Skoda: ಕ್ರೆಟಾ, ಸೆಲ್ಟೋಸ್‌ಗೆ ಸರಿಯಾದ ಪೈಪೋಟಿ: ಇನ್ನೆರಡೇ ದಿನಗಳಲ್ಲಿ ಬಿಡುಗಡೆ: ಯಾವುದು?

2026ರ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್‌ ಎಸ್‌ಯುವಿ (2026 Skoda Kushaq facelift)ಯು ಭಾರತದಲ್ಲಿ ಜನವರಿ 20, 2026 ರಂದು ಅನಾವರಣಗೊಂಡಿತ್ತು. ಆದರೆ ಬಿಡುಗಡೆಯು ತುಸು ತಡವಾಗಿದ್ದು ಈಗ ಮಾರುಕಟ್ಟೆಗೆ ಎಂಟ್ರಿಕೊಡಲು ರೆಡಿಯಾಗಿದೆ. ಮಾರ್ಚ್‌ 21 ರಂದು ಅಧಿಕೃತವಾಗಿ ಬಿಡುಗಡೆ ಮಾಡಿ ಬೆಲೆಗಳನ್ನು ಬಹಿರಂಗ ಪಡಿಸಲು ಸ್ಕೋಡಾ ಸಜ್ಜಾಗಿದೆ. ಅದಕ್ಕೂ ಮುನ್ನ ಬುಕಿಂಗ್‌ಗಳನ್ನು ತರೆದಿರುವ ಸ್ಕೋಡಾ, ಬಿಡುಗಡೆಗೂ ಮುನ್ನವೇ ಉತ್ತಮ ಗ್ರಾಹಕ ಪ್ರತಿಕ್ರಿಯೆ ಪಡೆದುಕೊಂಡಿದೆ. ರೂ. 15,000 ಪಾವತಿಸಿ ಹೊಸ ಕುಶಾಕ್ ಎಸ್‌ಯುವಿಯ ಪ್ರೀ-ಬುಕಿಂಗ್ ಮಾಡಬಹುದಾಗಿದೆ. ಬಹುನಿರೀಕ್ಷಿತ ಸ್ಕೋಡಾ ಕುಶಾಕ್ ಎಸ್‌ಯುವಿ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ಕೋಡಾ ಕುಶಾಕ್ ಭಾರತದಲ್ಲಿ ಮೊದಲ ಬಾರಿಗೆ ಜೂನ್ 2021 ರಲ್ಲಿ ಬಿಡುಗಡೆಯಾಗಿತ್ತು, ನಂತರ ಕಾರು ತಯಾರಕರ ಇಂಡಿಯಾ 2.0 ಯೋಜನೆಯಡಿಯಲ್ಲಿ ಫೇಸ್‌ಲಿಫ್ಟ್ ಮಾಡಲ್ ಅನ್ನು ಈಗ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. 2026ರ ಕುಶಾಕ್ ಫೇಸ್‌ಲಿಫ್ಟ್ ಎಸ್‌ಯುವಿ ಡಿಸೈನ್ ಮತ್ತು ಫೀಚರ್ಸ್ ವಿಷಯದಲ್ಲಿ ಹಲವಾರು ನವೀಕರಣಗಳನ್ನು ಪಡೆದುಕೊಂಡಿದೆ. ಆದರೆ ಪವರ್‌ಟ್ರೇನ್ ಮಾತ್ರ ಬದಲಾಗದೆ ಉಳಿದಿದ್ದು, ತನ್ನ ಹಿಂದಿನ ಪೀಳಿಗೆಯ ಮಾಡಲ್‌ನಂತೇಯೇ ಉಳಿದಿದೆ.

skoda-kushaq-facelift-launch-on-march-21st-in-india

ಮಾರ್ಚ್‌ 21 ರಂದು ಬಿಡುಗಡೆಯಾದ ಬಳಿಕ ಬುಕಿಂಗ್ ಮಾಡಿರುವ ಗ್ರಾಹಕರಿಗೆ ವೇಗವಾಗಿ ಡೆಲಿವರಿಗಳನ್ನು ನೀಡಲು ಈಗಾಗಲೇ ಪುಣೆಯಲ್ಲಿರುವ ತನ್ನ ವಿಶ್ವ ದರ್ಜೆಯ ಚಕನ್ ಕಾರು ಉತ್ಪದನಾ ಸ್ಥಾವರದಲ್ಲಿ ಹೊಸ ಕುಶಾಕ್ (Skoda Kushaq) ಉತ್ಪಾದನೆಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ, ಇದೇ ಮಾರ್ಚ್‌ ತಿಂಗಳಾಂತ್ಯದ ವೇಳೆಗೆ ಡೆಲಿವರಿಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಮಾರಾಟದಲ್ಲಿರುವ ಹಳೆಯ ಕುಶಾಕ್‌ನ ಬೆಲೆ ರೂ 10.66 ಲಕ್ಷದಿಂದ ರೂ 18.69 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಇದೀಗ ಅನಾವರಣಗೊಂಡಿರುವ ಅಪ್‌ಡೇಟೆಡ್ 2026 ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ ಸ್ವಲ್ಪ ಬೆಲೆ ಪರಿಷ್ಕರಣೆ ಕಾಣಲಿದೆ. ಬೆಲೆಗಳು ಸುಮಾರು ರೂ 10.70 ಲಕ್ಷದಿಂದ ಪ್ರಾರಂಭವಾಗಿ ರೂ. 19 ಲಕ್ಷ (ಎಕ್ಸ್-ಶೋರೂಂ) ಅಥವಾ ಇದಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ.

skoda-kushaq-facelift-launch-on-march-21st-in-india

2026ರ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್‌ ವಿಶೇಷತೆಗಳು

2026ರ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್‌ ಹೊಸ LED ಹೆಡ್‌ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್‌ಲ್ಯಾಂಪ್ ನೀಡಲಾಗಿದೆ. ಇಂಟೀರಿಯರ್‌ನಲ್ಲಿ ಡ್ಯುಯಲ್ - ಕಲರ್ ಆಂಬಿಯೆಂಟ್ ಲೈಟಿಂಗ್ ಜೊತೆಗೆ ಮೊದಲ ಬಾರಿಗೆ ಪನೋರಮಿಕ್ ಸನ್‌ರೂಫ್ ಪರಿಚಯಿಸಲಾಗಿದೆ.

ಈ ಎಸ್‌ಯುವಿ ಆಟೋ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್, ರೈನ್ - ಸೆನ್ಸಿಂಗ್ ವೈಪರ್, ಹಿಂಭಾಗದ ವೈಪರ್ ಮತ್ತು ಡಿಫಾಗರ್, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ಫ್ರಂಟ್ ವೆಂಟಿಲೇಟೆಡ್ ಸೀಟುಗಳು, ಆರು ಸ್ಪೀಕರ್‌ಗಳು ಮತ್ತು ಸಬ್ ವೂಫರ್ ಹೊಂದಿರುವ ಸ್ಕೋಡಾ-ಬ್ರಾಂಡೆಡ್ ಸೌಂಡ್ ಸಿಸ್ಟಮ್, ಆಟೋ-ಡಿಮ್ಮಿಂಗ್ IRVM ಹೊಂದಿದ್ದು, 491 ಲೀಟರ್‌ ಬೂಟ್ ಜಾಗವನ್ನು ಪಡೆದುಕೊಂಡಿದೆ.

skoda-kushaq-facelift-launch-on-march-21st-in-india

ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಾಗೂ ಹೊಸ ಅಪ್‌ಡೇಟ್ ಭಾಗವಾಗಿ ADAS ಈ ಬಾರಿ ಹೆಚ್ಚಿನ ಸೇಫ್ಟಿ ಫೀಚರ್ಸ್ ತರಲಿದೆ. ಆರು ಏರ್ ಬ್ಯಾಗ್‌ಗಳು, ಐಎಸ್ ಒಫಿಕ್ಸ್ ಚೈಲ್ಡ್ - ಸೀಟ್ ಆಂಕರ್ ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಸಿ, ಹಿಲ್-ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೋಲ್ ಓವರ್ ಪ್ರೊಟೆಕ್ಷನ್, ಬ್ರೇಕ್ ಡಿಸ್ಕ್ ಹೊಂದಿದೆ. ಗ್ಲೋಬಲ್ ಎನ್‌ಸಿಎಪಿ ಸೇಫ್ಟಿ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ.

ಹೊಸ ಕುಶಾಕ್ ಟಾಪ್ ವೇರಿಯೆಂಟ್‌ಗಳು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದರೆ, ಮಿಡ್ ವೇರಿಯೆಂಟ್‌ಗಳು 8-ಇಂಚಿನ ಡಿಜಿಟಲ್ ಕಾಕ್‌ಪಿಟ್ ಅನ್ನು ಹೊಂದಿವೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ ಹೊಸ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ.

More from DriveSpark

Article Published On: Wednesday, March 18, 2026, 14:55 [IST]
English summary
Skoda kushaq facelift launch on march 21st in india
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+