Skoda: ಹೊಸ ಸ್ಕೋಡಾ ಕಾರು ಅನಾವರಣ: ಕ್ರೆಟಾ, ಗ್ರಾಂಡ್‌ ವಿಟಾರಾಗೆ ಸರಿಯಾದ ಪೈಪೋಟಿ! ವಿಶೇಷತೆಗಳೇನು?

ಪ್ರಮುಖ ಕಾರು ತಯಾರಕರಾದ ಸ್ಕೋಡಾ, ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ 2026 ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ (2026 Skoda Kushaq facelift) ಅನ್ನು ಅನಾವರಣಗೊಳಿಸಿದೆ. ಈಗ ರೂ. 15,000 ಪಾವತಿಸಿ ಹೊಸ ಕುಶಾಕ್ ಎಸ್‌ಯುವಿಯ ಪ್ರೀ-ಬುಕಿಂಗ್ ಮಾಡಬಹುದು. ಮಾರ್ಚ್ 2026 ರಲ್ಲಿ ಬೆಲೆಗಳನ್ನು ಘೋಷಿಸಿ, ಅದೇ ತಿಂಗಳಾಂತ್ಯದ ವೇಳೆಗೆ ಡೆಲಿವರಿಗಳನ್ನು ಪ್ರಾರಂಭಿಸಿಲಿದ್ದಾರೆ. ನವೀಕರಿಸಿದ ಕುಶಾಕ್ ಅನ್ನು ಈಗ ಶಿಮ್ಲಾ ಗ್ರೀನ್, ಸ್ಟೀಲ್ ಗ್ರೇ ಮತ್ತು ಚೆರ್ರಿ ರೆಡ್ ಎಂಬ ಮೂರು ಹೊಸ ಬಣ್ಣಗಳಲ್ಲಿ ನೀಡಲಾಗುವುದು.

ಸ್ಕೋಡಾ ಕಂಪನಿಯು ತನ್ನ ಒಸ ಕುಶಾಕ್ ಫೇಸ್‌ಲಿಫ್ಟ್ ಎಸ್‌ಯುವಿಯ ವಿನ್ಯಾಸ, ವೈಶಿಷ್ಟ್ಯಗಳು, ಪವರ್‌ಟ್ರೇನ್ ಆಯ್ಕೆಗಳಲ್ಲಿ ಪ್ರಮುಖ ಅಪ್‌ಡೇಟ್‌ಗಳನ್ನು ಪರಿಚಯಿಸಿದೆ. ಈಗ ಹೊಸ ಎಸ್‌ಯುವಿ ಕ್ರೋಮ್ ಅಂಶಗಳು ಮತ್ತು ಪ್ರಕಾಶಿತ ಲೈಟ್ ಬ್ಯಾಂಡ್‌ನೊಂದಿಗೆ ರೀ-ಡಿಸೈನ್ ಮಾಡಲಾದ ಗ್ರಿಲ್ ಹೊಂದಿದೆ, ಜೊತೆಗೆ ಹೊಸ LED ಹೆಡ್‌ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್‌ಲ್ಯಾಂಪ್ ನೀಡಲಾಗಿದೆ.

skoda-kushaq-2026-facelift-unveiled-in-india-bookings-open-now

ಹೊಸ ಕುಶಾಕ್ ಟಾಪ್ ವೇರಿಯೆಂಟ್‌ಗಳು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದರೆ, ಮಿಡ್ ವೇರಿಯೆಂಟ್‌ಗಳು 8-ಇಂಚಿನ ಡಿಜಿಟಲ್ ಕಾಕ್‌ಪಿಟ್ ಅನ್ನು ಹೊಂದಿವೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ ಹೊಸ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ. ಡ್ಯುಯಲ್-ಕಲರ್ ಆಂಬಿಯೆಂಟ್ ಲೈಟಿಂಗ್ ಜೊತೆಗೆ ಮೊದಲ ಬಾರಿಗೆ ಪನೋರಮಿಕ್ ಸನ್‌ರೂಫ್ ಪರಿಚಯಿಸಲಾಗಿದೆ.

ಈ ಎಸ್‌ಯುವಿ ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟುಗಳು, ಆರು ಸ್ಪೀಕರ್‌ಗಳು ಮತ್ತು ಸಬ್ ವೂಫರ್ ಹೊಂದಿರುವ ಸ್ಕೋಡಾ-ಬ್ರಾಂಡೆಡ್ ಸೌಂಡ್ ಸಿಸ್ಟಮ್, ಕ್ಲೈಮ್ಯಾಟ್ರಾನಿಕ್ ಆಟೋ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್, ಹಿಂಭಾಗದ ವೈಪರ್ ಮತ್ತು ಡಿಫಾಗರ್, ಆಟೋ-ಡಿಮ್ಮಿಂಗ್ IRVM ಹೊಂದಿದ್ದು, 491 ಲೀಟರ್‌ ಬೂಟ್ ಜಾಗವನ್ನು ಪಡೆದುಕೊಂಡಿದೆ.

skoda-kushaq-2026-facelift-unveiled-in-india-bookings-open-now

ಪ್ರಸ್ತುತ ಮಾರಾಟದಲ್ಲಿರುವ ಹಳೆಯ ಕುಶಾಕ್‌ನ ಬೆಲೆ ರೂ 10.66 ಲಕ್ಷದಿಂದ ರೂ 18.69 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಇದೀಗ ಅನಾವರಣಗೊಂಡಿರುವ ಅಪ್‌ಡೇಟೆಡ್ 2026 ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ ಸ್ವಲ್ಪ ಬೆಲೆ ಪರಿಷ್ಕರಣೆ ಕಾಣಲಿದೆ. ಬೆಲೆಗಳು ಸುಮಾರು ರೂ 10.70 ಲಕ್ಷದಿಂದ ಪ್ರಾರಂಭವಾಗಿ ರೂ. 19 ಲಕ್ಷ (ಎಕ್ಸ್-ಶೋರೂಂ) ಅಥವಾ ಇದಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ.

2026 ರ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ ಮಿಡ್‌ಸೈಜ್ SUV ವಿಭಾಗದಲ್ಲಿ ಟಾಟಾ ಸಿಯೆರಾ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಟಾಟಾ ಕರ್ವ್, ಹೋಂಡಾ ಎಲಿವೇಟ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಮಾರುತಿ ಸುಜುಕಿ ವಿಕ್ಟೋರಿಸ್, ಫೋಕ್ಸ್‌ವ್ಯಾಗನ್ ಟೈಗನ್ ಸೇರಿದಂತೆ MG ಆಸ್ಟರ್‌ಗಳಂತಹ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲಿದೆ.

skoda-kushaq-2026-facelift-unveiled-in-india-bookings-open-now

ಎಂಜಿನ್ ವಿಷಯಕ್ಕೆ ಬಂದರೆ ಹೊಸ ಕುಶಾಕ್‌ನಲ್ಲಿ ಈಗ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್‌ನೊಂದಿಗೆ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪರಿಚಯಿಸಲಾಗಿದೆ. ಈ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ 115ಪಿಎಸ್ ಪವರ್ ಮತ್ತು 178ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ 6-ವೇಗದ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸಹ ಲಭ್ಯವಿದೆ.

1.0-ಲೀಟರ್ TSI ಮತ್ತು 1.5-ಲೀಟರ್ TSI ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಆಯ್ಕೆಗಳನ್ನು ನೀಡಲಾಗಿದೆ. ಈಗ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ತೆಗೆದುಹಾಕಿ, ಬದಲಾಗಿ ಸ್ಕೋಡಾ ಈಗ ಕಡಿಮೆ ವೇರಿಯೆಂಟ್‌ಗಳಿಂದ ಹೊಸ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡುತ್ತಿದೆ. ಟಾಪ್ ವೇರಿಯೆಂಟ್‌ಗಳಲ್ಲಿ ನಾವು ಮೊದಲು ನೋಡಿದ 8-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಸುರಕ್ಷತೆ ವಿಷಯಕ್ಕೆ ಬಂದರೆ ಇದು ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. 25 ಕ್ಕೂ ಹೆಚ್ಚು ಸಕ್ರಿಯ ಮತ್ತು ನಿಷ್ಕ್ರಿಯ ಸೇಫ್ಟಿ ಫೀಚರ್‌ಗಳನ್ನು ನೀಡುವುದನ್ನು ಮುಂದುವರೆಸಿದೆ. ಇದು ಟಾಪ್ ವೇರಿಯೆಂಟ್‌ಗಳಲ್ಲಿ 40 ಕ್ಕೂ ಹೆಚ್ಚು ಸೇಫ್ಟಿ ಫೀಚರ್‌ಗಳಿಗೆ ವಿಸ್ತರಿಸುತ್ತದೆ.

More from DriveSpark

Article Published On: Tuesday, January 20, 2026, 13:28 [IST]
English summary
Skoda kushaq 2026 facelift unveiled in india bookings open now
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+