Toyota EV: ಟೊಯೋಟಾ ಎಲೆಕ್ಟ್ರಿಕ್ SUV ಬಿಡುಗಡೆಗೆ ದಿನಗಣನೆ: ಕಡಿಮೆ ಬೆಲೆ? ಲುಕ್ ಮಾತ್ರ ಸೂಪರ್!

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಳು ಹೆಚ್ಚಾಗಿವೆ, ಟಾಟಾದಿಂದ ಹಿಡಿದು ಮಹೀಂದ್ರಾವರೆಗೆ ನಮ್ಮ ಸ್ವದೇಶಿ ಬ್ರಾಂಡ್‌ಗಳು ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಆಳುತ್ತಿವೆ. ಮತ್ತೊಂದೆಡೆ ಮಾರುತಿ ಸುಜುಕಿ ಹಾಗೂ ಟೊಯೋಟಾ ಬ್ರಾಂಡ್‌ಗಳು ತಮ್ಮ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ತುಸು ಸಮಯ ತೆಗೆದುಕೊಂಡರೂ ಅದ್ದೂರಿಯಾಗಿ ಬಿಡುಗಡೆ ಮಾಡಲು ನೋಡುತ್ತಿವೆ. ಬಹಳ ನಿರೀಕ್ಷೆಗಳ ನಂತರ, ಟೊಯೋಟಾ ಜನವರಿ 19 ರಂದು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾದ ಅರ್ಬನ್ ಕ್ರೂಸರ್ ಇವಿ (Toyota EV) ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಹೈ-ಟೆಕ್ ಫೀಚರ್ಸ್: ಕ್ಯಾಬಿನ್ ಒಳಗೆ, ಅರ್ಬನ್ ಕ್ರೂಸರ್ ಇವಿ ಡ್ಯುಯಲ್-ಸ್ಕ್ರೀನ್ ಸೆಟಪ್ ಪಡೆಯಲಿದ್ದು, ಇದು 10.25-ಇಂಚಿನ ಡ್ರೈವರ್ ಡಿಸ್ಪ್ಲೆ ಮತ್ತು 10.1-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಒಳಗೊಂಡಿರುತ್ತದೆ. ಎರಡನ್ನೂ ಚಾಲಕ ಮತ್ತು ಪ್ರಯಾಣಿಕರ ಮುಂದೆ ಫ್ಲೋಟಿಂಗ್ ಪ್ಯಾನಲ್ ಸ್ಕ್ರೀನ್ ಡಿಸೈನ್‌ನಲ್ಲಿ ನೀಡಲಾಗುವುದು. ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ವೈರ್‌ಲೆಸ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವನ್ನು ಪಡೆದಯಲಿದೆ.

toyota-ev-urban-cruiser-electric-suv-launching-on-jan-19th

ಪ್ರತಿಸ್ಪರ್ಧಿಗಳಿಗೆ ನಡುಕ: ಅರ್ಬನ್ ಕ್ರೂಸರ್ EV ಈಗಾಗಲೇ ಯುರೋಪ್‌ನಂತಹ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಸದ್ದು ಮಾಡಿದೆ. ಈಗ ಭಾರತದಲ್ಲಿ ಪ್ರತಿಸ್ಪರ್ಧಿಗಳಾದ ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ನೆಕ್ಸಾನ್ EV, ಮಹೀಂದ್ರಾ XUV 3XO EV ಮತ್ತು ಶೀಘ್ರದಲ್ಲೇ ಆಗಮಿಸಲಿರುವ ಮಾರುತಿ ಸುಜುಕಿ eVitara ವಿರುದ್ಧ ಸ್ಪರ್ಧಿಸಲಿದೆ. ಭಾರತದಲ್ಲಿ ಟೊಯೋಟಾದ ಮೊದಲ EV ಎಸ್‌ಯುವಿಯಾಗಿರುವ ಕಾರಣ ಗ್ರಾಹಕರಲ್ಲಿ ನಿರೀಕ್ಷಗಳೂ ತುಂಬಾನೆ ಇವೆ.

ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ರೇಂಜ್: ಹೊಸ ಅರ್ಬನ್ ಕ್ರೂಸರ್ ಎಲೆಕ್ಟ್ರಿಕ್ ಎಸ್‌ಯುವಿ 49 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಪಡೆಯಲಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲದು ಎಂದು ಹೇಳಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳು ಆಲ್-ವೀಲ್ ಡ್ರೈವ್ ಆಯ್ಕೆಯನ್ನು ಪಡೆದರೂ, ಭಾರತದಲ್ಲಿ ಅರ್ಬನ್ ಕ್ರೂಸರ್ ಇವಿ ಫ್ರಂಟ್-ವೀಲ್ ಡ್ರೈವ್ ಆವೃತ್ತಿಯಾಗಿ ಮೊದಲಿಗೆ ಲಗ್ಗೆಯಿಡಲಿದೆ.

toyota-ev-urban-cruiser-electric-suv-launching-on-jan-19th

ಲೆವೆಲ್ 2 ADAS: 6 ಏರ್‌ಬ್ಯಾಗ್‌ಗಳಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರ ಜೊತೆಗೆ, ಹೊಸ ಅರ್ಬನ್ ಕ್ರೂಸರ್ EV ಲೆವೆಲ್ 2 ADAS ಸುರಕ್ಷತಾ ಕಾರ್ಯಗಳೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇವುಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿದಂತೆ ಹಲವು ಫೀಚರ್ಸ್ ಸೇರಿವೆ.

ನಿರೀಕ್ಷಿತ ಬೆಲೆ: ಟೊಯೋಟಾ ಯಾವುದೇ ಅಧಿಕೃತ ಸೂಚನೆಯನ್ನು ನೀಡಿಲ್ಲವಾದರೂ, ಹೊಸ ಅರ್ಬನ್ ಕ್ರೂಸರ್ ಇವಿ ಅಸ್ತಿತ್ವದಲ್ಲಿರುವ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ರೂ. 15 ಲಕ್ಷದಿಂದ 25 ಲಕ್ಷ ರೂ. (ಎಕ್ಸ್‌ ಶೋರೂಂ) ಬೆಲೆಗಳ ನಡುವೆ ಬಿಡುಗಡೆಯಾಗುವ ಸಾರ್ಧಯತೆ ಇದೆ. ಬೆಲೆಗೆ ತಕ್ಕಂತೆ ಹೊರಭಾಗದ ಡಿಸೈನ್ ಕೂಡ ತುಂಬಾ ಫ್ಯೂಚರಿಸ್ಟಿಕ್ ಆಗಿ ಇರಲಿದೆ.

toyota-ev-urban-cruiser-electric-suv-launching-on-jan-19th

ಮಲ್ಟಿ ಡ್ರೈವಿಂಗ್ ಮೋಡ್‌ಗಳು: ಅರ್ಬನ್ ಕ್ರೂಸರ್ ಇವಿ ಮಲ್ಟಿ ಡ್ರೈವ್ ಮೋಡ್‌ಗಳು ಮತ್ತು ಬ್ರೇಕ್ ರೀಜೆನ್ ಬ್ರೇಕಿಂಗ್ ಸಹ ಒಳಗೊಂಡಿರುತ್ತದೆ. ಇಕೋ, ನಾರ್ಮಲ್, ಸ್ಪೋರ್ಟ್ ಮತ್ತು ಪೆಡಲ್ ಎಂಬ ಡ್ರೈವ್ ಮೋಡ್‌ಗಳನ್ನು ಹೊಂದಿರುತ್ತದೆ. ವಿವಿಧ ಚಾಲನಾ ಪರಿಸ್ಥಿತಿಗಳಿಗೆ ತಕ್ಕಂತೆ ಚಾಲಕರು ಆಯಾ ಡ್ರೈವಿಂಗ್ ಮೋಡ್‌ಗಳನ್ನು ಬಳಸಿಕೊಳ್ಳಲು ಕಾರು ಸಹಕರಿಸುತ್ತದೆ.

ಬಹಳ ನಿರೀಕ್ಷೆಯ ನಂತರ ಜನವರಿ 19 ರಂದು ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಮಧ್ಯಮ ಗಾತ್ರದ ಇವಿ SUV ಮಾಡಲ್‌ನೊಂದಿಗೆ ಭಾರತದ ಎಲೆಕ್ಟ್ರಿಕ್ ವಾಹನ (EV) ವಿಭಾಗವು ಹೊಸ ಕ್ರಾಂತಿಗೆ ಸಜ್ಜುಗೊಳ್ಳುತ್ತಿದೆ. ಭಾರತದಲ್ಲಿ ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ನೆಕ್ಸಾನ್ EV, ಮಹೀಂದ್ರಾ XUV 3XO EV ಕಾರುಗಳಿಗೆ ಇದು ಭಾರೀ ಪೈಪೋಟಿ ನೀಡಲಿದೆ.

More from DriveSpark

Article Published On: Friday, January 9, 2026, 18:01 [IST]
English summary
Toyota ev urban cruiser electric suv launching on jan 19th
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+