Toyota: ಇದೆ ನೋಡಿ ಟೊಯೋಟಾ ಎಲೆಕ್ಟ್ರಿಕ್ ಎಸ್‌ಯುವಿ: ಭಾರತದಲ್ಲಿ ಸುನಾಮಿ ಎಬ್ಬಿಸಿದೆ: ಬೆಲೆ ಎಷ್ಟು?

ಜಪಾನ್‌ ಮೂಲದ ಅತಿದೊಡ್ಡ ವಾಹನ ತಯಾರಕ ಕಂಪನಿ ಟೊಯೋಟಾ (Toyota), ಮಾರುತಿ ಸುಜುಕಿದೊಂದಿಗಿನ ಪಾಲುದಾರಿಕೆಯನ್ನು ಬಳಸಿಕೊಂಡು ಭಾರತಕ್ಕೆ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಮಾರುತಿ ಸುಜುಕಿಯ ಇ-ವಿಟಾರಾದ ಕ್ರಾಸ್-ಬ್ಯಾಡ್ಜ್ಡ್ ಆವೃತ್ತಿಯಾಗಿರುವ ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಇಂದು ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಬುಕಿಂಗ್‌ಗಳು ಇಂದಿನಿಂದ (ಜನವರಿ 20) ಪ್ರಾರಂಭವಾಗಿವೆ. ಆದರೆ ಬೆಲೆಗಳನ್ನು ಹಾಗೂ ಕಾರನ್ನು ಖರೀದಿದಾರರಿಗೆ ಯಾವಾಗ ಡಲಿವರಿ ನೀಡುತ್ತದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ಈಗಾಗಲೇ ಭಾರತದಲ್ಲಿ ಬಹುತೇಕ ಎಲ್ಲಾ ಪ್ರಮುಖ ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿವೆ. ಆದರೆ ಮಾರುತಿ ಹಾಗೂ ಟೊಯೋಟಾ ಮಾತ್ರ ಇದುವರೆಗೆ ಬಿಡುಗಡೆ ಮಾಡಿಲ್ಲ, ಈಗ ಟೊಯೋಟಾ ತನ್ನ ಮೊದಲ ಇವಿಯನ್ನು ಅಧಿಕೃತವಾಗಿ ಅನವರಣಗೊಳಿಸಿದೆ. ಆದರೆ ಮಾರುಕಟ್ಟೆಯಲ್ಲಿ ಈಗಾಗಲೇ ಘಟಾನುಘಟಿ ಬ್ರಾಂಡ್‌ಗಳ ಇವಿ ವಾಹನಗಳು ಸಖತ್ ಹೆಸರು ಮಾಡಿವೆ. ಇವುಗಳೊಂದಿಗೆ ಸೆಣಸಾಡಿ ಟೊಯೋಟಾ ಇವಿ ಯಶಸ್ವಿಯಾಗಿ ಮಾರಾಟವಾಗಲಿದೆಯೆ ನೋಡಬೇಕಿದೆ.

toyota-urban-cruiser-ebella-expected-price-and-launch

ಟೊಯೋಟಾ ತನ್ನ ಇನ್ನೋವಾ ಹೈಕ್ರಾಸ್‌ನೊಂದಿಗೆ ಹೈಬ್ರಿಡ್ ಕಾರು ಮಾರುಕಟ್ಟೆಯ ನಾಯಕರಾಗಿದ್ದರೂ, ದೇಶೀಯ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ಒಡ್ಡುತ್ತಿವೆ. ಪ್ರತಿಸ್ಪರ್ಧಿಗಳು ಹೆಚ್ಚು ಆಕರ್ಷಕ ಕಾರುಗಳನ್ನು ನೀಡುತ್ತಿರುವುದರಿಂದ ಅರ್ಬನ್ ಕ್ರೂಸರ್ ಎಬೆಲ್ಲಾಗೆ ಮಾರುಕಟ್ಟೆಯಲ್ಲಿ ಅಷ್ಟೇನು ಬೇಡಿಕೆ ಇರುವುದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ವಿಶೇಷತೆಗಳು

ಮುಂಬರಲಿರುವ ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಎಲೆಕ್ಟ್ರಿಕ್ ಎಸ್‌ಯುವಿ 49 kWh ಮತ್ತು 61 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಬರೋಬ್ಬರಿ 543 ಕಿ.ಮೀವರೆಗೆ ಓಡಿಸಬಹುದು. ಟೊಯೋಟಾದ ಸಿಗ್ನೇಚರ್ ಹ್ಯಾಮರ್‌ಹೆಡ್ ಫ್ರಂಟ್ ಡಿಸೈನ್, ಪ್ರೀಮಿಯಂ LED ಲೈಟಿಂಗ್, ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್, 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಕಾರು ಪ್ರೀಮಿಯಂ ಆಗಿ ಕಾಣುತ್ತದೆ.

toyota-urban-cruiser-ebella-expected-price-and-launch

ವಿಶಾಲವಾದ ಇಂಟೀರಿಯರ್ ಕ್ಯಾಬಿನ್, ಡ್ಯುಯಲ್-ಟೋನ್ ಫಿನಿಶ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 12 ಬಣ್ಣ ಆಯ್ಕೆಗಳೊಂದಿಗೆ ಆಂಬಿಯೆಂಟ್ ಲೈಟಿಂಗ್, ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಹಿಂಭಾಗದ ಸೀಟ್‌ಗಳು, ಪನೋರಮಿಕ್ ರೂಫ್ ಮತ್ತು JBL ಪ್ರೀಮಿಯಂ ಸೌಂಡ್ ಸಿಸ್ಟಮ್, ಅತ್ಯುತ್ತಮ ಇನ್-ಕ್ಯಾಬಿನ್ ಅನುಭವವನ್ನು ನೀಡುತ್ತದೆ ಎಂದು ಟೊಯೋಟಾ ತಿಳಿಸಿದೆ.

ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಈ ಕಾರು ಡಿಜಿಟಲ್ ಕಾಕ್‌ಪಿಟ್ 10.25 - ಇಂಚಿನ ಕಾಂಬಿಮೀಟರ್ ಮತ್ತು 10.1-ಇಂಚಿನ ಮಲ್ಟಿಮೀಡಿಯಾ ಸಿಸ್ಟಮ್‌ನೊಂದಿಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋದೊಂದಿಗೆ ಬರುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಲೆವೆಲ್ 2 ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್‌ಗಳು) ಹೊಂದಿದ್ದು, ಏಳು ಏರ್‌ಬ್ಯಾಗ್‌ಗಳೊಂದಿಗೆ ಸಮಗ್ರ ಸುರಕ್ಷತಾ ಪ್ಯಾಕೇಜ್ ಹೊಂದಿದೆ. ಜೊತೆಗೆ ಹೈ-ಟೆನ್ಸೈಲ್ ಬಾಡಿ ಸ್ಟ್ರಕ್ಚರ್ ಮತ್ತು 360-ಡಿಗ್ರಿ ಕ್ಯಾಮೆರಾ ಕೂಡ ನೀಡಲಾಗಿದೆ.

toyota-urban-cruiser-ebella-expected-price-and-launch

ಕಂಪನಿಯು ತನ್ನ ಎಲ್ಲಾ 500 ಕ್ಕೂ ಹೆಚ್ಚು ಸರ್ವಿಸ್ ಟಚ್‌ಪಾಯಿಂಟ್‌ಗಳನ್ನು ಸುಧಾರಿತ ಮೂಲಸೌಕರ್ಯದೊಂದಿಗೆ ಸಜ್ಜುಗೊಳಿಸಿದೆ. ಒಂದು ದಶಕಕ್ಕೂ ಹೆಚ್ಚು ವಿದ್ಯುದೀಕರಣ ಅನುಭವ ಹೊಂದಿರುವ ಕಂಪನಿಯ 2,500 ಕ್ಕೂ ಹೆಚ್ಚು ಮಾಸ್ಟರ್ ತಂತ್ರಜ್ಞರು, ಎಲ್ಲಾ ಔಟ್‌ಲೆಟ್‌ಗಳಲ್ಲಿ ತೊಂದರೆ - ಮುಕ್ತ ಸೇವೆ ಮತ್ತು 45 - ನಿಮಿಷಗಳ ಎಕ್ಸ್‌ಪ್ರೆಸ್ ನಿರ್ವಹಣೆ ನೀಡುತ್ತಾರೆ ಎಂದು ಟೊಯೋಟಾ ತಿಳಿಸಿದೆ.

ಮುಂಬರಲಿರುವ ಟೊಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಎಲೆಕ್ಟ್ರಿಕ್ ಎಸ್‌ಯುವಿ AC ಮತ್ತು DC ಫಾಸ್ಟ್ ಚಾರ್ಜಿಂಗ್ ಎರಡಕ್ಕೂ ಹೊಂದಿಕೆಯಾಗುತ್ತದೆ. ಈ ವಾಹನವು ನಗರ ಬಳಕೆಗೆ ಹಾಗೂ ದೀರ್ಘ ಪ್ರಯಾಣಗಳಿಗೆ ಅನುಗುಣವಾಗಿ ಅನುಕೂಲಕರವಾದ ಚಾರ್ಜಿಂಗ್ ಆಯ್ಕೆಗಳನ್ನು ನೀಡುತ್ತದೆ. 5 ಗಮನಾರ್ಹವಾದ ಸಿಂಗಲ್ ಟೋನ್ ಮತ್ತು 4 ಡ್ಯುಯಲ್ - ಟೋನ್ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ. ರೂ.18 ಲಕ್ಷ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಇದನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

More from DriveSpark

Article Published On: Tuesday, January 20, 2026, 19:30 [IST]
English summary
Toyota urban cruiser ebella expected price and launch
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+