Mileage cars: ಬರೀ 5 ಲಕ್ಷದೊಳಗೆ ಸಿಗುತ್ತವೆ... 30 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್ ಕಾರುಗಳು!
ಉತ್ತಮ ಮೈಲೇಜ್, ಕಡಿಮೆ ನಿರ್ವಹಣೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ನೀಡುವ ಕಡಿಮೆ ಬೆಲೆಯ ಕಾರುಗಳನ್ನು ಹುಡುಕುತ್ತಿರುವವರಿಗೆ ಈ ಲೇಖನ ಸಹಕರಿಸಬಹುದು. ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸಲು ಬಯಸುವವರಿಗೆ, ಟಾಟಾ, ಮಾರುತಿ, ರೆನಾಲ್ಟ್ ಕಂಪನಿಯ ಕಾರುಗಳು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಬೆಸ್ಟ್ ಕಾರುಗಳನ್ನು ನೀಡುತ್ತಿವೆ. ಇವು ಸಿಟಿ ಪ್ರಯಾಣ ಹಾಗೂ ಲಾಂಗ್ ಡ್ರೈವ್ ಎರಡಕ್ಕೂ ಹೊಂದಿಕೊಳ್ಳುವ ಕಾರುಗಳಾಗಿದ್ದು, ಐದು ಮಂದಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುವ ಅತ್ಯುತ್ತಮ ಮೈಲೇಜ್ ಕಾರು (Best Mileage cars) ಗಳಾಗಿವೆ.
ಮಾರುತಿ ವ್ಯಾಗನ್ ಆರ್: ವ್ಯಾಗನ್ ಆರ್ ಒಂದು ಬಹುಮುಖ ಹ್ಯಾಚ್‌ಬ್ಯಾಕ್ ಆಗಿದ್ದು, ಇದರ ಬೆಲೆ ರೂ. 4.99 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. 1.2-ಲೀಟರ್ AMT ಪೆಟ್ರೋಲ್ ವೇರಿಯೆಂಟ್ 22.34 ಕಿ.ಮೀ ಹಾಗೂ ಸಿಎನ್‌ಜಿ ಆವೃತ್ತಿಯು ಪ್ರತಿ ಕೆ.ಜಿಗೆ ಸುಮಾರು 34 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಸ್ಮಾರ್ಟ್ ಪ್ಲೇ ಸಿಸ್ಟಂ, ಆರು ಏರ್ ಬ್ಯಾಗ್‌ಗಳು ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ಸಹ ಹೊಂದಿದೆ.

ಮಾರುತಿ ಸೆಲೆರಿಯೋ: ಮಾರುತಿ ಸೆಲೆರಿಯೋ ರೂ.4.69 ಲಕ್ಷ ಎಕ್ಸ್ ಶೋರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್, ಸ್ಮಾರ್ಟ್ ಪ್ಲೇ ಇನ್ಫೋಟೈನ್ ಮೆಂಟ್ ಮತ್ತು ಆರು ಏರ್‌ಬ್ಯಾಗ್ ಗಳೊಂದಿಗೆ ಬರುತ್ತದೆ. ಇದರ ಪೆಟ್ರೋಲ್ ಆವೃತ್ತಿಯು, ಪ್ರತಿ ಲೀಟರ್‌ಗೆ 26 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ ಪ್ರತಿ ಕೆ.ಜಿಗೆ 34 ಕಿ.ಮೀ ಮೈಲೇಜ್ ನೀಡುತ್ತದೆ. ಸಣ್ಣ ಪ್ರಮಾಣದ ಹೊರತಾಗಿಯೂ, ಸೆಲೆರಿಯೊದ 1.0-ಲೀಟರ್ ಎಂಜಿನ್ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ.
ರೆನಾಲ್ಟ್ ಕ್ವಿಡ್: ರೆನಾಲ್ಟ್ ಕ್ವಿಡ್ ಒಂದು ಆರಂಭಿಕ ಹಂತದ ಹ್ಯಾಚ್‌ಬ್ಯಾಕ್ ಆಗಿದ್ದು, ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆಯು 4.29 ಲಕ್ಷ ರೂ. ಇದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 22 ಕಿ.ಮೀ ಮೈಲೇಜ್ ನೀಡುತ್ತದೆ. ಯೋಗ್ಯವಾದ ಸ್ಥಳಾವಕಾಶ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕ್ವಿಡ್ ಸಣ್ಣ ಎಸ್‌ಯುವಿ ಲುಕ್‌ನೊಂದಿಗೆ 999 ಸಿಸಿ ಎಂಜಿನ್ ಹೊಂದಿದೆ. ಇದು ಆಂಡ್ರಾಯ್ಡ್ ಆಟೋ, ಡಿಜಿಟಲ್ ಕ್ಲಸ್ಟರ್ ಮತ್ತು ಹೈ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಆಲ್ಟೊ ಕೆ10: ಮಾರುತಿ ಆಲ್ಟೊ ಕೆ10 ಕೈಗೆಟುಕುವ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ಯೋಗ್ಯವಾದ ಸ್ಥಳಾವಕಾಶ, ಸಿಎನ್‌ಜಿ ಆಯ್ಕೆ ಸೇರಿದಂತೆ ಉತ್ತಮ ಮೈಲೇಜ್ ನೀಡುತ್ತದೆ. ಇದರ ಎಕ್ಸ್ ಶೋರೂಂ ಬೆಲೆಯು ರೂ. 3.69 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಇದು ಯೋಗ್ಯವಾದ ಸ್ಥಳಾವಕಾಶ, ಸಿಎನ್‌ಜಿ ಆಯ್ಕೆ ಸೇರಿದಂತೆ ಇಂಧನ ದಕ್ಷ ಪವರ್‌ಟ್ರೇನ್ ಹೊಂದಿದೆ.
ಆಲ್ಟೊ ಕೆ10 ಕಾರಿನಲ್ಲಿ ಏಳು ಇಂಚಿನ ಟಚ್‌ಸ್ಕ್ರೀನ್ ಮತ್ತು ಆರು - ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಇದರ ಕಾರ್ಯಕ್ಷಮತೆ ಮತ್ತು ಉತ್ತಮ ಚಾಲನಾ ಸಾಮರ್ಥ್ಯವು ಕಾರುನ್ನು ಅತ್ಯುತ್ತಮ ಆರಂಭಿಕ ಮಟ್ಟದ ಹ್ಯಾಚ್‌ಬ್ಯಾಕ್ ಆಯ್ಕೆಗಳಲ್ಲಿ ಒಂದನ್ನಾಗಿಸಿದೆ. ಇದರ 1 ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್ ಪಟ್ರೋಲ್‌ಗೆ 24.5 ಕಿ.ಮೀ ಮೈಲೆಜ್ ನೀಡುತ್ತದೆ. ಭಾರತದಲ್ಲಿ ಕೈಗೆಟುಕವ ಬೆಲೆಯ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ.

ಟಾಟಾ ಟಿಯಾಗೊ: ಟಾಟಾ ಟಿಯಾಗೊ ಒಂದು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದ್ದು, ಇದು 1.2 ಲೀಟರ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು 10.25-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಜೊತೆಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 4-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಮತ್ತು CNG ಇಂಧನ ಆಯ್ಕೆಗಳೊಂದಿಗೆ ಸಾಕಷ್ಟು ವೈಶಿಷ್ಟ್ಯಗಳಿಂದ ತುಂಬಿದೆ.
ಸುರಕ್ಷತೆ ಮತ್ತು ಆರಾಮದಾಯಕವಾದ ಟಾಟಾ ಟಿಯಾಗೊ ಎಕ್ಸ್ ಶೋರೂಂ ಬೆಲೆಯು ರೂ.4.57 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಪೆಟ್ರೋಲ್ ನಲ್ಲಿ ಪ್ರತಿ ಲೀಟರ್‌ಗೆ 20 ಕಿ.ಮೀ ಮೈಲೇಜ್ ಮತ್ತು ಸಿಎನ್‌ಜಿನಲ್ಲಿ ಪ್ರತಿ ಕೆ.ಜಿಗೆ 27 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ವಿಶಾಲವಾದ ಕ್ಯಾಬಿನ್ ಮತ್ತು ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಉತ್ತಮ ಆಯ್ಕೆಯಾಗಿದೆ.


Click it and Unblock the Notifications








