Toyota: 500 Km ರೇಂಜ್.. ಬೆಲೆ ಇಷ್ಟೇನಾ? ಟೊಯೊಟಾದ ಮೊದಲ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಸಿದ್ಧ, ಟೀಸರ್ ಬಿಡುಗಡೆ

ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಇವಿ (Toyota Urban Cruiser EV) ಬಿಡುಗಡೆಗೆ ಸಿದ್ಧಗೊಂಡಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಸದ್ಯ 'ಟೊಯೊಟಾ ಇಂಡಿಯಾ' ಇದೇ ಕಾರಿನ ಪ್ರಪ್ರಥಮ ಟೀಸರ್ ವಿಡಿಯೋವನ್ನು ಹೊರತಂದಿದ್ದು, ಅತಿ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ ಎಂಬ ಸುಳಿವನ್ನು ನೀಡಿದೆ. ಈ ಟೀಸರ್‌ನಲ್ಲಿ ನೂತನ 'ಅರ್ಬನ್ ಕ್ರೂಸರ್ ಇವಿ' ಅತ್ಯಾಧುನಿಕವಾದ ಮೊನೊಪಾಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಹಾಗೂ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಈ 'ಟೊಯೊಟಾ ಅರ್ಬನ್ ಕ್ರೂಸರ್' ಎಲೆಕ್ಟ್ರಿಕ್ ಎಸ್‌ಯುವಿಯು ಜನವರಿ 19 ಅಥವಾ 20 ರಂದು ಅದ್ದೂರಿಯಾಗಿ ಪರಿಚಯಗೊಳ್ಳುವ ನಿರೀಕ್ಷೆಯಿದೆ. ಜಾಗತಿಕವಾಗಿ ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು ಪಾಲುದಾರಿಕೆ ಹೊಂದಿವೆ. ಹೀಗಾಗಿ 'ಅರ್ಬನ್ ಕ್ರೂಸರ್ ಇವಿ'ಯನ್ನು 'ಇ ವಿಟಾರಾ'ದ ರೀ-ಬ್ಯಾಡ್ಜ್ ಮಾಡೆಲ್ ಆಗಿರಲಿದೆ ಎಂದು ಬಣ್ಣಿಸಲಾಗಿದೆ. ಅದರಂತೆಯೇ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

Toyota Urban Cruiser EV Teased Launch Soon Details

ನೂತನ 'ಟೊಯೊಟಾ ಅರ್ಬನ್ ಕ್ರೂಸರ್ ಇವಿ' ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗಬಹುದು. ರೂ.18 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ.

2025ರ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ 'ಅರ್ಬನ್ ಕ್ರೂಸರ್ ಇವಿ'ಯನ್ನು ಪ್ರದರ್ಶಸಲಾಗಿತ್ತು. ಅಲ್ಲಿ ತೋರಿಸಲಾದ ಮಾಡೆಲ್, ಹೊರಭಾಗದಲ್ಲಿ ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿತ್ತು. ಈ ಕಾರು ಹೆಚ್ಚು ವಿಶಾಲವಾಗಿರಲಿದೆ. 4,285 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಮತ್ತು 1,640 ಮಿ.ಮೀ ಎತ್ತರವಿರಲಿದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,700 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿರಲಿದೆ.

Toyota Urban Cruiser EV Teased Launch Soon Details

ಇದು 5 ಆಸನಗಳನ್ನು ಪಡೆದಿರಲಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು, ಬರೋಬ್ಬರಿ 236 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿರಲಿದೆ.

ಹೊಸ 'ಟೊಯೊಟಾ ಅರ್ಬನ್ ಕ್ರೂಸರ್ ಇವಿ' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿರಲಿದೆ. 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಭರ್ತಿ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ಗೂ ಅಧಿಕ ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಳಲಾಗಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಆಲ್ ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, 2-ಸ್ಪೋಕ್ ಸ್ಟೀರಿಂಗ್ ವೀಲ್, ಫಿಕ್ಸೆಡ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ 360-ಡಿಗ್ರಿ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ.

ನೂತನ 'ಟೊಯೊಟಾ ಅರ್ಬನ್ ಕ್ರೂಸರ್ ಇವಿ' ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO EV), ಟಾಟಾ ನೆಕ್ಸಾನ್ ಇವಿ (Tata Nexon EV), ಎಂಜಿ ವಿಂಡ್ಸರ್ ಇವಿ (MG Windsor EV) ಹಾಗೂ ವಿನ್‌ಫಾಸ್ಟ್ ವಿಎಫ್6 (VinFast VF6) ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

More from DriveSpark

Article Published On: Wednesday, January 7, 2026, 19:10 [IST]
English summary
Toyota urban cruiser ev teased launch soon details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+