Tata: ಬಡವರು ಕೂಡ ಕಾರು ಖರೀದಿಸಿ ಹಣ ಗಳಿಸಲು ಅಗ್ಗದ ಕಾರು ಬಿಡುಗಡೆ ಮಾಡಿದ ಟಾಟಾ!
ಟಾಟಾ ಮೋಟಾರ್ಸ್ (Tata Motors) ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಮಧ್ಯಮ ವರ್ಗದವರಿಂದ ಹಿಡಿದು ಶ್ರೀಮಂತ ಗ್ರಾಹಕರವರೆಗೆ ಪ್ರತಿಯೊಬ್ಬರಿಗೆ ಅನುಕೂಲವಾಗಿರುವಂತಹ ಕಾರುಗಳನ್ನು ನೀಡುತ್ತಾ ಬಂದಿದೆ. ಇದೀಗ ಫ್ಲೀಟ್‌ಗಾಗಿ ಮುಖ್ಯವಾಗಿ ವಾಹನವನ್ನೆ ನಂಬಿಕೊಂಡು ನಿತ್ಯ ಜೀವನ ನಡೆಸುವವರಿಗಾಗಿ ಹೊಸ ಟ್ಯಾಕ್ಸಿ ಕಾರುನ್ನು ಬಿಡುಗಡೆ ಮಾಡಿದೆ. ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಚಾಲಕರಿಗೆ ಉತ್ತ ಲಾಭ ತಂದುಕೊಡುತ್ತದೆ ಎಂದು ಟಾಟಾ ಮೊಟಾರ್ಸ್ ಭರವಸೆ ನೀಡಿದೆ.
ಪೆಟ್ರೋಲ್ ಮತ್ತು CNG ಆಯ್ಕೆಯಲ್ಲಿ ಬಿಡುಗಡೆಯಾಗಿರುವ ಹೊಸ ಟಾಟಾ ಎಕ್ಸ್‌ಪ್ರೆಸ್ (Tata XPRES) ಕಾರಿಗಾಗಿ ಬುಕಿಂಗ್‌ಗಳು ಈಗ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಪ್ರಾರಂಭವಾಗಿವೆ. ಪೆಟ್ರೋಲ್ ವೇರಿಯೆಂಟ್ ರೂ.5.59 ಲಕ್ಷ ಮತ್ತು CNG ವೇರಿಯೆಂಟ್ ರೂ.6.59 ಲಕ್ಷದಿಂದ (ಎರಡು ಎಕ್ಸ್-ಶೊರೂಂ ಬೆಲೆಗಳು) ಪ್ರಾರಂಭವಾಗುತ್ತದೆ. ಟಾಟಾ ಮೋಟಾರ್ಸ್ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.

"ಪ್ರಯಾಣಿಕರು ಮತ್ತು ಮಾಲೀಕರು ಸೇರಿದಂತೆ ಫ್ಲೀಟ್ ಗ್ರಾಹಕರು ಎದುರಿಸುವ ನಿಜವಾದ ಕಾರ್ಯಾಚರಣಾ ಸವಾಲುಗಳನ್ನು ಪರಿಹರಿಸಲು ಟಾಟಾ XPRES ಅನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ಸಾಬೀತಾಗಿರುವ 1.2 - ಲೀಟರ್ ರೆವೊಟ್ರಾನ್ ಎಂಜಿನ್‌ನಲ್ಲಿ ನಿರ್ಮಾಣವಾಗಿರುವ ಈ ಕಾರು, ದೀರ್ಘಾವಧಿಯ ವಾರೆಂಟಿ ಮತ್ತು ಮೀಸಲಾದ ಫ್ಲೀಟ್ ಡೀಲರ್‌ಶಿಪ್‌ಗಳಿಂದ ಬೆಂಬಲಿತವಾಗಿದೆ.
ಫ್ಲೀಟ್ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುತ್ತಾ, ವಿಭಾಗದಲ್ಲಿ ಅತ್ಯುತ್ತಮವಾಗಿ ಬಳಸಬಹುದಾದ ಬೂಟ್ ಜಾಗದೊಂದಿಗೆ 70 - ಲೀಟರ್ ಟ್ವಿನ್ - ಸಿಲಿಂಡರ್ CNG ಕಾರನ್ನು ಪರಿಚಯಿಸಿದ್ದೇವೆ. ಜೊತೆಗೆ ದೊಡ್ಡ ಬೂಟ್ ಸ್ಥಳದೊಂದಿಗೆ ಪೆಟ್ರೋಲ್ ರೂಪಾಂತರವನ್ನು ಸಹ ಪರಿಚಯಿಸಿದ್ದೇವೆ. ನಮ್ಮ ಗ್ರಾಹಕರಿಗೆ ಸಂಪೂರ್ಣ, ಭವಿಷ್ಯಕ್ಕೆ ಸಿದ್ಧವಾದ ಕಾರುಗಳನ್ನು ನೀಡುತ್ತಿದ್ದೇವೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದರು.

ಟಾಟಾ ಎಕ್ಸ್‌ಪ್ರೆಸ್ ಕಾರಿನ ಮೇಲೆ 3 ವರ್ಷ ಅಥವಾ 1,00,000 ಕಿ.ಮೀ (ಯಾವುದು ಮೊದಲೋ ಅದು) ವಾರೆಂಟಿ ನೀಡಲಾಗುತ್ತದೆ. ಇದನ್ನು 5 ವರ್ಷಗಳು ಅಥವಾ 1,80,000 ಕಿ.ಮೀ (ಯಾವುದು ಮೊದಲೋ ಅದು) ವರೆಗೆ ವಿಸ್ತರಿಸಬಹುದು. ಹೆಚ್ಚುವರಿಯಾಗಿ ರೂ. 0.47/ಕಿ.ಮೀ ಕಡಿಮೆ ನಿರ್ವಹಣಾ ವೆಚ್ಚದಲ್ಲಿ, ಫ್ಲೀಟ್ ಗ್ರಾಹಕರಿಗೆ ಅನುಗುಣವಾಗಿ ಹಣಕಾಸು ಪರಿಹಾರ ನೀಡುತ್ತದೆ ಎಂದು ಟಾಟಾ ಭರವಸೆ ನೀಡಿದೆ.
ಟಾಟಾ ಎಕ್ಸ್‌ಪ್ರೆಸ್ 1.2L ರೆವೊಟ್ರಾನ್ ಎಂಜಿನ್‌ನಿಂದ ಚಾಲಿತವಾಗಿದ್ದು, ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಪೆಟ್ರೋಲ್ ಮತ್ತು CNG ವೇರಿಯೆಂಟ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಕಾರಿನ ಬೂಟ್ ಜಾಗದಲ್ಲಿ ಟ್ವಿನ್ - ಸಿಲಿಂಡರ್ ಸಿಎನ್‌ಜಿ ಪ್ಯಾಕೇಜಿಂಗ್, ಲಗೇಜ್ ಇಡಲು ಯಾವುದೇ ಕಷ್ಟವಾಗದಂತೆ ಉತ್ತಮ ಜಾಗವನ್ನು ನೀಡುತ್ತದೆ.

ಎಕ್ಸ್‌ಪ್ರೆಸ್ CNG, ತನ್ನ ವಿಭಾಗದಲ್ಲಿಯೇ ಮೊದಲ ಬಾರಿಗೆ 70 ಲೀಟರ್ ಟ್ವಿನ್ - ಸಿಲಿಂಡರ್ CNG ಟ್ಯಾಂಕ್ ಹೊಂದಿದ್ದು, ಗ್ರಾಹಕರು ಟ್ಯಾಂಕ್‌ಗೆ ಇಂಧನ ತುಂಬಿಸುವ ಬಗ್ಗೆ ಚಿಂತಿಸದೆ ದೀರ್ಘ ದೂರ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇನ್ನು ಪೆಟ್ರೋಲ್ ವೇರಿಯೆಂಟ್ ಸೆಡಾನ್ ವಿಭಾಗದಲ್ಲಿಯೇ 419 ಲೀಟರ್ ಸಾಮರ್ಥ್ಯದ ಅತಿದೊಡ್ಡ ಬೂಟ್ ಜಾಗವನ್ನು ಹೊಂದಿದೆ. ಈ ಮೂಲಕ ಪ್ರಯಾಣಿಕರಿಗೆ ದೂರದ ಪ್ರಯಾಣಗಳಿಗೂ ಹೊಂದಿಕೊಳ್ಳುತ್ತದೆ.
ಈ ವಿಸ್ತೃತ ಪೋರ್ಟ್‌ಫೋಲಿಯೊದೊಂದಿಗೆ, ಟಾಟಾ XPRES ಫ್ಲೀಟ್ (ಪೆಟ್ರೋಲ್, CNG ಮತ್ತು EV) ವಿಮಾನ ನಿಲ್ದಾಣ ವರ್ಗಾವಣೆಗಳು, ಕ್ಯಾಬ್ ಅಗ್ರಿಗೇಟರ್‌ಗಳು, ಇಂಟರ್ ಸಿಟಿ ಕಾರ್ಯಾಚರಣೆಗಳು, ಉದ್ಯೋಗಿ ಸಾರಿಗೆ, ರೆಂಟ್- ಎ -ಕಾರ್ ಸೇವೆಗಳು ಮತ್ತು ಪ್ರವಾಸಿ ಟ್ಯಾಕ್ಸಿ ನಿರ್ವಾಹಕರು ಸೇರಿದಂತೆ ಹೆಚ್ಚಿನ ಪ್ರಮಾಣದ, ಹೆಚ್ಚಿನ ಬಳಕೆಯ ವಿಭಾಗಗಳಲ್ಲಿ ಗಮನಾರ್ಹ ಬೆಳವಣಿಗೆಯ ಅವಕಾಶಗಳನ್ನು ಪಡೆಯಬಹುದು ಎಂದು ಟಾಟಾ ಹೇಳಿದೆ.


Click it and Unblock the Notifications








