ಆತ್ಯಾಧುನಿಕ ಸುರಕ್ಷತೆಯೊಂದಿಗೆ ಕಮ್ಮಿ ಬೆಲೆಗೆ ಸಿಗುವ ಟಾಪ್-5 ಕಾರುಗಳ ಪಟ್ಟಿ: ಫ್ಯಾಮಿಲಿ ಸೇಫ್ಟಿ ಮುಖ್ಯ!
ಭಾರತದಲ್ಲಿ ಹೆಚ್ಚಿನ ಸುರಕ್ಷಿತೆ ನೀಡುವ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಈ ಹಿಂದೆ ಹೆಚ್ಚಿನ ಮೈಲೇಜ್, ಉತ್ತಮ ಫೀಚರ್ಸ್ ಬಯಸುತ್ತಿದ್ದವರು ಈಗ 6-ಏರ್‌ಬ್ಯಾಗ್‌ಗಳು ಹಾಗೂ ಕಾರಿನ ನಿರ್ಮಾಣ ಗುಣಮಟ್ಟವನ್ನು ಹೆಚ್ಚಾಗಿ ನೋಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕಿಟ್ಟು ADAS ಸೂಟ್ ಹೊಂದಿರುವ ಕಾರನ್ನು ಸಹ ಹುಡುಕುತ್ತಿದ್ದಾರೆ. ಆದರೆ ADAS ಹೊಂದಿರುವ ಕಾರುಗಳು ತುಂಬಾ ದುಬಾರಿಯಾಗಿರುತ್ತವೆ. ಸಾಮಾನ್ಯರಿಗೆ ಕಾರಿನ ಬೆಲೆ 10 ಲಕ್ಷ ದಾಟಿದರೆ ದೊಡ್ಡ ವಿಷಯವಾಗಿಬಿಡುತ್ತದೆ, ಆದರೆ ಸುರಕ್ಷತೆಗೆ ಆದ್ಯತೆ ನೀಡಲೇಬೇಕು, ಏಕೆಂದರೆ 10 ಲಕ್ಷ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ. ಇಲ್ಲಿ ಪಟ್ಟಿ ಮಾಡಲಾದ ಪ್ರತಿ ಕಾರು, ಇರುವುದರಲ್ಲೆ ಕಡಿಮೆ ಬೆಲೆಗೆ ಸಿಗುವ ADAS ಕಾರುಗಳಾಗಿವೆ.
ಟಾಪ್-5 ಕಾರುಗಳ ಪಟ್ಟಿ:
ಹೋಂಡಾ ಅಮೇಜ್: ಹೋಂಡಾ ಅಮೇಜ್ ಪ್ರಸ್ತುತ ಭಾರತದಲ್ಲಿ ADAS ಲೆವೆಲ್ 2.0 ಹೊಂದಿರುವ ಅತ್ಯಂತ ಕೈಗೆಟುಕುವ ಕಾರಾಗಿದೆ. ADAS ಲೆವೆಲ್ 2.0 ಹೋಂಡಾ ಅಮೇಜ್‌ನ ಟಾಪ್-ಆಫ್-ದಿ-ಲೈನ್ ZX ವೇರಿಯೆಂಟ್‌ನೊಂದಿಗೆ ಲಭ್ಯವಿದೆ. ಹೋಂಡಾ ಅಮೇಜ್‌ನ ZX ಟ್ರಿಮ್‌ಗಳು ಭಾರತದಲ್ಲಿ 9.15 ಲಕ್ಷ ರೂ. (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಸೆಡಾನ್ ಕಾರಾಗಿದ್ದು, ಐದು ಮಂದಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ.

ಹೋಂಡಾ ಸಿಟಿ: ಹೋಂಡಾ ಸಿಟಿಗೆ ಭಾರತದಲ್ಲಿ 25 ವರ್ಷಗಳ ಇತಿಹಾಸವಿದೆ, ಬಿಡುಗಡೆಯಾದಾಗಿನಿಂದ ಇದು ಜನಪ್ರಿಯ ಸೆಡಾನ್ ಆಗಿ ಮುಂದುವರಿಯುತ್ತಿದೆ. ಹೋಂಡಾ ಸಿಟಿಯ ಬೇಸ್ SV ವೇರಿಯೆಂಟ್ ಹೊರತುಪಡಿಸಿ ಎಲ್ಲಾ ಟ್ರಿಮ್‌ಗಳು ಲೆವೆಲ್ 2 ADAS ಸೂಟ್‌ನೊಂದಿಗೆ ಬರುತ್ತವೆ. ADAS ಲೆವೆಲ್ 2 ಹೊಂದಿರುವ ಹೋಂಡಾ ಸಿಟಿ ಟ್ರಿಮ್‌ಗಳು 12.70 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಖರೀದಿಗೆ ಸಿಗುತ್ತವೆ.
ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್‌ನ ಜನಪ್ರಿಯ ಮಾಡಲ್ ಆಗಿರುವ ನೆಕ್ಸಾನ್ ಅನ್ನು ಲೆವೆಲ್ 2.0 ADAS ಸೂಟ್‌ನೊಂದಿಗೆ ಅಪ್‌ಗ್ರೇಡ್ ಮಾಡಿದೆ. ಲೆವೆಲ್ 2.0 ADAS ಸೂಟ್ ನೆಕ್ಸಾನ್‌ನ ಫಿಯರ್‌ಲೆಸ್+ PS ಪೆಟ್ರೋಲ್ DCA ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ, ಇದರ ಬೆಲೆ ರೂ 12.16 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಜೊತೆಗೆ ಇದು ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಮೊದಲ ಭಾರತೀಯ ಕಾರಾಗಿದೆ.

ಕಿಯಾ ಸೋನೆಟ್: ಈ ಪಟ್ಟಿಯಲ್ಲಿರುವ ಹೆಚ್ಚಿನ ಕಾರುಗಳು ಲೆವೆಲ್-2 ADAS ಸೂಟ್‌ನೊಂದಿಗೆ ಬಂದರೆ, ಕಿಯಾ ಸೋನೆಟ್ ಲೆವೆಲ್-1 ADAS ನೊಂದಿಗೆ ಬರುತ್ತದೆ. ಕಿಯಾ ಸೋನೆಟ್ 2020 ರಲ್ಲಿ ಬಿಡುಗಡೆಯಾದಾಗಿನಿಂದ ದೇಶದಲ್ಲಿ ಜನಪ್ರಿಯ ಕಾಂಪ್ಯಾಕ್ಟ್ SUV ಆಗಿ ಮುಂದುವರಿಯುತ್ತಿದೆ. ADAS ಸೋನೆಟ್ ಹೊಂದಿರುವ ಟಾಪ್-ಸ್ಪೆಕ್ GTX+ ಟ್ರಿಮ್ ಬೆಲೆ ರೂ. 13.51 ಲಕ್ಷ (ಎಕ್ಸ್-ಶೋರೂಂ) ಇದೆ.
ಮಹೀಂದ್ರಾ XUV 3XO: ಮಹೀಂದ್ರಾ XUV 3XO ದೇಶದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿದ್ದು, ಬ್ರ್ಯಾಂಡ್ XUV 3XO ನ AX5L ಮತ್ತು AX7L ಟ್ರಿಮ್‌ಗಳೊಂದಿಗೆ ಲೆವೆಲ್ 2 ADAS ಸೂಟ್ ನೀಡುತ್ತದೆ. ಭಾರತ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಈ ಎರಡೂ ವೇರಿಯೆಂಟ್‌ಗಳ ಬೆಲೆ ರೂ. 11.60 ಲಕ್ಷ (ಎಕ್ಸ್-ಶೋರೂಂ) ಮತ್ತು ರೂ. 12.75 ಲಕ್ಷ (ಎಕ್ಸ್-ಶೋರೂಂ) ಇದೆ.

ಕಳೆದ ಕೆಲವು ವರ್ಷಗಳಿಂದ ಭಾರತೀಯ ಆಟೋ ಉದ್ಯಮವು ವೇಗವಾಗಿ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಉದ್ಯಮವು ಗಮನಿಸಿದ ಪ್ರಮುಖ ಬದಲಾವಣೆಗಳಲ್ಲಿ ಗ್ರಾಹಕರು ಕಾರಿನ ಸುರಕ್ಷತಾ ಸಾಧನಗಳ ಬಗ್ಗೆ ಹೆಚ್ಚು ಜಾಗೃತರಾಗಿರುವುದು ಒಂದು. ಹಿಂದೆ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಕೆಲವು ಕಾರುಗಳಿಗೆ ಸೀಮಿತವಾಗಿದ್ದವು, ಆದರೆ ಈಗ ಹಲವಾರು ಕಾರುಗಳು ದೇಶದಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ನೀಡುತ್ತಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








