Toyota: 543 ಕಿ.ಮೀ ರೇಂಜ್.. ಟೊಯೊಟಾದ ಮೊದಲ ಎಲೆಕ್ಟ್ರಿಕ್ ಕಾರಿನ ವೇರಿಯೆಂಟ್‌ಗಳಿವು, ವಿಶೇಷತೆಗಳೇನು?
ಈಚೆಗೆ ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಅತಿ ಶೀಘ್ರದಲ್ಲೇ ಈ ಕಾರನ್ನು ಮಾರಾಟಕ್ಕೂ ತರಲಾಗುತ್ತದೆ. ನೂತನ 'ಅರ್ಬನ್ ಕ್ರೂಸರ್ ಎಬೆಲ್ಲಾ' ಇ1 (E1), ಇ2 (E2) ಹಾಗೂ ಇ3 (E3) ಎಂಬ ಮೂರು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಾಗಲಿದೆ. ನಾವಿಲ್ಲಿ ಪ್ರತಿಯೊಂದು ರೂಪಾಂತರಗಳು ಯಾವೆಲ್ಲ ವಿಶೇಷತೆಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಇ1:
ಇದು 'ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ' ಎಸ್‌ಯುವಿಯ ಆರಂಭಿಕ ಶ್ರೇಣಿ ರೂಪಾಂತರವಾಗಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.1-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಗ್ಲೋವ್‌ಬಾಕ್ಸ್ ಡ್ಯಾಂಪರ್, ಸ್ನೋ ಮೋಡ್ ಸ್ವಿಚ್, ಡ್ರೈವ್ ಮೋಡ್ ಸ್ವಿಚ್, ಒನ್ ಪೆಡಲ್ ಮೋಡ್ ಸ್ವಿಚ್, ಟಿಲ್ಟ್ & ಟೆಲಿಸ್ಕೋಪಿಕ್ ಅಡ್ಜಸ್ಟೇಬಲ್ ಸ್ಟೀರಿಂಗ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, ಫ್ಯಾಬ್ರಿಕ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

ಹಾಗೆಯೇ ಬೂಟ್ ಲ್ಯಾಂಪ್, ಡೋರ್ ಲೈನ್ & ಕನ್ಸೋಲ್ ಸ್ಪಾಟ್ ಆಂಬಿಯೆಂಟ್ ಲೈಟ್‌ಗಳು, ಸಿಂಗಲ್-ಜೋನ್ ಆಟೋಮೆಟಿಕ್ ಎಸಿ, ಶಾರ್ಕ್ ಫಿನ್ ಆಂಟೆನಾ, ಕೀಲೆಸ್ ಎಂಟ್ರಿ, ಸ್ಟಾರ್ಟ್/ ಸ್ಟಾಪ್ ಸಿಸ್ಟಮ್, ರೂಫ್-ಎಂಡ್ ಸ್ಪಾಯ್ಲರ್, ಬಾಡಿ ಸೈಡ್ ಮೋಲ್ಡಿಂಗ್, ಆಟೋಮೆಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಹೈ-ಮೌಂಟ್ ಸ್ಟಾಪ್ ಲ್ಯಾಂಪ್, ರೇರ್ ವಿಂಡೋ ವೈಪರ್ ವಾಷರ್, 7-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.
ಇ2:
ಈ ಮಧ್ಯಮ ಶ್ರೇಣಿ ರೂಪಾಂತರವು 'ಇ1'ನಂತೆ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹೆಚ್ಚುವರಿಯಾಗಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಲಗೇಜ್ ಶೆಲ್ಫ್ ಹಾಗೂ ಹಿಂಭಾಗ (ರೇರ್) ಕ್ಯಾಮೆರಾವನ್ನು ಒಳಗೊಂಡಿದೆ.
ಇ3:
ಇದೊಂದು ಗರಿಷ್ಠ ಶ್ರೇಣಿ ರೂಪಾಂತರವಾಗಿದೆ. ಇ1 ಮತ್ತು ಇ2 ರೀತಿಯಲ್ಲಿಯೇ ನಾನಾ ಬಗೆಯ ಹೊಸನತಗಳಿಗೂ ಸಾಕ್ಷಿಯಾಗಿದೆ. ಜೊತೆಗೆ ಆಟೋಮೆಟಿಕ್ ಹೆಡ್‌ಲ್ಯಾಂಪ್, ಲೆವೆಲಿಂಗ್ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸಿಂಗಲ್-ಪೇನ್ ಫಿಕ್ಸೆಡ್ ಗ್ಲಾಸ್ ರೂಫ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ನೂತನ 'ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ' ಹೆಚ್ಚು ವಿಶಾಲವಾಗಿದೆ. 4,285 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,640 ಎಂಎಂ ಎತ್ತರವಿದೆ. 2,700 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು 310 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಈ ಕಾರು ಕೆಫೆ ವೈಟ್, ಬ್ಲ್ಯೂಯಿಶ್ ಬ್ಲ್ಯಾಕ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಎಂಟೈಸಿಂಗ್ ಸಿಲ್ವರ್ & ಲ್ಯಾಂಡ್ ಬ್ರೀಜ್ ಗ್ರೀನ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 49 ಹಾಗೂ 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 543 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.
ಹೊಸ 'ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ' ಇದೇ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರೂ.18 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಇದಕ್ಕೆ ಹಲವು ಎದುರಾಳಿಗಳಿವೆ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಎಂಜಿ ಜಡ್ಎಸ್ ಇವಿ & ಮಹೀಂದ್ರಾ ಬಿಇ 6 ಕಾರುಗಳು ನೇರವಾಗಿ ಸ್ಪರ್ಧೆಯೊಡ್ಡಲಿವೆ.


Click it and Unblock the Notifications








