ ಆಯ್ಕೆಗಳನ್ನು ಹೊಂದಿದೆ.
ಮೊದಲನೇಯದು 1.2L-ರೆವೊಟ್ರಾನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 118.27 bh ಪವರ್ ಮತ್ತು 170 Nm ಟಾರ್ಕ್ ಉತ್ಪಾದಿಸುತ್ತದೆ. ಇನ್ನೊಂದು 1.5L-ಕ್ರಯೋಜೆಟ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಗಿದ್ದು, ಇದು 116.2 bh ಪವರ್ ಮತ್ತು 260 Nm ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.2L-ಹೈಪರಿಯನ್ GDi ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 123.23 bh ಪವರ್ ಮತ್ತು 225 Nm ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಎಲಿವೇಟ್: ಹೋಂಡಾ ಎಲಿವೇಟ್ ಆರಂಭಿಕ ಎಕ್ಸ್-ಶೋರೂಂ ಬೆಲೆಯು ರೂ. 11.59 ಲಕ್ಷವಿದೆ. ಹೋಂಡಾ ಎಲಿವೇಟ್ 5 ಜನರಿಗೆ ಸುಲಭವಾಗಿ ಸ್ಥಳಾವಕಾಶ ಕಲ್ಪಿಸಬಲ್ಲದು ಮತ್ತು ಸುಮಾರು 458 ಲೀಟರ್‌ಗಳ ಬೂಟ್ ಸ್ಪೇಸ್ ಹೊಂದಿದೆ. 119 bh ಪವರ್ ಮತ್ತು 145 Nm ಟಾರ್ಕ್ ಉತ್ಪಾದಿಸುವ 1.5L i-VTEC ಪೆಟ್ರೋಲ್ ಎಂಜಿನ್ ಹೊಂದಿದೆ.
ಸಿಟ್ರನ್ ಬಸಾಲ್ಟ್: ಸಿಟ್ರನ್ ಬಸಾಲ್ಟ್ ಆರಂಭಿಕ ಎಕ್ಸ್-ಶೋರೂಂ ಬೆಲೆಯು ರೂ.8.55 ಲಕ್ಷವಿದೆ. ಸುಮಾರು 470 ಲೀಟರ್‌ಗಳ ಬೂಟ್ ಜಾಗವನ್ನು ಹೊಂದಿದೆ. ಕ್ಯಾಬಿನ್‌ನಲ್ಲಿ ನಾಲ್ಕರಿಂದ ಐದು ಜನರಿಗೆ ಸುಲಭವಾಗಿ ಅವಕಾಶ ಕಲ್ಪಿಸುತ್ತದೆ. ಇದು 1.2L ಪೆಟ್ರೋಲ್ ಎಂಜಿನ್‌ನೊಂದಿಗೆ 80.88 bh ಪವರ್ ಮತ್ತು 115 Nm ಟಾರ್ಕ್ ಉತ್ಪಾದಿಸುತ್ತದೆ. 1.2L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 108.5 bh ಪವರ್ ಮತ್ತು 190 Nm ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications








