Toyota: ಹೈಬ್ರಿಡ್ SUV ಗೆ ಮುಗಿಬಿದ್ದ ಜನ: ಡೀಲರ್‌ಗಳಿಗೂ ತುಂಬಾ ಇಷ್ಟ... ದಿನಕ್ಕೆ 334 ಕಾರುಗಳು ಡೆಲಿವರಿ!
ಸ್ವದೇಶಿ ಕಾರು ಬ್ರ್ಯಾಂಡ್‌ಗಳಿಗೆ ಭಾರತದಲ್ಲಿ ಎಷ್ಟು ಬೇಡಿಕೆ ಇದೆಯೋ ಜಪಾನ್ ಮೂಲದ ಟೊಯೋಟಾ ಕಂಪನಿಗೂ ಅಷ್ಟೇ ಬೇಡಿಕೆ ಇದೆ. ನಮ್ಮ ಕರ್ನಾಟಕದ ಬಿಡದಿಯಲ್ಲಿ ಬೃಹತ್ ಉತ್ಪಾದನಾ ಸ್ಥಾವರ ಹೊಂದಿರುವ ಟೊಯೋಟಾ, ಈಗ ದಾಖಲೆಯ ಮಟ್ಟದಲ್ಲಿ ತನ್ನ ಕಾರುಗಳನ್ನು ದೇಶಾದ್ಯಂತ ಮಾರಾಟ ಮಾಡುತ್ತಿದೆ. ಪ್ರಮುಖ ಮಾಡಲ್‌ಗಳಾದ ಟೊಯೋಟಾ ಇನ್ನೋವಾ, ಗ್ಲಾಂಝಾ, ಫಾರ್ಚುನರ್‌ಗಳು ಭಾರೀ ಬೇಡಿಕೆ ಹೊಂದಿರುವ ಮಾಡಲ್‌ಗಳಾಗಿವೆ. ಆದರೆ ಇವೆಲ್ಲಕ್ಕಿಂತ ದೇಶದಲ್ಲಿ ಮತ್ತೊಂದು ಟೊಯೋಟಾ ಕಾರು ಸಖತ್ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ.
ಟೊಯೋಟಾದ ಹೈಬ್ರಿಡ್ ಎಸ್‌ಯುವಿಯಾಗಿರುವ 'ಅರ್ಬನ್ ಕ್ರೂಸರ್ ಹೈರೈಡರ್' (Toyota Urban Cruiser Hyryder) ಪ್ರಸ್ತುತ ಕಂಪನಿಯ ನಂ.1 ಕಾರಾಗಿ ಮುಂದುವರಿಯುತ್ತಿದೆ. ಇದು ಮಾರಾಟದಲ್ಲಿ ಧೂಳೆಬ್ಬಿಸುತ್ತಿದ್ದು, ಟೊಯೋಟಾದ ಇತರ ಮಾಡಲ್‌ಗಳನ್ನು ಹಿಂದಿಕ್ಕಿ ಅತಿಹೆಚ್ಚು ಡೆಲಿವರಿಗಳನ್ನು ನೀಡಲಾದ ಕಾರಾಗಿ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ಎಸ್‌ಯುವಿ ಗುರ್ತಿಸಿಕೊಂಡಿದೆ.

ಟೊಯೋಟಾ ಕಂಪನಿಯು ದೇಶದಲ್ಲಿ ಫೆಬ್ರವರಿ 2026 ರಲ್ಲಿ ಒಟ್ಟು 30,737 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 30,737 ಯುನಿಟ್ ಕಾರುಗಳಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನ ಪಾಲು ಒಟ್ಟು 9,359 ಯುನಿಟ್ ಕಾರುಗಳಾಗಿವೆ. ಅಂದರೆ ಫೆಬ್ರವರಿಯಲ್ಲಿ ಪ್ರತಿ ದಿನ 334 ಕಾರುಗಳು ಮಾರಾಟವಾಗಿವೆ. 2022 ರಲ್ಲಿ ಬಿಡುಗಡೆಯಾದ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಇಲ್ಲಿಯವರೆಗೆ ಬರೋಬ್ಬರಿ 2,00,000 ಯೂನಿಟ್ ಕಾರುಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ.
ಈ ಮಾರಾಟ ವೇಗವು ಟೊಯೋಟಾ ಸ್ಟ್ರಾಂಗ್ ಹೈಬ್ರಿಡ್ ಕಾರಿಗೆ ಬೆಳೆಯುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಕಂಪನಿಯ ಮಾಡಲ್‌ಗಳಲ್ಲಿಯೇ ಅತಿಹೆಚ್ಚು ಮಾರಾಟವಾಗಿರುವ ಕಾರಾಗಿ ಟೋಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮುನ್ನುಗ್ಗುತ್ತಿದೆ. ಅಷ್ಟಕ್ಕೂ ಜನ ಈ ಕಾರನ್ನು ಹೆಚ್ಚಾಗಿ ಖರೀದಿಸಲು ಕಾರಣವೇನು? ಈ ಕಾರಿನಲ್ಲಿ ಅಂಥಹದ್ದೇನಿದೆ ಬನ್ನಿ ನೋಡೋಣ.

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ವಿಶೇಷತೆಗಳು
ಕಡಿಮೆ ಬೆಲೆ, ಹೈಬ್ರಿಡ್ ತಂತ್ರಜ್ಞಾನ: B-SUV ವಿಭಾಗದಲ್ಲಿ ಭಾರತದ ಮೊದಲ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ SUV ಆಗಿರುವ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಪ್ರಸ್ತುತ ರೂ.10.94 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಸುಧಾರಿತ ಇ-ಡ್ರೈವ್ ಟ್ರಾನ್ಸ್‌ಮಿಷನ್‌ನೊಂದಿಗೆ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್ ಹೊಂದಿದ್ದು, ಬರೋಬ್ಬರಿ 27.97 ಕಿ.ಮೀ ಮೈಲೇಜ್ ನೀಡುತ್ತದೆ.
ವಿನ್ಯಾಸ ಮತ್ತು ಸೌಕರ್ಯ: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಕ್ರಿಸ್ಟಲ್ ಅಕ್ರಿಲಿಕ್ ಗ್ರಿಲ್ ಮತ್ತು ಸಿಗ್ನೇಚರ್ ಟ್ವಿನ್ ಎಲ್ಇಡಿ ಡಿಆರ್ಎಲ್‌ಗಳನ್ನು ಹೊಂದಿದೆ. 17-ಇಂಚಿನ ಅಲಾಯ್ ವೀಲ್‌ಗಳು ಪ್ರೀಮಿಯಂ ಆಗಿ ಕಾಣುತ್ತವೆ, ಇಂಟೀರಿಯರ್‌ನಲ್ಲಿ ವೆಂಟಿಲೇಟೆಡ್ ಲೆದರ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್‌ನೊಂದಿಗೆ ಪ್ರೀಮಿಯಂ ಅನುಭವ ಹೆಚ್ಚಿಸಲಾಗಿದೆ. ಜೊತೆಗೆ 8-ವೇ ಪವರ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಅನುಕೂಲತೆಯನ್ನು ಹೆಚ್ಚಿಸಲಾಗಿದೆ.

ಸುರಕ್ಷತಾ ಫೀಚರ್ಸ್: ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಎಲ್ಲಾ ಪ್ರಯಾಣಿಕರಿಗೆ ರಕ್ಷಣೆಯನ್ನು ಖಾತ್ರಿಪಡಿಸುವ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ಹೊಂದಿದೆ. ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುತ್ತಿದ್ದು, ವರ್ಧಿತ ಆನ್-ರೋಡ್ ಸ್ಟೆಬಿಲಿಟಿಗಾಗಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








