Tata: ಮೊನ್ನೆಯಷ್ಟೆ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಪೆಟ್ರೋಲ್ ಎಸ್‌ಯುವಿ ವಿಶೇಷತೆಗಳು!
ಟಾಟಾ ಮೋಟಾರ್ಸ್ (Tata Motors) ಎಸ್‌ಯುವಿ ವಿಭಾಗದಲ್ಲಿ ಧೂಳೆಬ್ಬಿಸುತ್ತಿದೆ, ತನ್ನ ರಗಡ್ ಎಸ್‌ಯುವಿಗಳ ಮೂಲಕ ಭಾರತದಲ್ಲಿ ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸುತ್ತಿದೆ. 2019ರಲ್ಲಿ ಟಾಟಾ ಹ್ಯಾರಿಯರ್ (Tata Harrier) ಡೀಸೆಲ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಈ ಎಸ್‌ಯುವಿ ತನ್ನ ವಿಭಾಗದಲ್ಲಿ ಉತ್ತಮವಾಗಿ ಮಾರಾಟ ಕಾಣುತ್ತಿದೆ. ಈ ಕಾರನ್ನು ಮೊನ್ನೆ 'ಪೆಟ್ರೋಲ್' ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ಹೊಸ ಟಾಟಾ ಹ್ಯಾರಿಯರ್ ಬೆಲೆ, ಫೀಚರ್ಸ್, ಎಂಜಿನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಫೀಚರ್ಸ್: ಹೊಸ ಹ್ಯಾರಿಯರ್ ಕಾರಿನಲ್ಲಿ 10 - ಸ್ಪೀಕರ್ ಜೆಬಿಎಲ್ ಮ್ಯೂಸಿಕ್ ಸಿಸ್ಟಮ್‌ನೊಂದಿಗೆ ಇಮ್ಮರ್ಸಿವ್ ಡಾಲ್ಬಿ ಅಟ್ಮಾಸ್ ಆಡಿಯೋ ಜೋಡಿಯಾಗಿ ಥಿಯೇಟರ್‌ಮ್ಯಾಕ್ಸ್ ಅನುಭವವನ್ನು ನೀಡುತ್ತದೆ. ಚಾಲಕರನ್ನು ಸಂಪರ್ಕದಲ್ಲಿಡಲು ಆಧುನಿಕ ಇನ್-ಕಾರ್ ತಂತ್ರಜ್ಞಾನಗಳ ಬುದ್ಧಿವಂತ ಸೂಟ್ ಒಟ್ಟಿಗೆ ಬರುತ್ತದೆ. ಇದರ ಸೆಗ್ಮೆಂಟ್-ಫಸ್ಟ್ ವೈಶಿಷ್ಟ್ಯಗಳು ಅನುಕೂಲತೆ ಮತ್ತು ಚಾಲನಾ ಸುಲಭತೆಯನ್ನು ಹೆಚ್ಚಿಸುತ್ತವೆ.

ಇವಿಷ್ಟೆ ಅಲ್ಲದೆ ಕ್ಲೈಮೇಟ್ ಸಿಂಕ್‌ನೊಂದಿಗೆ ಇಂಟೆಲ್ಲಿ - ಸ್ಟಾರ್ಟ್ ಮತ್ತು ಆಟೋ ರಿವರ್ಸ್ ಡಿಪ್ ನೊಂದಿಗೆ ವಿಷನ್ ಸಿಂಕ್ ಮೆಮೊರಿ ಒಆರ್‌ವಿಎಂ, Samsung NeoQLED ನಿಂದ ನಡೆಸಲ್ಪಡುವ 14.5 ಇಂಚಿನ ಸಿನಿಮೀಯ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಬಿಲ್ಟ್-ಇನ್ ಡ್ಯುಯಲ್ ಡ್ಯಾಶ್ ಕ್ಯಾಮ್ ಮತ್ತು DVR ನೊಂದಿಗೆ ವಿಷನ್-X E-IRVM, ಆಟೋ ರಿವರ್ಸ್ ಡಿಪ್‌ನೊಂದಿಗೆ ವಿಷನ್ ಸಿಂಕ್ ಮೆಮೊರಿ ORVM ಮತ್ತು ಕ್ಲಿಯರ್‌ವ್ಯೂ ಡ್ಯುಯಲ್ ಕ್ಯಾಮೆರಾ ವಾಷರ್‌ನಂತಹ ಫೀಚರ್‌ಗಳನ್ನು ಹೊಂದಿದೆ.
ಎಂಜಿನ್: ಹೊಸ ಹ್ಯಾರಿಯರ್‌ನಲ್ಲಿ ನೀಡಲಾಗಿರುವ 1.5l HYPERION ಟರ್ಬೊ-GDi ಪೆಟ್ರೋಲ್ ಎಂಜಿನ್ 170 PS ಪವರ್ ಮತ್ತು 280 Nm ಟಾರ್ಕ್ ಅನ್ನು ನೀಡುತ್ತದೆ. 6 - ಸ್ಪೀಡ್ ಮ್ಯಾನುವಲ್ ಮತ್ತು 6 - ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 16.8 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. 50 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.

ಡಿಸೈನ್ ಬಗ್ಗೆ ಹೇಳುವುದಾದ್ರೆ ಮುಂಭಾಗ (ಫ್ರಂಟ್) ಅತ್ಯುತ್ತಮವಾದ ಗ್ರಿಲ್, , ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್, ಶಾರ್ಕ್ ಫಿನ್ ಆಂಟೆನಾ, ಎಲ್ಇಡಿ ಟೈಲ್ ಲೈಟ್‌ಗಳು, ಟಾಟಾ ಲೋಗೋ, ಸ್ಟೈಲಿಶ್ ಆಗಿರುವ ರೂಫ್ ರೈಲ್, ಸಿಲ್ವರ್ ಕಲರ್‌ನ ಸ್ಕಫ್ ಪ್ಲೇಟ್‌ಎಲ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ 18 - ಇಂಚಿನ ಗ್ಲಾಸ್ ಬ್ಲ್ಯಾಕ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗಲಿದೆ.
ಇದು 5 - ಸೀಟರ್ ಎಸ್‌ಯುವಿಯಾಗಿದ್ದು, ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 445 - ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ. ಈ ಕಾರು 4,605 ಮಿ.ಮೀ ಉದ್ದ, 1,922 ಮಿ.ಮೀ ಅಗಲ ಹಾಗೂ 1,718 ಮಿ.ಮೀ ಎತ್ತರವಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2741 ಎಂಎಂ ವೀಲ್‌ಬೇಸ್‌ನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ.

ಹೊಸ ಟಾಟಾ ಹ್ಯಾರಿಯರ್ ಕಾರಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 - ಡಿಗ್ರಿ ಕ್ಯಾಮೆರಾವ, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್)ನ್ನು ಪಡೆದಿದೆ.
ಬೆಲೆ: ಈ ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಲಾಗಿರುವ ಹ್ಯಾರಿಯರ್ ಪೆಟ್ರೋಲ್ ಆವೃತ್ತಿಯ ಬೆಲೆಯು ರೂ. 12.89 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಈಗ ಹೈಪರಿಯನ್ ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುವ ಟಾಟಾ ಹ್ಯಾರಿಯರ್ ಪರಿಪೂರ್ಣ 5 - ಸ್ಟಾರ್ ಭಾರತ್ NCAP ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.


Click it and Unblock the Notifications








