ಜನಮೆಚ್ಚಿದ 5 ಸೆಡಾನ್‌ಗಳಿವು.. 5.49 ಲಕ್ಷದಿಂದ ಶುರು, 34 Km ವರೆಗೆ ಮೈಲೇಜ್.. ದೂರ ಪ್ರಯಾಣಕ್ಕೆ ಬೆಸ್ಟ್ ಚಾಯ್ಸ್!

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಆದರೂ ಸೆಡಾನ್‌ಗಳಿಗೆ ಪ್ರತೇಕ ಅಭಿಮಾನಿ ಬಳಗವಿದೆ. ಇವು ಉತ್ತಮ ಇಂಧನ ದಕ್ಷತೆ, ಸುಗಮ ನಿರ್ವಹಣೆ ಹಾಗೂ ದೂರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿವೆ. ಹೀಗಾಗಿ, ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ನೀವು ಹೊಚ್ಚ ಹೊಸ ಸೆಡಾನ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಟಾಟಾ ಟಿಗೂರ್, ಹ್ಯುಂಡೈ ಔರಾ, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಹಾಗೂ ಹೋಂಡಾ ಸಿಟಿಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಈ ಕಾರುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಟಾಟಾ ಟಿಗೂರ್ (Tata Tigor):

ಇದೊಂದು ಎಂಟ್ರಿ-ಲೆವೆಲ್ ಸೆಡಾನ್ ಆಗಿದ್ದು, ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.5.49 ಲಕ್ಷ ಹಾಗೂ ಗರಿಷ್ಠ ರೂ.8.74 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಮೀಟಿಯರ್ ಬ್ರಾಂಜ್, ಸೂಪರ್ನೋವಾ ಕಾಪರ್, ಡೇಟೋನಾ ಗ್ರೇ, ಅರಿಜೋನಾ ಬ್ಲೂ ಹಾಗೂ ಪ್ರಿಸ್ಟೈನ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,450 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

Top 5 Best Sedan Cars In India Tigor Aura Dzire Amaze And City

ನೂತನ 'ಟಿಗೂರ್' 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು. 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 19 ರಿಂದ 28 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್ ಸ್ಟಾರ್ಟ್-ಸ್ಟಾಪ್ ಬಟನ್ ಹಾಗೂ ರೇರ್ ಸೆನ್ಸರ್ಸ್ ವೈಪರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಪಡೆದಿದೆ.

ಹ್ಯುಂಡೈ ಔರಾ (Hyundai Aura):

ಈ ಕಾರನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ರೂ.5.98 ಲಕ್ಷದಿಂದ ರೂ.8.54 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಹಾಗೂ ಆಕ್ವಾ ಟೀಲ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,450 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

Top 5 Best Sedan Cars In India Tigor Aura Dzire Amaze And City

ಹೊಸ 'ಔರಾ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ತನ್ನದಾಗಿಸಿಕೊಂಡಿದೆ. 17 ರಿಂದ 28 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire):

ಇದು ಪ್ರಖ್ಯಾತ ಸೆಡಾನ್ ಆಗಿ ಹೊರಹೊಮ್ಮಿದೆ. ಕನಿಷ್ಠ ರೂ.6.26 ಲಕ್ಷ ಹಾಗೂ ಗರಿಷ್ಠ ರೂ.9.31 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5 ಆಸನಗಳನ್ನು ಒಳಗೊಂಡಿದೆ. 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್ನು ಹೊಂದಿದೆ. 24 ರಿಂದ 33.73 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

Top 5 Best Sedan Cars In India Tigor Aura Dzire Amaze And City

ಹೋಂಡಾ ಅಮೇಜ್ (Honda Amaze):

ಈ ಸೆಡಾನ್‌ನ್ನು ಕೂಡ ಖರೀದಿದಾರರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ರೂ.7.41 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, 1.2-ಲೀ. ಪೆಟ್ರೋಲ್ ಎಂಜಿನ್ನು ಒಳಗೊಂಡಿದೆ. 18.65 ರಿಂದ 19.46 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.

Top 5 Best Sedan Cars In India Tigor Aura Dzire Amaze And City

ಹೋಂಡಾ ಸಿಟಿ (Honda City):

ಇದೊಂದು ಪ್ರಖ್ಯಾತ ಸೆಡಾನ್ ಎಂದೇ ಹೆಸರುವಾಸಿಯಾಗಿದೆ. ಕನಿಷ್ಠ ರೂ.11.95 ಲಕ್ಷದಿಂದ ರೂ.16.07 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5 ಆಸನಗಳನ್ನು ಒಳಗೊಂಡಿದೆ. 1.5-ಲೀ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 17.8 ರಿಂದ 18.4 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

More from DriveSpark

Article Published On: Tuesday, January 13, 2026, 11:04 [IST]
English summary
Top 5 best sedan cars in india tigor aura dzire amaze and city
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+