ಟಾಟಾ ಪಂಚ್‌ ಅಬ್ಬರಕ್ಕೆ ಬ್ರೇಕ್ ಹಾಕೋಕೆ ಹೊಸ ಹ್ಯುಂಡೈ ಕಾರು ಸಿದ್ಧ: ಅತಿ ಶೀಘ್ರದಲ್ಲೇ ಅಗ್ಗದ ಬೆಲೆಗೆ ಬಿಡುಗಡೆ?

ಇತ್ತೀಚೆಗೆ 2026ರ ನೂತನ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಇದಕ್ಕೆ ಹುಂಡೈ ಎಕ್ಸ್‌ಟರ್ (Hyundai Exter) ನೇರವಾದ ಎದುರಾಳಿಯಾಗಿದೆ. ಸದ್ಯ ಇದೇ ಎಸ್‌ಯುವಿಯನ್ನು ನವೀಕರಿಸಲಾಗುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮಾರ್ಚ್‌ನಲ್ಲಿ ಹೊಚ್ಚ ಹೊಸ 'ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್'ನ್ನು ಮಾರಾಟಕ್ಕೂ ತರಲಾಗುತ್ತದೆ. ಈ ಕಾರು ಪ್ರಾಯೋಗಿಕ ಸಂಚಾರವನ್ನು ನಡೆಸುವಾಗಲೂ ಕಾಣಿಸಿಕೊಂಡಿದೆ. ಅದರ 'ಸ್ಪೈ' ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ.

ಮುಂಬರುವ 'ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್' ನೋಡಲು ಕೂಡ ತುಂಬಾ ಚೆನ್ನಾಗಿರಲಿದೆ. ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದ ಮಾಡೆಲ್‌ನ್ನು ಸಂಪೂರ್ಣವಾಗಿ ಕಪ್ಪು ಬಣ್ಣದ ಕವರ್‌ನಿಂದ ಮರೆ ಮಾಚಲಾಗಿತ್ತು. ಹೀಗಾಗಿ, ವಿನ್ಯಾಸದ ಕುರಿತಂತೆ ಅಷ್ಟಾಗಿ ಯಾವುದೇ ಪ್ರಮುಖಾಂಶಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.

Tata Punch Rival Hyundai Exter Facelift Spied Launch Soon Details

ನೂತನ 2026ರ 'ಹುಂಡೈ ಎಕ್ಸ್‌ಟರ್' ಮುಂಭಾಗ (ಫ್ರಂಟ್) ಮರುವಿನ್ಯಾಸಗೊಳಿಸಲಾದ ಗ್ರಿಲ್ ಹಾಗೂ ಬಂಪರ್‌ನ್ನು ಪಡೆದಿರಬಹುದು. ಸ್ಪ್ಲಿಟ್-ಸ್ಟೈಲ್ ಹೆಡ್‌ಲ್ಯಾಂಪ್‌ಗಳು ಹಾಗೂ 'ಹೆಚ್' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಡಿಆರ್‌ಎಲ್‌ಗಳನ್ನು ಹಾಗೆಯೇ ಮುಂದುವರಿಸಬಹುದು. ಹಿಂಭಾಗ (ರೇರ್) ನವೀನವಾದ ಬಂಪರ್‌ ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆದಿರುವ ನಿರೀಕ್ಷೆಯಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸದಲ್ಲೂ ಹಲವು ಬದಲಾವಣೆಗಳಿರಲಿವೆ. ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿರಬಹುದು ಎನ್ನಲಾಗಿದೆ. ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ರೇರ್-ಎಸಿ ವೆಂಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ಹಿಲ್-ಅಸಿಸ್ಟ್ ಕಂಟ್ರೋಲ್‌ನ್ನು ಪಡೆದಿರುವ ಸಾಧ್ಯತೆಯಿದೆ.

Tata Punch Rival Hyundai Exter Facelift Spied Launch Soon Details

ಇದರ ಪವರ್‌ಟ್ರೇನ್‌ನಲ್ಲಿ ಯಾವುದೇ ಮಾರ್ಪಾಡುಗಳಿಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುತ್ತದೆ ಎಂದು ಹೇಳಲಾಗಿದೆ. 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿರಲಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ. 19.2 ರಿಂದ 27.1 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಹೊಸ 'ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್' ಸುತ್ತಳತೆಯಲ್ಲೂ ವ್ಯತ್ಯಾಸಗಳಿರುವುದಿಲ್ಲ. 185 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,450 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿರಲಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು 391 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿರುವ ನೀರಿಕ್ಷೆಯಿದೆ.

ಈ ನೂತನ ಕಾರು ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಾಗಲಿದೆ. ಕನಿಷ್ಠ ರೂ.6 ಲಕ್ಷ ಹಾಗೂ ಗರಿಷ್ಠ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಲಿದ್ದು, ಎಲ್ಲ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಖರೀದಿಸಲು ಸಾಧ್ಯವಾಗಲಿದೆ. ಈಗಿರುವ 'ಎಕ್ಸ್‌ಟರ್' ರೂ.5.74 ಲಕ್ಷದಿಂದ ರೂ.9.61 ಲಕ್ಷ ಬೆಲೆಯನ್ನು ಹೊಂದಿದೆ.

'ಹುಂಡೈ ಎಕ್ಸ್‌ಟರ್' ಎದುರಾಳಿ 'ಟಾಟಾ ಪಂಚ್‌ ಫೇಸ್‌ಲಿಫ್ಟ್' ವಿಶೇಷತೆಗಳೇನು:

ಇದು ರೂ.5.59 ಲಕ್ಷದಿಂದ ರೂ.9.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಪ್ರಿಸ್ಟೈನ್ ವೈಟ್, ಡೇಟೋನ್ ಗ್ರೇ, ಬೆಂಗಾಲ್ ರೂಜ್, ಕೂರ್ಗ್ ಕ್ಲೌಡ್ಸ್, ಸೈಂಟಿಫಿಕ್ ಬ್ಲೂ ಹಾಗೂ ಕ್ಯಾರಮೆಲ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 5 ಆಸನಗಳನ್ನು ಹೊಂದಿದೆ.

ಹೊಸ 'ಪಂಚ್‌' 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 19 ರಿಂದ 27 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಪುಶ್ ಬಟನ್ ಸ್ಟಾರ್ಟ್‌, ಟೈಪ್-ಸಿ ಫಾಸ್ಟ್ ಚಾರ್ಜರ್‌, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌, ಸನ್‌ರೂಫ್‌ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Source Link: Rushlane

More from DriveSpark

Article Published On: Wednesday, January 28, 2026, 16:03 [IST]
English summary
Tata punch rival hyundai exter facelift spied launch soon details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+