Toyota: ಟೊಯೊಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ.. ಇನ್ನೋವಾಗೆ ಎಷ್ಟಾಗಿದೆ?

ಟೊಯೊಟಾ ಇಂಡಿಯಾ (Toyota India) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್ ಹಾಗೂ ಫಾರ್ಚೂನರ್ ಬೆಲೆಗಳನ್ನು ರೂ.74,000 ವರೆಗೆ ಹೆಚ್ಚಿಸಿದೆ. ಆದರೆ ಅರ್ಬನ್ ಕ್ರೂಸರ್ ಟೈಸರ್, ಅರ್ಬನ್ ಕ್ರೂಸರ್ ಹೈರೈಡರ್, ರೂಮಿಯನ್, ಹಿಲಕ್ಸ್, ಕ್ಯಾಮ್ರಿ, ವೆಲ್‌ಫೈರ್ ಮತ್ತು ಲ್ಯಾಂಡ್ ಕ್ರೂಸರ್ 300 ಕಾರುಗಳ ದರವನ್ನು ಏರಿಕೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta):

ಇದು ಪ್ರಮುಖ ಎಂಪಿವಿಯಾಗಿದೆ. ಈ ಕಾರಿನ ಬೆಲೆ ಸರಿ ಸುಮಾರು ರೂ.33,000 ವರೆಗೆ ಅಧಿಕಗೊಂಡಿದೆ. ಸದ್ಯ ಹೊಸ 'ಇನ್ನೋವಾ ಕ್ರಿಸ್ಟಾ' ಕನಿಷ್ಠ ರೂ.18.99 ಲಕ್ಷ ಹಾಗೂ ಗರಿಷ್ಠ ರೂ.25.53 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಪ್ಲಾಟಿನಂ ವೈಟ್ ಪರ್ಲ್, ಸೂಪರ್ ವೈಟ್, ಸಿಲ್ವರ್ ಮೆಟಾಲಿಕ್ ಹಾಗೂ ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಎಂಬ ಬಣ್ಣಗಳಲೊಂದಿಗೂ ಸಿಗುತ್ತದೆ. 7/ 8 ಆಸನಗಳನ್ನು ಒಳಗೊಂಡಿದೆ.

Toyota Increase Prices Of Innova Crysta Innova Hycross and Fortuner Details

ನೂತನ 'ಇನ್ನೋವಾ ಕ್ರಿಸ್ಟಾ' 2.4-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 9 ರಿಂದ 10.5 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ರೇರ್ ಎಸಿ ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross):

ಈ ಕಾರಿನ ದರವು ಒಟ್ಟು ರೂ.48,000 ವರೆಗೆ ಹೆಚ್ಚಳಗೊಂಡಿದೆ. ಆರಂಭಿಕ ಶ್ರೇಣಿ ರೂಪಾಂತರವಾದ 'ಜಿ' ಬೆಲೆಯೂ ಬದಲಾಗಿಲ್ಲ. 'ಜಿಎಕ್ಸ್' ರೂಪಾಂತರದ ದರವು ರೂ.29,000, 'ವಿಎಕ್ಸ್' ರೂಪಾಂತರದ ಬೆಲೆ ರೂ.40,000 ವರೆಗೆ ಏರಿಕೆಯಾಗಿದೆ. ನೂತನ 'ಇನ್ನೋವಾ ಹೈಕ್ರಾಸ್' ರೂ.18.06 ಲಕ್ಷದಿಂದ ರೂ.32.38 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Toyota Increase Prices Of Innova Crysta Innova Hycross and Fortuner Details

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಪ್ಲಾಟಿನಂ ವೈಟ್ ಪರ್ಲ್, ಅಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸಿಲ್ವರ್ ಮೆಟಾಲಿಕ್ ಹಾಗೂ ಸೂಪರ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು.

ಹೊಸ 'ಇನ್ನೋವಾ ಹೈಕ್ರಾಸ್' ಎಂಪಿವಿ 2-ಲೀಟರ್ ಪೆಟ್ರೋಲ್ & 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್‌ನ್ನು ಹೊಂದಿದೆ. 23 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು ರಿವರ್ಸ್ ಕ್ಯಾಮೆರಾವನ್ನು ಹೊಂದಿದೆ.

Toyota Increase Prices Of Innova Crysta Innova Hycross and Fortuner Details

ಟೊಯೊಟಾ ಫಾರ್ಚೂನರ್ (Toyota Fortuner):

ಈ ಫುಲ್-ಸೈಜ್ ಎಸ್‌ಯುವಿಯ ಬೆಲೆಯೂ ರೂ.51,000 ರಿಂದ ರೂ.74,000 ವರೆಗೆ ಏರಿಕೆಯಾಗಿದೆ. ನೂತನ 'ಫಾರ್ಚೂನರ್' ಕನಿಷ್ಠ ರೂ.34.16 ಲಕ್ಷ ಮತ್ತು ಗರಿಷ್ಠ ರೂ.49.59 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಆಟಿಟ್ಯೂಡ್ ಬ್ಲ್ಯಾಕ್, ಸೂಪರ್ ವೈಟ್, ಸಿಲ್ವರ್ ಮೆಟಾಲಿಕ್, ಫ್ಯಾಂಟಮ್ ಬ್ರೌನ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 7 ಆಸನಗಳನ್ನು ಪಡೆದಿದೆ.

ಇದು 2.8-ಲೀಟರ್ ಮೈಲ್ಡ್ ಹೈಬ್ರಿಡ್ ಡೀಸೆಲ್, 2.8-ಲೀಟರ್ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 10 ರಿಂದ 14 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್ ಹಾಗೂ ಡುಯಲ್-ಜೋನ್ ಎಸಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 7-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್‌ಗಳನ್ನು ಹೊಂದಿದೆ.

More from DriveSpark

Article Published On: Saturday, January 10, 2026, 8:52 [IST]
English summary
Toyota increase prices of innova crysta innova hycross and fortuner details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+