Tata: ಟಾಟಾದ ಗತ್ತು ಹೆಚ್ಚಿದ ಕಾರಿದು.. 24 Km ಮೈಲೇಜ್.. 7 ಲಕ್ಷ ರೂಪಾಯಿ, ಪ್ರತಿದಿನ 549 ಕಾರುಗಳು ಸೇಲ್ಸ್!

ಟಾಟಾ ನೆಕ್ಸಾನ್ (Tata Nexon) ಪ್ರಖ್ಯಾತ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಅದಕ್ಕೆ ತಕ್ಕಂತೆ ದಿನದಿಂದ ದಿನಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ ಕಾರು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ದೀರ್ಘಕಾಲ ಬಾಳಿಕೆಯೂ ಬರುತ್ತಿದೆ.

2025ರಲ್ಲಿಯೂ 'ಟಾಟಾ ನೆಕ್ಸಾನ್' ಎಸ್‌ಯುವಿಯು ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದೆ. ಒಟ್ಟು 200,561 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಪ್ರತಿದಿನ ಸರಾಸರಿ 549 ಯುನಿಟ್‌ 'ನೆಕ್ಸಾನ್' ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದು ಸ್ಟ್ಯಾಂಡರ್ಡ್ ಹಾಗೂ ಎಲೆಕ್ಟ್ರಿಕ್ ಚಾಲಿತ ರೂಪದಲ್ಲಿ ಖರೀದಿಗೆ ಲಭ್ಯವಿದೆ.

Tata Nexon CY2025 Sales Every Day 549 Cars Delivery

ಸ್ಟ್ಯಾಂಡರ್ಡ್ 'ಟಾಟಾ ನೆಕ್ಸಾನ್' ವಿಶೇಷತೆಗಳೇನು:

ಈ ಎಸ್‌ಯುವಿಯು ಕೈಗೆಟುಕುವ ದರದಲ್ಲೂ ಸಿಗುತ್ತದೆ. ರೂ.7.32 ಲಕ್ಷದಿಂದ ರೂ.14.05 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್, ಫಿಯರ್‌ಲೆಸ್ ಮತ್ತು ಫಿಯರ್‌ಲೆಸ್ ಪ್ಲಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.

ನೂತನ 'ನೆಕ್ಸಾನ್' ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಪ್ಯೂರ್ ಗ್ರೇ, ಗ್ರಾಸ್‌ಲ್ಯಾಂಡ್ ಬೀಜ್, ಡೇಟೋನಾ ಗ್ರೇ, ಪ್ರಿಸ್ಟೈನ್ ವೈಟ್, ಓಷನ್ ಬ್ಲೂ, ಕಾರ್ಬನ್ ಬ್ಲ್ಯಾಕ್ ಮತ್ತು ಅಟ್ಲಾಸ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಹೆಚ್ಚು ವಿಶಾಲ ಗಾತ್ರದಲ್ಲಿದೆ. 208 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,498 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

Tata Nexon CY2025 Sales Every Day 549 Cars Delivery

ಇದು 1.2-ಲೀ. ಪೆಟ್ರೋಲ್, 1.5 ಲೀ. ಡೀಸೆಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 17 ರಿಂದ 24 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 12 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಕಾರು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್-ಡ್ರೈವರ್ ಡಿಸ್‌ಪ್ಲೇ, ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ ಸನ್‌ರೂಫ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.

Tata Nexon CY2025 Sales Every Day 549 Cars Delivery

ಟಾಟಾ ನೆಕ್ಸಾನ್ ಇವಿ (Tata Nexon EV):

ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ರೂ.12.49 ಲಕ್ಷದಿಂದ ರೂ.17.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಪ್ರಿಸ್ಟೈನ್ ವೈಟ್, ಡೇಟೋನಾ ಗ್ರೇ, ಫ್ಲೇಮ್ ರೆಡ್, ಇಂಟೆನ್ಸಿ ಟೀಲ್, ಎಂಪವರ್ಡ್ ಆಕ್ಸೈಡ್, ಕ್ರಿಯೇಟಿವ್ ಓಷನ್ ಮತ್ತು ಎಂಪವರ್ಡ್ ಡಾರ್ಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,498 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ 'ನೆಕ್ಸಾನ್ ಇವಿ' 30 ರಿಂದ 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 275 ರಿಂದ 489 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್‌ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾನ್ನು ಒಳಗೊಂಡಿದೆ.

More from DriveSpark

Article Published On: Thursday, January 29, 2026, 8:30 [IST]
English summary
Tata nexon cy2025 sales every day 549 cars delivery
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+