Tata: ಟಾಟಾ ಬ್ರಹ್ಮಾಸ್ತ್ರವಿದು: ಖರೀದಿಸಲು ಮುಗಿಬಿದ್ದ ಜನ: 10 ಸಾವಿರ ಎಸ್‌ಯುವಿಗಳು ಡೆಲಿವರಿ
ಭಾರತದಲ್ಲಿ ನವೆಂಬರ್ 25, 2025 ರಂದು ಬಿಡುಗಡೆಯಾದ ಹೊಸ 'ಟಾಟಾ ಸಿಯೆರಾ' ದೇಶಾದ್ಯಂತ ಗ್ರಾಹಕರಿಂದ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿದೆ. ಈ ಅದ್ಭುತ ಪ್ರತಿಕ್ರಿಯೆಯು ಭಾರತದಾದ್ಯಂತ ಗ್ರಾಹಕರ ಹೃದಯದಲ್ಲಿ ಪ್ರೀಮಿಯಂ ಮಿಡ್ - ಸೈಜ್ ಎಸ್‌ಯುವಿಯಾಗಿ ಸಿಯೆರಾದ ಐಕಾನಿಕ್ ಸ್ಥಾನವನ್ನು ಒತ್ತಿಹೇಳುತ್ತದೆ. ಅಲ್ಲದೇ ದೇಶದಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯುತ್ತಿದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಬುಕಿಂಗ್‌ಗಳು ದಾಖಲೆ ಮಟ್ಟದಲ್ಲಿ ಹರಿದುಬರುತ್ತಿರುವುದರಿಂದ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಡೆಲಿವರಿಗಳನ್ನು ವೇಗವಾಗಿ ನೀಡಲು ಪ್ರಯತ್ನಿಸುತ್ತಿದೆ.
ಇದೀಗ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ 10,000 ಯುನಿಟ್ ಸಿಯೆರಾ ಎಸ್‌ಯುವಿಗಳನ್ನು ಗ್ರಾಹಕರಿಗೆ ಡೆಲಿವರಿ ನೀಡಿರುವುದಾಗಿ ಘೋಷಿಸಿದೆ. ಬುಕಿಂಗ್‌ಗಳು ಅಧಿಕೃತವಾಗಿ ಪ್ರಾರಂಭವಾದ ಮೊದಲ ದಿನವೇ 70,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ದಾಖಲಿಸಿತ್ತು. ಪ್ರಸ್ತುತ ಹೊಸ 'ಟಾಟಾ ಸಿಯೆರಾ' ಎಸ್‌ಯುವಿ ಬೆಲೆ ಬೆಲೆಯು ರೂ. 11.49 ಲಕ್ಷ (ಎಕ್ಸ್-ಶೋರೂಂ) ದಿಂದ ಟಾಪ್ ವೇರಿಯೆಂಟ್ ರೂ. 21.29 ಲಕ್ಷ (ಎಕ್ಸ್-ಶೋರೂಂ) ದವರೆಗೆ ಇದೆ.

ಆಧುನಿಕ ತಂತ್ರಜ್ಞಾನದೊಂದಿಗೆ 90 ರ ದಶಕದ ಕ್ಲಾಸಿಕ್ ಟಾಟಾ ಸಿಯೆರಾ ಕಾರನ್ನು ಮರಳಿ ಮಾರುಕಟ್ಟೆಗೆ ತರಲಾಗಿದೆ. 1991 ರಲ್ಲಿ ಸಿಯೆರಾ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದಾಗ, ಅದು ಭಾರತ ಕಂಡ ಎಲ್ಲ ಕಾರುಗಳಿಗಿಂತ ಭಿನ್ನವಾಗಿತ್ತು. ನಂತರ ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಯಿತು. ಇದೀಗ ಆ ದಂತಕಥೆ ಮರಳಿದೆ - ಹೊಸ ಯುಗಕ್ಕಾಗಿ ಮರುಶೋಧಿಸಿ ಆಧುನಿಕ ವಿನ್ಯಾಸ, ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.
ಹೊಸ ಟಾಟಾ ಸಿಯೆರಾ ವಿಶೇಷತೆಗಳು
ಹೊಸ ಟಾಟಾ ಸಿಯೆರಾ ಇಂಟೀರಿಯರ್‌ನಲ್ಲಿ 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3 - ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್, ವೈರ್‌ಲೆಸ್ ಹೆಡ್‌ಫೋನ್‌ಗಳೊಂದಿಗೆ 12.3 - ಇಂಚಿನ ಪ್ಯಾಸೆಂಜರ್ ಸ್ಕ್ರೀನ್ ನೀಡಲಾಗಿದೆ. ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹೆಡ್-ಅಪ್ ಡಿಸ್ಪ್ಲೇ, 12-ಸ್ಪೀಕರ್ JBL ಸೌಂಡ್ ಸಿಸ್ಟಮ್ ಮತ್ತು ಡ್ಯಾಶ್‌ಬೋರ್ಡ್-ಮೌಂಟೆಡ್ ಸೌಂಡ್ ಬಾರ್ ಅನ್ನು ಒಳಗೊಂಡಿದೆ.

ಇವಿಷ್ಟೆ ಅಲ್ಲದೆ ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ರೇರ್-ಎಸಿ ವೆಂಟ್‌ಗಳು, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ. ಎಂಜಿನ್ ವಿಷಯಕ್ಕೆ ಬಂದರೆ ಮೂರು ಪವರ್‌ಫುಲ್ ಎಂಜಿನ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ತಮ್ಮಿಷ್ಟದಂತೆ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ.
ಮೊದಲನೇಯದು 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಎರಡನೇಯದು 1.5-ಲೀಟರ್ 4-ಸಿಲಿಂಡರ್ ಡೈರೆಕ್ಟ್-ಇಂಜೆಕ್ಷನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ ಮೂರನೇಯದು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಾಗಿದೆ. ವೇರಿಯೆಂಟ್ ಅವಲಂಬಿಸಿ 6 - ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ & 7 - ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ.

ಸುರಕ್ಷತೆ ವಿಷಯಕ್ಕೆ ಬಮದರೆ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾ, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ನೀಡಲಾಗಿದೆ.
NATRAX ಇಂದೋರ್‌ನಲ್ಲಿ ನಡೆದ ಪ್ರಮಾಣೀಕೃತ ಪರೀಕ್ಷೆಯಲ್ಲಿ ಸಿಯೆರಾ 29.9 kmpl ಮೈಲೇಜ್ ನೀಡಿರುವುದಾಗಿ ಟಾಟಾ ಹೇಳಿಕೊಂಡಿದೆ. ಹೊಸ ಟಾಟಾ ಸಿಯೆರಾ ಕಾರು ಭಾರತೀಯ ಎಸ್‌ಯುವಿ ವಿಭಾಗದಲ್ಲಿ ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಮಾರುತಿ ಸುಜುಕಿ ವಿಕ್ಟೋರಿಸ್ ನಂತಹ ಪ್ರತಿಸ್ಪರ್ಧಿಗಳನ್ನು ನೇರವಾಗಿ ಗುರಿಯಾಗಿಸಿಕೊಂಡು ಮಧ್ಯಮ ಗಾತ್ರದ SUV ವಿಭಾಗದಲ್ಲಿ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ.


Click it and Unblock the Notifications








