Creta Vs Ebella: ಹ್ಯುಂಡೈ ಕ್ರೆಟಾಗೆ ಟಕ್ಕರ್... ಟೊಯೋಟಾ ಸ್ಟೈಲಿಷ್ ಎಲೆಕ್ಟ್ರಿಕ್ ಎಸ್‌ಯುವಿ ಖದರ್ ನೋಡಿ

ಟೊಯೋಟಾ ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ 'ಎಬೆಲ್ಲಾ' ಮೂಲಕ ಭಾರತದ ಇವಿ ವಿಭಾಗಕ್ಕೆ ಎಂಟ್ರಿ ಕೊಟ್ಟಿದೆ. ಹೊಸ 'ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ' (Toyota Urban Cruiser Ebella)ಗೆ ಮಾರುಕಟ್ಟೆಯಲ್ಲಿ ಹಲವು ಪ್ರತಿಸ್ಪರ್ಧಿಗಳಿವೆ, ಇದರಲ್ಲಿ ಪ್ರಮುಖವಾಗಿ ಹ್ಯುಂಡೈ ಕ್ರೆಟಾ ಕೂಡ ಒಂದು. ಟೊಯೋಟಾ ತನ್ನ ಎಬೆಲ್ಲಾ ಎಸ್‌ಯುವಿಯನ್ನು ಅನಾವರಣಗೊಳಿಸಿದ್ದು, ಶೀಘ್ರದಲ್ಲೆ ಬಿಡುಗಡೆ ಮಾಡಿ ಬೆಲೆಗಳನ್ನು ಘೋಷಿಸಲಿದೆ. ಮತ್ತೊಂದೆಡೆ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿ ಪ್ರಸ್ತುತ ಬೆಲೆ ರೂ. 18.02 ಲಕ್ಷ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬೆಲೆಯೊಂದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಎರಡೂ ಕಾರುಗಳನ್ನು ಇಲ್ಲಿ ಹೋಲಿಕೆ ಮಾಡಿದ್ದೇವೆ.

ಇಂಟೀರಿಯರ್ ಫೀಚರ್

ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ' ವಿಶಾಲವಾದ ಇಂಟೀರಿಯರ್ ಕ್ಯಾಬಿನ್, ಡ್ಯುಯಲ್-ಟೋನ್ ಫಿನಿಶ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 12 ಬಣ್ಣ ಆಯ್ಕೆಗಳೊಂದಿಗೆ ಆಂಬಿಯೆಂಟ್ ಲೈಟಿಂಗ್, ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಹಿಂಭಾಗದ ಸೀಟ್‌ಗಳು, ಪನೋರಮಿಕ್ ರೂಫ್ ಮತ್ತು JBL ಪ್ರೀಮಿಯಂ ಸೌಂಡ್ ಸಿಸ್ಟಮ್, 10.25 - ಇಂಚಿನ ಕಾಂಬಿಮೀಟರ್ ಮತ್ತು 10.1-ಇಂಚಿನ ಮಲ್ಟಿಮೀಡಿಯಾ ಸಿಸ್ಟಮ್‌ನೊಂದಿಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋದೊಂದಿಗೆ ಬರುತ್ತದೆ.

toyota-ebella-ev-vs-hyundai-creta-electric-price-range-specs

ಹ್ಯುಂಡೈ ಕ್ರೆಟಾಎಲೆಕ್ಟ್ರಿಕ್ ಕಾರಿನ ಇಂಟೀರಿಯರ್‌ನಲ್ಲಿ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸೌಂಡ್ ಸಿಸ್ಟಮ್‌ಗಾಗಿ ಕಂಟ್ರೋಲ್‌ಗಳು, USB A ಮತ್ತು C ಪೋರ್ಟ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಟ್ವಿನ್ 10.25 ಇಂಚಿನ ಟಸ್ ಸ್ಕ್ರೀನ್‌ಗಳನ್ನು ನೀಡಲಾಗಿದ್ದು, ಒಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮತ್ತೊಂದು ಇನ್ಫೋಟೈನ್‌ಮೆಂಟ್ ಸೆಟಪ್‌ಗಾಗಿ ಟಚ್‌ಸ್ಕ್ರೀನ್ ನೀಡಲಾಗಿದೆ.

ಸೇಫ್ಟಿ ಫೀಚರ್ಸ್

ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಎಲೆಕ್ಟ್ರಿಕ್ ಎಸ್‌ಯುವಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಲೆವೆಲ್ 2 ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್‌ಗಳು) ಹೊಂದಿದ್ದು, ಏಳು ಏರ್‌ಬ್ಯಾಗ್‌ಗಳು, ISOFIX ಮಕ್ಕಳ ಸೀಟ್ ಮೌಂಟ್‌ಗಳು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್, ಹಿಲ್ ಹೋಲ್ಡ್ ಅಸಿಸ್ಟ್ ಜೊತೆಗೆ ಹೈ-ಟೆನ್ಸೈಲ್ ಬಾಡಿ ಸ್ಟ್ರಕ್ಚರ್ ಮತ್ತು 360-ಡಿಗ್ರಿ ಕ್ಯಾಮೆರಾ ಕೂಡ ನೀಡಲಾಗಿದೆ.

toyota-ebella-ev-vs-hyundai-creta-electric-price-range-specs

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನಲ್ಲಿ ಚೈಲ್ಡ್ ಸೀಟ್ ಆಂಕರ್ (ISOFIX) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಹಾಗೆಯೇ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (HDC) ಸೇರಿದಂತೆ 19 ವೈಶಿಷ್ಟ್ಯಗಳೊಂದಿಗೆ LEVEL-2 ADAS ಸೆಟಪ್ ಒಳಗೊಂಡಿದೆ.

ಬ್ಯಾಟರಿ ಮತ್ತು ರೇಂಜ್

ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ, 49 kWh ಹಾಗೂ 61 kWh ಎಂಬ ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ಹೊಂದಿದೆ. ಇದರ ಪವರ್‌ಫುಲ್ ಮೋಟಾರ್ 142.1bh (49 kWh) ಪವರ್ ಮತ್ತು 171.6bh (61 kWh) ಪವರ್ ಹೊರಹಾಕುತ್ತದೆ. ಎರಡರಲ್ಲೂ 189Nm ಟಾರ್ಕ್ ಉತ್ಪಾದಿಸುತ್ತದೆ. ಒಮ್ಮೆ ಚಾರ್ಜ್ ಮಾಡಿ ಬರೋಬ್ಬರಿ 543 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

toyota-ebella-ev-vs-hyundai-creta-electric-price-range-specs

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿ 42 kWh ಹಾಗೂ 51.4 kWh ಎಂಬ ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ಹೊಂದಿದೆ. ಇದರ ಪವರ್‌ಫುಲ್ ಮೋಟಾರ್ 133.1bh (42 kWh) ಪವರ್ ಮತ್ತು 168.6bh (51.4 kWh) ಪವರ್ ಹೊರಹಾಕುತ್ತದೆ. ಎರಡರಲ್ಲೂ 255Nm ಟಾರ್ಕ್ ಉತ್ಪಾದಿಸುತ್ತದೆ. ಒಮ್ಮೆ ಚಾರ್ಜ್ ಮಾಡಿ ಬರೋಬ್ಬರಿ 473 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಮುಂಬರಲಿರುವ ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಹಾಗೂ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿಗಳು AC ಮತ್ತು DC ಫಾಸ್ಟ್ ಚಾರ್ಜಿಂಗ್ ಎರಡಕ್ಕೂ ಹೊಂದಿಕೆಯಾಗುತ್ತವೆ. ಬೆಲೆ ವಿಷಯಕ್ಕೆ ಬಂದರೆ ಕ್ರೆಟಾ ಇವಿ ರೂ. 18.02 ಲಕ್ಷ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇನ್ನು ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ರೂ.18 ಲಕ್ಷ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

More from DriveSpark

Article Published On: Thursday, January 29, 2026, 14:22 [IST]
English summary
Toyota ebella ev vs hyundai creta electric price range specs
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+