ಕಳಪೆ ಕಾರುಗಳಿಗೆ ಜನ ನಕಾರ: ಭಾರತದಲ್ಲಿ ನಂ.1 ಆಯ್ತು ಬಲಿಷ್ಟ SUV: ಜನ ಮುಗಿಬಿದ್ದು ಖರೀದಿ!

ಭಾರತದಲ್ಲಿ ಕಾರು ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ, ದೇಶದಲ್ಲಿ ಮಾರುತಿ ಸುಜುಕಿಯಿಂದ ಹಿಡಿದು ಟಾಟಾ ಮೋಟಾರ್ಸ್‌ವರೆಗೆ ಪ್ರತಿಯೊಂದು ಬ್ರ್ಯಾಂಡ್ ಕಾರು ಮಾರಾಟದಲ್ಲಿ ಉತ್ತಮ ಲಾಭ ಕಾಣುತ್ತಿದೆ. ಎಷ್ಟೇ ಬ್ರ್ಯಾಂಡ್‌ಗಳು ಇದ್ದರೂ ಜನ ಯಾವ ಕಾರನ್ನು ಹೆಚ್ಚಾಗಿ ಖರೀದಿಸುತ್ತಾರೊ ಆ ಬ್ರ್ಯಾಂಡ್ ದೇಶದಲ್ಲಿ ಟ್ರೆಂಡಿಂಗ್‌ನಲ್ಲಿ ಇರುತ್ತದೆ. 2026 ಫೆಬ್ರವರಿ ತಿಂಗಳಲ್ಲಿ ಅತಿಹೆಚ್ಚು ಮಾರಾಟ ಕಂಡಿರುವ ಕಾರಾಗಿ ನಮ್ಮ ಸ್ವದೇಶಿ ಬ್ರ್ಯಾಂಡ್‌ನ ಜನಪ್ರಿಯ ಮಾಡಲ್‌ವೊಂದು ತುಂಬಾ ಸದ್ದು ಮಾಡುತ್ತಿದ್ದು, ಜನಕ್ಕೆ ಈ ಎಸ್‌ಯುವಿ ಫೇವರೆಟ್ ಆಯ್ಕೆಯಾಗಿ ಹೊರಹೊಮ್ಮಿದೆ.

ಟಾಟಾ ಮೋಟಾರ್ಸ್‌ನ ಪ್ರಮುಖ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಫೆಬ್ರವರಿ ತಿಂಗಳ ಟಾಪ್ ಕಾರಾಗಿ ಹೊರಹೊಮ್ಮಿದೆ. ಇಡೀ ದೇಶದಲ್ಲಿ ಈ ಕಾರಿಗೆ ತುಂಬಾ ಡಿಮ್ಯಾಂಡ್ ಇರುವುದು ಮತ್ತೊಮ್ಮೆ ಸಾಭೀತಾಗಿದೆ. ಈ ಪವರ್‌ಫುಲ್ ಎಸ್‌ಯುವಿ ಈಗ ಭಾರತದಲ್ಲಿ ಅತೀ ಹೆಚ್ಚು ಮಾರಾಟ ಕಂಡಿರುವ ಕಾರಾಗಿ ಅಗ್ರ ಸ್ಥಾನಕ್ಕೇರಿದೆ. ಗರಿಷ್ಟ ನಿರ್ಮಾಣ ಗುಣಮಟ್ಟದೊಂದಿಗೆ ಅತ್ಯಂತ ಸುರಕ್ಷಿತ ಕಾರಾಗಿ ಖರೀದಿದಾರರ ಮನಗೆದ್ದಿದೆ.

safest-car-in-india-tata-nexon-no-1-in-february-sales-2026

ಟಾಟಾ ನೆಕ್ಸಾನ್‌ಗೆ ಭಾರತದ ನಂ.1 ಸ್ಥಾನ

ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯಾಗಿರುವ 'ಟಾಟಾ ನೆಕ್ಸಾನ್' ಭಾರತೀಯ ಮಾರುಕಟ್ಟೆಯಲ್ಲಿ ಫೆಬ್ರವರಿಯಲ್ಲಿ ಒಟ್ಟು 19,430 ಯುನಿಟ್‌ ವಾಹನಗಳು ಮಾರಾಟವಾಗಿವೆ. ಟಾಟಾ ನೆಕ್ಸಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ಜನಪ್ರಿಯಗೊಳಿಸುವ ಅಂಶಗಳ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಟಾಟಾ ನೆಕ್ಸಾನ್ ದೇಶದಲ್ಲಿ ಇಷ್ಟೊಂದು ಜನಪ್ರಿಯತೆ ಗಳಿಸಲು ಪ್ರಮುಖ ಕಾರುಗಳು ಇಲ್ಲಿವೆ.

ಟಾಟಾ ನೆಕ್ಸಾನ್ ಸುರಕ್ಷತೆ: ಟಾಟಾ ನೆಕ್ಸಾನ್ BNCAP (ಭಾರತ್ NCAP) ಮತ್ತು GNCAP (ಗ್ಲೋಬಲ್ NCAP) ನಿಂದ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳಂತಹ ಸುರಕ್ಷತಾ ಫೀಚರ್‌ಗಳೊಂದಿಗೆ ಬರುತ್ತದೆ.

safest-car-in-india-tata-nexon-no-1-in-february-sales-2026

ಟಾಟಾ ನೆಕ್ಸಾನ್ ಲೆವೆಲ್ 2 ADAS: ಸ್ಪರ್ಧಾತ್ಮಕ ಬೆಲೆಯಲ್ಲಿ ಲೆವೆಲ್ 2 ADAS ಸೂಟ್‌ನೊಂದಿಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಭಾರತೀಯ ಕಾರಾಗಿ ನೆಕ್ಸಾನ್ ಜನಪ್ರಿಯತೆ ಪಡೆದಿದೆ. ಹೌದು, ಟಾಟಾ ನೆಕ್ಸಾನ್ ADAS ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದ್ದು, ಫಿಯರ್‌ಲೆಸ್+ PS DCT ಪೆಟ್ರೋಲ್ ವೇರಿಯೆಂಟ್‌ನಿಂದ ಲೆವೆಲ್ 2 ADAS ಸಾಮರ್ಥ್ಯವನ್ನು ನೀಡಲಾಗುತ್ತದೆ. ಇದರ ಬೆಲೆ ರೂ 13.53 ಲಕ್ಷ (ಎಕ್ಸ್-ಶೋರೂಂ).

ಟಾಟಾ ನೆಕ್ಸಾನ್ ಎಂಜಿನ್ ಆಯ್ಕೆಗಳು: ಟಾಟಾ ನೆಕ್ಸಾನ್ ಡೀಸೆಲ್, ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಸೇರಿದಂತೆ ಹಲವಾರು ಆಯ್ಕೆಗಳೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ನೆಕ್ಸಾನ್ ಟರ್ಬೊ-ಸಿಎನ್‌ಜಿ ಎಂಜಿನ್ ಅನ್ನು ಒಳಗೊಂಡಿರುವ ಭಾರತದ ಮೊದಲ ಎಸ್‌ಯುವಿಯಾಗಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಒಮ್ಮೆ ಚಾರ್ಜ್‌ ಮಾಡಿದರೆ 489 ಕಿಲೋಮೀಟರ್‌ ಓಡಿಸಬಹುದಾಗಿದೆ.

safest-car-in-india-tata-nexon-no-1-in-february-sales-2026

ಟಾಟಾ ನೆಕ್ಸಾನ್ ಅತ್ಯುತ್ತಮ ಫೀಚರ್ಸ್: ಟಾಟಾ ನೆಕ್ಸಾನ್‌ನ ಕ್ಯಾಬಿನ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕಕ್ಕಾಗಿ ವೈರ್‌ಲೆಸ್ ಸಂಪರ್ಕದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್-ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವಾಯಿಸ್-ಕಂಟ್ರೋಲ್ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಸೀಟುಗಳು ಸೇರಿದಂತೆ ಹೆಚ್ಚಿನ ಫೀಚರ್ಸ್ ಪಡೆದಿದೆ.

ಟಾಟಾ ನೆಕ್ಸಾನ್ ಬೆಲೆ: ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಬೆಲೆಗಳು ರೂ. 7.32 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತವೆ. ನೆಕ್ಸಾನ್ ಒಟ್ಟು 9 ಟ್ರಿಮ್‌ಗಳಲ್ಲಿ ಲಭ್ಯವಿದ್ದು, ವಿಭಿನ್ನ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳ ಸೇರ್ಪಡೆಯೊಂದಿಗೆ, 9 ಟ್ರಿಮ್‌ಗಳಲ್ಲಿ 61 ವೇರಿಯೆಂಟ್‌ಗಳು ಸಿಗುತ್ತವೆ. ಹಾಗಾಗಿ, ಗ್ರಾಹಕರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಆದ್ಯತೆಯ ವೇರಿಯೆಂಟ್ ಆಯ್ಕೆ ಮಾಡಬಹುದಾಗಿದೆ.

More from DriveSpark

Article Published On: Wednesday, March 4, 2026, 12:51 [IST]
English summary
Safest car in india tata nexon no 1 in february sales 2026
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+