TATA: ಅತ್ಯಂತ ಪವರ್‌ಫುಲ್ ಎಸ್‌ಯುವಿ ಬಿಡುಗಡೆ ಮಾಡಿದ ಟಾಟಾ: ಬೆಲೆಯೆಷ್ಟು?
ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕರಾದ ಟಾಟಾ.ಇವಿ (TATA.ev), ಇಂದು ಭಾರತದ ಅತ್ಯಂತ ಪವರ್‌ಫುಲ್ SUV ಆಗಿರುವ ಹ್ಯಾರಿಯರ್.ಇವಿ (Harrier.ev) ನಲ್ಲಿ ಹೊಸ ಫಿಯರ್‌ಲೆಸ್+ QWD 75 ಪರ್ಸೋನಾ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಇದು ತುಂಬಾ ಪವರ್‌ಫುಲ್ ಆವೃತ್ತಿಯಾಗಿದ್ದು, ಸೂಪರ್‌ಕಾರ್‌ನಂತಹ ಪರ್ಫಾಮೆನ್ಸ್ ನೀಡುತ್ತದೆ ಎಂದು ಟಾಟಾ ಹೇಳಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಡ್ಯುಯಲ್ - ಮೋಟಾರ್ ಕ್ವಾಡ್ ವೀಲ್ ಡ್ರೈವ್‌ನೊಂದಿಗೆ ಆಫ್ - ರೋಡ್‌ನಲ್ಲೂ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ.
ಇಷ್ಟು ಪವರ್‌ಫುಲ್ ಕಾರನ್ನು ಕೇವಲ ರೂ. 26.49 ಲಕ್ಷ ಎಕ್ಸ್ - ಶೋರೂಂ ಬೆಲೆಯಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಹೊಸ ಟಾಟಾ ಹ್ಯಾರಿಯರ್.ಇವಿ 'ಫಿಯರ್‌ಲೆಸ್+ QWD 75 ವೇರಿಯೆಂಟ್', ಪ್ರಭಾವಶಾಲಿ 504 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಮೂಲಕ ಕಾರು ಕೇವಲ 6.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು ಎಂದು ಟಾಟಾ ಹೇಳಿದೆ.

ಹೊಸ ವೇರಿಯೆಂಟ್ ಆರು ಟೆರೈನ್ ಮೋಡ್‌ಗಳನ್ನು ಸಹ ಒಳಗೊಂಡಿದೆ, ಇದರಲ್ಲಿ ಆಫ್-ರೋಡ್ ಅಸಿಸ್ಟ್ ಮತ್ತು ಬೂಸ್ಟ್ ಮೋಡ್‌ಗಳು ಪ್ರಮುಖವಾಗಿವೆ. ಇದರ ಡ್ಯುಯಲ್ - ಮೋಟಾರ್ ಕ್ವಾಡ್ ವೀಲ್ ಡ್ರೈವ್ ಸಿಸ್ಟಮ್ ಟ್ರಾಕ್ಷನ್ ಮತ್ತು ಸ್ಟೆಬಿಲಿಟಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರ ಜೊತೆಗೆ, ಕಾರು 5-ಸ್ಟಾರ್ ಭಾರತ್-NCAP ಸೇಫ್ಟಿ ರೇಟಿಂಗ್ ಪಡೆದುಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಯ ಬದ್ಧತೆಗೆ ಸಾಕ್ಷಿಯಾಗಿದೆ.
ಹೊಸ ಫಿಯರ್‌ಲೆಸ್+ QWD 75 ವೇರಿಯೆಂಟ್‌ನ ಡ್ರೈವರ್ ಸೌಕರ್ಯದ ವಿಷಯಕ್ಕೆ ಬಂದರೆ 6-ವೇ ಪವರ್ಡ್ ಡ್ರೈವರ್ ಸೀಟ್, 4-ವೇ ಪವರ್ಡ್ ಕೋ-ಡ್ರೈವರ್ ಸೀಟ್ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟುಗಳು ಸೇರಿವೆ. ವಾಹನವು 360 - ಡಿಗ್ರಿ ಕ್ಯಾಮೆರಾ, JBL ಬ್ಲ್ಯಾಕ್ 10 - ಸ್ಪೀಕರ್ ಆಡಿಯೊ ಸಿಸ್ಟಮ್, R19 ಅಲಾಯ್ ವೀಲ್‌ಗಳು ಮತ್ತು ವಾಯಿಸ್ - ಅಸಿಸ್ಟ್ ಡ್ಯುಯಲ್ - ಜೋನ್ ಫುಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹೊಂದಿದೆ.

ಇದಲ್ಲದೆ, TATA.ev ಹೊಸ ಆಕರ್ಷಕ ಬಾಹ್ಯ ಬಣ್ಣವಾದ ಸೀವೀಡ್ ಗ್ರೀನ್ ಅನ್ನು ಸಹ ಪರಿಚಯಿಸಿದೆ. ಈ ಸೊಗಸಾದ ಮತ್ತು ಅತ್ಯಾಧುನಿಕ ಬಣ್ಣಗಳು ಎಲ್ಲಾ Harrier.ev ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತವೆ. ಅಪ್ರತಿಮ ಸೂಪರ್ ಕಾರ್‌ನಂತಹ ಪರ್ಫಾಮೆನ್ಸ್ ಮತ್ತು ಎಲ್ಲಿಯಾದರೂ ಆಫ್ - ರೋಡ್ ಸಾಮರ್ಥ್ಯವನ್ನು ಹೊರಹಾಕುವ ಬಲವನ್ನು ಹೊಸ ಟಾಟಾ ಹ್ಯಾರಿಯರ್ ಫಿಯರ್‌ಲೆಸ್+ ವೇರಿಯೆಂಟ್ ಬೆಲೆಗಳನ್ನು ನೋಡೋಣ.
ಬೆಲೆ ವಿಷಯಕ್ಕೆ ಬಂದರೆ ಗ್ರಾಹಕರು ಈಗ ರೂ. 26.49 ಲಕ್ಷ ಎಕ್ಸ್ - ಶೋರೂಂ ಆರಂಭಿಕ ಬೆಲೆಯಲ್ಲಿ ಭಾರತದ ಅತ್ಯಂತ ಪವರ್‌ಫುಲ್ ಸ್ವದೇಶಿ ಎಸ್‌ಯುವಿಯನ್ನು ಖರೀದಿಸಬಹುದು. ಚಾರ್ಜರ್ ಮತ್ತು ಇನ್‌ಸ್ಟಾಲೇಷನ್‌ಗೆ ಹೆಚ್ಚುವರಿ ಪಾವತಿಸಬೇಕಾಗುತ್ತದೆ. AC ಫಾಸ್ಟ್ ಚಾರ್ಜರ್ ಆಯ್ಕೆಯು ಹೆಚ್ಚುವರಿಯಾಗಿ ರೂ. 49,000 ಬೆಲೆಯಲ್ಲಿ ಲಭ್ಯವಿದೆ. ಟಾಟಾ ಹ್ಯಾರಿಯರ್ ಇವಿಯ ಸಂಪೂರ್ಣ ಬೆಲೆ ವಿವರಗಳು ಕೆಳಗಿನಂತಿವೆ.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಮಾತನಾಡಿ "ನಮ್ಮ ಗ್ರಾಹಕರಿಂದ ಹ್ಯಾರಿಯರ್.ಇವಿ ಪಡೆದ ಪ್ರೀತಿಯನ್ನು ನೋಡಿ ನಾವು ರೋಮಾಂಚನಗೊಂಡಿದ್ದೇವೆ. ಕೇವಲ 6 ತಿಂಗಳಲ್ಲಿ ದೇಶಾದ್ಯಂತ 13,000 ಕ್ಕೂ ಹೆಚ್ಚು ಹ್ಯಾರಿಯರ್.ಇವಿಗಳನ್ನು ಡೆಲಿವರಿ ನೀಡಿದ್ದೇವೆ, ಅದರ ಸಾಮರ್ಥ್ಯವು ಭಾರತದ ಉದ್ದಗಲಕ್ಕೂ ಯಶಸ್ವಿಯಾಗಿ ತೋರಿಸಿಕೊಟ್ಟಿದೆ.
ಈಗ ನಾವು ಪರ್ಫಾಮೆನ್ಸ್ ಎಸ್‌ಯುವಿಯನ್ನು ಮೆಚ್ಚುಗೆ ಪಡೆದ ಪವರ್‌ಫುಲ್ ಡ್ಯುಯಲ್ - ಮೋಟಾರ್ ಕ್ವಾಡ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೌಲ್ಯವನ್ನು ನೀಡುವ ಹ್ಯಾರಿಯರ್.ಇವಿನೊಂದಿಗೆ ಹೆಚ್ಚಿನ ಗ್ರಾಹಕರನ್ನು ನಮ್ಮ ಟಾಟಾ ಮೋಟಾರ್ಸ್ ಕುಟುಂಬಕ್ಕೆ ಆಹ್ವಾನಿಸುತ್ತಿದ್ದೇವೆ" ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದರು.


Click it and Unblock the Notifications








