Tata: ಬಡವರ ಬಂಡಿ ಈ ಟಾಟಾ ಕಾರು... 5.59 ಲಕ್ಷ: ಗರಿಷ್ಟ ಸುರಕ್ಷತೆ, 27 ಕಿ.ಮೀ ಮೈಲೇಜ್!

ಭಾರತದಲ್ಲಿ ಸಣ್ಣ ಕಾರುಗಳಿಗೆ ತುಂಬಾ ಬೇಡಿಕೆ ಇದೆ, ಐದು ಮಂದಿಗೆ ಆರಾಮ ಪ್ರಯಾಣ ನೀಡುವ ಈ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುತ್ತವೆ. ಈ ಮೈಕ್ರೋ ಎಸ್‌ಯುವಿಗಳಲ್ಲಿ ತುಂಬಾ ಹೆಸರು ಮಾಡಿರುವ ಕಾರೆಂದರೆ 'ಟಾಟಾ ಪಂಚ್' ಎಂದು ಹೇಳದಬಹುದು. ಏಕೆಂದರೆ ಗ್ರಾಹಕರು ಈ ಕಾರನ್ನು ತುಂಬಾ ಇಷ್ಟಪಟ್ಟಿದ್ದಾರೆ, ಹಾಗಾಗಿಯೇ ಪೆಟ್ರೋಲ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾಗಿಯೇ ಪ್ರತಿ ತಿಂಗಳ ಮಾರಾಟದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೈಕ್ರೋ ಎಸ್‌ಯುವಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಭಾರತದಲ್ಲಿ ಯಾವ ಮಟ್ಟಿಗೆ ಈ ಕಾರಿನ ಮೇಲೆ ಕ್ರೇಜ್ ಇದೆ ಎಂದರೆ, ಕಳೆದ ತಿಂಗಳು (ಫೆಬ್ರವರಿ - 2026) ಒಟ್ಟು 18,748 ಯುನಿಟ್‌ ಕಾರುಗಳು ಭಾರತದಲ್ಲಿ ಮಾರಾಟವಾಗಿವೆ. ಈ ಕಾರು ಸಣ್ಣದಾಗಿದ್ದರು ಹಲವರು ಮಧ್ಯಮ ವರ್ಗದವರು ಹಾಗೂ ಕೆಳ ಮಧ್ಯಮ ವರ್ಗದವರ ಕಾರು ಖರೀದಿಸುವ ಕನಸನ್ನು ನನಸಾಗಿಸುತ್ತಿದೆ. ಜೊತೆಗೆ ಇದು ಅತ್ಯಂತ ಸುರಕ್ಷಿತ ಮೈಕ್ರೋ ಎಸ್‌ಯುವಿಯಾಗಿರುವುದರಿಂದ ಜನ ಭಯವಿಲ್ಲದೆ ಖರೀದಿಸುತ್ತಿದ್ದಾರೆ.

safest-micro-suv-in-india-tata-punch-petrol-cng-and-electric-explained

ಭಾರತದಲ್ಲಿ ಹೊಸ ಟಾಟಾ ಪಂಚ್ ಬೆಲೆಯು ರೂ.5.59 ಲಕ್ಷದಿಂದ ರೂ.9.29 ಲಕ್ಷ (ಎಕ್ಸ್-ಶೋರೂಂ) ವೆರೆಗೆ ಇದೆ. ಇದು 5-ಸೀಟರ್ ಕಾರಾಗಿದ್ದು ಐದು ಮಂದಿ ಆರಾಮವಾಗಿ ಪ್ರಯಾಣಿಸಬಹುದು. 193 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,445 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದ್ದು, ಎಲ್ಲಾ ರಸ್ತೆಗಳಲ್ಲಿ ಸುಲಭವಾಗಿ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ. ದೂರದ ಪ್ರಯಾಣಗಳನ್ನು ಕೈಗೊಳ್ಳಲು 366 ಲೀಟರ್‌ನಷ್ಟು ಬೂಟ್ ಸ್ಪೇಸ್‌ ಸಹ ನೀಡುತ್ತದೆ.

ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ವಿಷಯಕ್ಕೆ ಬಂದರೆ ರೂ.9.69 ಲಕ್ಷದಿಂದ ರೂ.12.59 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇನ್ನು ಟಾಟಾ ಪಂಚ್ ಸಿಎನ್‌ಜಿ ಆವೃತ್ತಿಯ ಬೆಲೆಯು ರೂ.7.50 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇವೆರಡು ತನ್ನ ಪೆಟ್ರೋಲ್ ಆವೃತ್ತಿಯನ್ನು ಹೋಲುವುದರಿಂದ ಉದ್ದಳತೆಗಳಲ್ಲಿ ಒಂದೇ ಆಗಿರುತ್ತದೆ. 5-ಸೀಟರ್‌ನೊಂದಿಗೆ ಐದು ಮಂದಿ ಆರಾಮವಾಗಿ ಪ್ರಯಾಣಿಸಬಹುದು.

safest-micro-suv-in-india-tata-punch-petrol-cng-and-electric-explained

ಆಯಾ ಆವೃತ್ತಿಯ (ಪೆಟ್ರೋಲ್, ಇವಿ, ಸಿಎನ್‌ಜಿ) ವೇರಿಯೆಂಟ್‌ಗಳನ್ನು ಅವಲಂಬಿಸಿ ಕಾರಿನಲ್ಲಿ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ರೈನ್ ಸೆನ್ಸಿಂಗ್ ವೈಪರ್‌ಗಳು, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್, ಸನ್‌ರೂಫ್ ಮತ್ತು ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌, ಪುಶ್-ಬಟನ್ ಸ್ಟಾರ್ಟ್‌, ಟೈಪ್-ಸಿ ಫಾಸ್ಟ್ ಚಾರ್ಜರ್‌ನಂತಹ ಆಧುನಿಕ ಫೀಚರ್ಸ್ ಇವೆ.

ಸುರಕ್ಷತೆ ವಿಷಯಕ್ಕೆ ಬಂದರೆ ಎಲ್ಲಾ ಆವೃತ್ತಿಗಳು ಒಂದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಜೊತೆಗೆ ಟಾಟಾ ಪಂಚರ್ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವುದರಿಂದ ಗರಿಷ್ಟ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಕ್ರೂಸ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.

safest-micro-suv-in-india-tata-punch-petrol-cng-and-electric-explained

ಟಾಟಾ ಪಂಚ್ ಎಸ್‌ಯುವಿಯು 1.2-ಲೀ NA ಪೆಟ್ರೋಲ್, 1.2-ಲೀ. ಟರ್ಬೋ ಪೆಟ್ರೋಲ್, 1.2-ಲೀ. ಸಿಎನ್‌ಜಿ ಎಂಜಿನ್‌ ಆಯ್ಕೆಗಳಲ್ಲಿ ಸಿಗುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಗಳಲ್ಲಿ ಖರೀದಿಸಬಹುದು. ಎಲೆಕ್ಟ್ರಿಕ್ ಆವೃತ್ತಿಯ ವಿಷಯ್ಕಕೆ ಬಂದರೆ 30 ಕಿಲೋವ್ಯಾಟ್ ಮತ್ತು 40 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ನೀಡಲಾಗಿದೆ.

ಪೆಟ್ರೋಲ್ ಚಾಲಿತ ಟಾಟಾ ಪಂಚ್ ಪ್ರತಿ ಲೀಟರ್‌ಗೆ 19 ಕಿ.ಮೀ ಮೈಲೇಜ್ ನೀಡುತ್ತದೆ. ಟಾಟಾ ಪಂಚ್ ಸಿಎನ್‌ಜಿ ಆವೃತ್ತಿಯು ಪ್ರತಿ ಕೆ.ಜಿಗೆ 27 ಕಿ.ಮೀ ಮೈಲೇಜ್ ನೀಡುತ್ತದೆ. ಎಲೆಕ್ಟ್ರಿಕ್ ಟಾಟಾ ಪಂಚ್ ಅನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 365 ರಿಂದ 468 ಕಿ.ಮೀ ಓಡಿಸಬಹುದು ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ. ಟಾಟಾ ಪಂಚ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Thursday, March 19, 2026, 10:20 [IST]
English summary
Safest micro suv in india tata punch petrol cng and electric explained
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+