Toyota: ವರ್ಷಾರಂಭದಲ್ಲಿ ಕಹಿಸುದ್ದಿ.. 2027ರ ವೇಳೆಗೆ ಜನಪ್ರಿಯ ಟೊಯೊಟಾ ಇನ್ನೋವಾ ಕ್ರಿಸ್ಟಾ ತಯಾರಿಕೆ ಬಂದ್?

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta), ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. 2027ರ ವೇಳೆಗೆ ಹಂತ - ಹಂತವಾಗಿ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸುವ ಸಾಧ್ಯತೆಯಿದೆ. ಮುಂಬರುವ ಕಠಿಣ ಎಮಿಷನ್ ಮಾನದಂಡಗಳು ಹಾಗೂ ಡೀಸೆಲ್ ವಾಹನಗಳಿಗೆ ಸಂಬಂಧಿಸಿದ ನಿಯಮಗಳು ಹೆಚ್ಚು ಬಿಗಿಯಾಗುತ್ತಿರುವ ಹಿನ್ನೆಲೆ, ಟೊಯೊಟಾ ತನ್ನ ಕಾರ್ಯ ಯೋಜನೆ ಬದಲಾಯಿಸುತ್ತಿದೆ. ಹೀಗಾಗಿ 'ಇನ್ನೋವಾ ಕ್ರಿಸ್ಟಾ' ತಯಾರಿಕೆ ಸ್ಥಗಿತಗೊಳಿಸುವ ಆಲೋಚನೆಯಲ್ಲಿದೆ ಎಂದು 'ಆಟೋಕಾರ್' ಸೇರಿದಂತೆ ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಕಂಪನಿಯು ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.

2027ರಿಂದ ಕಾರ್ಪೊರೇಟ್ ಆವರೇಜ್ ಫ್ಯೂಯಲ್ ಎಕಾನಮಿ (CAFE) ಎಮಿಷನ್ ಮಾನದಂಡಗಳು ಜಾರಿಗೆ ಬರಲಿವೆ. ಇದರ ಉದ್ದೇಶ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆಗೊಳಿಸುವುದು. ಜೊತೆಗೆ ಹೆಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವುದಾಗಿದೆ. ಈ ನಿಟ್ಟಿನಲ್ಲಿ 'ಟೊಯೊಟಾ' ಕಂಪನಿಯು ಡೀಸೆಲ್ ಹೊರತುಪಡಿಸಿ, ಪರ್ಯಾಯ ಇಂಧನ ತಂತ್ರಜ್ಞಾನಗಳತ್ತ ಗಮನ ಹರಿಸುತ್ತಿದೆ ಎಂದು ಹೇಳಲಾಗಿದೆ.

Toyota Innova Crysta Mpv To Be Discontinued In 2027 Innova Hycross To Continue Details

ಸದ್ಯ 'ಟೊಯೊಟಾ ಇನ್ನೋವಾ ಕ್ರಿಸ್ಟಾ' ಎಂಪಿವಿಯ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳುತ್ತಿದೆ. ಹಾಗೆಯೇ ಮಾರಾಟವು ಮುಂದುವರಿದಿದೆ. ಆದರೆ 2027ರೊಳಗೆ ಈ ಕಾರಿನ ಉತ್ಪಾದನೆ ಕೊನೆಗೊಳ್ಳುವ ಎಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿವೆ. ಆ ಬಳಿಕ 'ಇನ್ನೋವಾ ಹೈಕ್ರಾಸ್' ಕಾರು ಮಾತ್ರ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಇದು ಪೆಟ್ರೋಲ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಯಲ್ಲಿ ಲಭ್ಯವಿದ್ದು, ಹೊಸ ಎಮಿಷನ್ ನಿಯಮಗಳಿಗೆ ಅನುಗುಣವಾಗಿದೆ ಎಂಬ ವಿವರಗಳು ಲಭಿಸಿವೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ವಿಶೇಷತೆಗಳೇನು:

ಪ್ರಸ್ತುತ ಖರೀದಿಗೆ ಲಭ್ಯವಿರುವ ಈ ಎಂಪಿವಿಯೂ ರೂ.18.66 ಲಕ್ಷದಿಂದ ರೂ.25.27 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಜಿಎಕ್ಸ್, ಜಿಎಕ್ಸ್ ಪ್ಲಸ್, ವಿಎಕ್ಸ್ ಮತ್ತು ಜಡ್ಎಕ್ಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಇದು ಸಾಕಷ್ಟು ದೊಡ್ಡ ಗಾತ್ರದಲ್ಲಿದೆ. 4,735 ಎಂಎಂ ಉದ್ದ, 1,830 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರವಿದೆ. 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,750 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. 7/ 8 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರಿಸಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು 300 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

ನೂತನ 'ಇನ್ನೋವಾ ಕ್ರಿಸ್ಟಾ' ಬೆಲೆಗೆ ತಕ್ಕಂತೆ ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 2.4-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 150 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 343 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಈ ಕಾರು 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 15 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8-ವೇ ಪವರ್ಡ್ ಡ್ರೈವರ್ ಸೀಟ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ರೇರ್-ಎಸಿ ವೆಂಟ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಇಬಿಎ (ಎಲೆಕ್ಟ್ರಾನಿಕ್ ಬ್ರೇಕ್ ಅಸಿಸ್ಟ್), ಟ್ರಾಕ್ಷನ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.

More from DriveSpark

Article Published On: Saturday, January 3, 2026, 8:20 [IST]
English summary
Toyota innova crysta mpv to be discontinued in 2027 innova hycross to continue details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+