ಟೊಯೋಟಾ ಹೈಬ್ರಿಡ್ SUV... 27 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್, 2 ಲಕ್ಷ ಕಾರುಗಳು ಉಡೀಸ್

ಜಾಗತಿಕವಾಗಿ ಅತ್ಯಂತ ಜನಪ್ರಿಯತೆ ಪಡೆದಿರುವ ಕಾರು ತಯಾರಕ ಕಂಪನಿ 'ಟೊಯೋಟಾ' (Toyota) ಇಂದು 'ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮಾಸ' (Toyota Urban Cruiser Hyryder Month) ವನ್ನು ಪರಿಚಯಿಸಿದೆ. ಏನಿದು ಹೈರೈಡರ್ ಮಾಸ? ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನ ನಿರಂತರ ಯಶಸ್ಸನ್ನು ಆಚರಿಸುವ ಅಂಗವಾಗಿ ಒಂದು ತಿಂಗಳ ಅವಧಿಗೆ ಗ್ರಾಹಕರನ್ನು ಈ ಹೈಬ್ರಿಡ್ ಎಸ್‌ಯುವಿಗೆ ಇನ್ನೂ ಹತ್ತಿರವಾಗುವಂತೆ ಮಾಡುವುದಾಗಿದೆ. ಮಾರ್ಚ್ ಅಂತ್ಯದವರೆಗೆ ಉತ್ತರ ಭಾರತದಾದ್ಯಂತ ಅನ್ವಯವಾಗುವ ಈ ಅಭಿಯಾನವು ಆಕರ್ಷಕ, ವಿಶೇಷ ಪ್ರಯೋಜನಗಳಿಂದ ಪೂರಕವಾಗಿರುತ್ತದೆ ಎಂದು ಟೊಯೋಟಾ ತಿಳಿಸಿದೆ.

ಈ ಅಭಿಯಾನದಲ್ಲಿ ಟೆಸ್ಟ್-ಡ್ರೈವ್ ಅನುಭವಗಳ ಮೂಲಕ ಗ್ರಾಹಕರನ್ನು ಟೊಯೋಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನಕ್ಕೆ ಹತ್ತಿರ ತರಲು ಕಂಪನಿ ಪ್ಲಾನ್ ಮಾಡಿದೆ. ಅಲ್ಲದೆ ಕಾರಿನ ಪ್ರಮುಖಾಂಶಗಳ ಬಗ್ಗೆ ಗ್ರಾಹಕರಿಗೆ ಹೆಚ್ಚಾಗಿ ತಿಳಿಸಲಾಗುವುದು. ಈ ಅಭಿಯಾನವು ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪ್ರಮುಖ ರಾಜ್ಯಗಳನ್ನು ಒಳಗೊಂಡಿದೆ.

toyota-celebrates-the-toyota-urban-cruiser-hyryder-month

ಅರ್ಬನ್ ಕ್ರೂಸರ್ ಹೈರೈಡರ್ ಯಶಸ್ಸಿಗೆ ಪ್ರಮುಖ ಕಾರಣಗಳು:

ಬಲವಾದ ಮಾರುಕಟ್ಟೆ ಉಪಸ್ಥಿತಿ: 2022 ರಲ್ಲಿ ಬಿಡುಗಡೆಯಾದ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಪ್ರಸ್ತುತ ರೂ.10.94 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಹೈಬ್ರಿಡ್ ಎಸ್‌ಯುವಿ ಇತ್ತೀಚೆಗೆ 2,00,000 ಯೂನಿಟ್ ಕಾರುಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ, ಇದು ಟೊಯೋಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ: B-SUV ವಿಭಾಗದಲ್ಲಿ ಭಾರತದ ಮೊದಲ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ SUV ಆಗಿರುವ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಸುಧಾರಿತ ಇ-ಡ್ರೈವ್ ಟ್ರಾನ್ಸ್‌ಮಿಷನ್‌ನೊಂದಿಗೆ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್‌ ಹೊಂದಿದೆ. ಇದು ಎಂಜಿನ್ ಸ್ಟಾಪ್‌ನೊಂದಿಗೆ 40% ದೂರ ಮತ್ತು 60% ರಷ್ಟು ಎಲೆಕ್ಟ್ರಿಕ್‌ನಲ್ಲಿ ಚಲಿಸುವಂತೆ ಮಾಡುತ್ತದೆ, ಈ ಮೂಲಕ 27.97 ಕಿ.ಮೀ ಮೈಲೇಜ್ ಪಡೆಯಬಹುದು.

toyota-celebrates-the-toyota-urban-cruiser-hyryder-month

ವಿನ್ಯಾಸ ಮತ್ತು ಸೌಕರ್ಯ: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಕ್ರಿಸ್ಟಲ್ ಅಕ್ರಿಲಿಕ್ ಗ್ರಿಲ್ ಮತ್ತು ಸಿಗ್ನೇಚರ್ ಟ್ವಿನ್ ಎಲ್ಇಡಿ ಡಿಆರ್ಎಲ್‌ಗಳನ್ನು ಹೊಂದಿದೆ. 17-ಇಂಚಿನ ಅಲಾಯ್ ವೀಲ್‌ಗಳು ಪ್ರೀಮಿಯಂ ಆಗಿ ಕಾಣುತ್ತವೆ, ಇಂಟೀರಿಯರ್‌ನಲ್ಲಿ ವೆಂಟಿಲೇಟೆಡ್ ಲೆದರ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್‌ನೊಂದಿಗೆ ಪ್ರೀಮಿಯಂ ಅನುಭವ ಹೆಚ್ಚಿಸಲಾಗಿದೆ. ಜೊತೆಗೆ 8-ವೇ ಪವರ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಅನುಕೂಲತೆಯನ್ನು ಹೆಚ್ಚಿಸಲಾಗಿದೆ.

ತಂತ್ರಜ್ಞಾನ ಮತ್ತು ಸಂಪರ್ಕ: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಬರುತ್ತದೆ. ಪ್ಯಾಡಲ್ ಶಿಫ್ಟರ್‌ಗಳು, ಎಲೆಕ್ಟ್ರಾನಿಕ್ ಐಆರ್‌ವಿಎಂ, ವೈರ್‌ಲೆಸ್ ಚಾರ್ಜಿಂಗ್ ಮತ್ತು ಬಹು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ದೈನಂದಿನ ಅನುಕೂಲತೆ ಮತ್ತು ಚಾಲನಾ ಆನಂದವನ್ನು ಹೆಚ್ಚಿಸುತ್ತದೆ.

toyota-celebrates-the-toyota-urban-cruiser-hyryder-month

ಸುರಕ್ಷತಾ ಫೀಚರ್ಸ್: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುತ್ತದೆ. ವರ್ಧಿತ ಆನ್-ರೋಡ್ ಸ್ಟೆಬಿಲಿಟಿಗಾಗಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್‌ ಪಡೆದುಕೊಂಡಿದೆ. ಎಲ್ಲಾ ಪ್ರಯಾಣಿಕರಿಗೆ ರಕ್ಷಣೆಯನ್ನು ಖಾತ್ರಿಪಡಿಸುವ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ಹೊಂದಿದೆ.

ಮಾಲೀಕತ್ವ ಮತ್ತು ಮೌಲ್ಯ: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಗ್ರಾಹಕರು ಪ್ರಮಾಣಿತ 3-ವರ್ಷ/1,00,000 ಕಿ.ಮೀ ವಾರಂಟಿ ಪಡೆಯಬಹುದು. ಪ್ರಭಾವಶಾಲಿ 5 ವರ್ಷಗಳು/2,20,000 ಕಿಮೀ ವರೆಗೆ ವಿಸ್ತರಿಸಬಹುದು (extended warranty), ಜೊತೆಗೆ 5 ವರ್ಷಗಳ ರಸ್ತೆಬದಿಯ ಸಹಾಯ ದೊರೆಯುತ್ತದೆ. ಹೈಬ್ರಿಡ್ ತಂತ್ರಜ್ಞಾನದಲ್ಲಿ ದೀರ್ಘಾವಧಿಯ ವಿಶ್ವಾಸವನ್ನು ಬಲಪಡಿಸಲು ಉದ್ಯಮ-ಪ್ರಮುಖ 8-ವರ್ಷ/1,60,000 ಕಿಮೀ ಹೈಬ್ರಿಡ್ ಬ್ಯಾಟರಿ ವಾರಂಟಿಯೊಂದಿಗೆ ಬರುತ್ತದೆ.

More from DriveSpark

Article Published On: Monday, March 9, 2026, 17:07 [IST]
English summary
Toyota celebrates the toyota urban cruiser hyryder month
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+