ಒಳ್ಳೆ ಮೈಲೇಜ್, ಕಮ್ಮಿ ಬೆಲೆ, ಸ್ಪೋರ್ಟಿ ಲುಕ್... ಆದ್ರೆ ಯಾರೂ ಖರೀದಿಸುತ್ತಿಲ್ಲ! ಯಾವುದೀ SUV?

ಟೊಯೋಟಾ ದೇಶೀಯವಾಗಿ ಫೆಬ್ರವರಿ ತಿಂಗಳಲ್ಲಿ ಒಟ್ಟು 30,737 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 26,414 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ16 ರಷ್ಟು ಹೆಚ್ಚಳವನ್ನು ಕಂಡಿದೆ. ಈ ಮಾರಾಟ ಅಂಕಿಅಂಶಗಳನ್ನು ನೋಡಿದರೆ ಭಾರತದಲ್ಲಿ ಟೊಯೋಟಾ ಕಾರುಗಳಿಗೆ ಉತ್ತಮ ಬೇಡಿಕೆ ಇರುವುದು ಸ್ಪಷ್ಟವಾಗಿದೆ. ಆದರೆ ಕಂಪನಿ ನೀಡುವ ಎಲ್ಲಾ ಕಾರುಗಳನ್ನು ಜನ ಇಷ್ಟ ಪಟ್ಟು ಖರೀದಿಸುವುದಿಲ್ಲ ಎಂಬುದನ್ನು ಟೊಯೋಟಾದ ಈ ಮಾಡಲ್ ಸಾಭೀತು ಪಡಿಸಿದೆ.

ಟೊಯೋಟಾ ಟೈಸರ್ ಮಾರಾಟದಲ್ಲಿ ಭಾರೀ ಇಳಿಕೆ

ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಎಸ್‌ಯುವಿ ಮಾರಾಟದ ಅಂಕಿಅಂಶಗಳು ಇತ್ತೀಚೆಗೆ ಕೆಲವು ಏರಿಳಿತಗಳನ್ನು ಕಂಡಿವೆ. ಟೊಯೋಟಾ ಟೈಸರ್ ಕಳೆದ ತಿಂಗಳು (ಫೆಬ್ರವರಿ 2026) ಕೇವಲ 2,854 ಯುನಿಟ್‌ ಕಾರುಗಳಷ್ಟೆ ಮಾರಾಟವಾಗಿವೆ. ಈ ಅಂಕಿ ಅಂಶವು ಒಂದು ವರ್ಷದ ಹಿಂದೆ ಮಾರಾಟವಾಗಿದ್ದ 3,604 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ಶೇ21 ರಷ್ಟು ಕುಸಿತವಾಗಿದೆ. 2024 ರಲ್ಲಿ ಉತ್ತಮ ಮಾರಾಟವಿದ್ದರೂ, 2026 ರ ಆರಂಭದಲ್ಲಿ ತೀವ್ರ ಕುಸಿತವನ್ನು ಕಂಡಿದೆ.

toyota-urban-cruiser-taisor-sales-2026-february

ಟೊಯೋಟಾ ಟೈಸರ್, ಮಾರುತಿ ಸುಜುಕಿ ಫ್ರಾಂಕ್ಸ್‌ನ ರೀ-ಬ್ಯಾಡ್ಜ್ ಮಾಡಲ್ ಆಗಿದ್ದು, ಮಾರುತಿ ಫ್ರಾಂಕ್ಸ್ ಸಾಮಾನ್ಯವಾಗಿ ಟೈಸರ್‌ಗಿಂತ ಕಡಿಮೆ ಬೆಲೆಯಿದೆ. ಟೊಯೋಟಾ ಟೈಸರ್ ಬೇಸ್‌ ವೇರಿಯೆಂಟ್ ಬೆಲೆ 7,25 (ಎಕ್ಸ್‌ ಶೋರೂಂ) ಲಕ್ಷವಿದ್ದರೇ, ಮಾರುತಿ ಫ್ರಾಂಕ್ಸ್ ಬೆಲೆಯು 6.84 (ಎಕ್ಸ್‌ ಶೋರೂಂ) ಲಕ್ಷವಿದೆ. ಹಾಗಾಗಿ ಖರೀದಿದಾರರು ಕಡಿಮೆ ಬೆಲೆಯದ್ದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕಾಂಪ್ಯಾಕ್ಟ್ SUV ವಿಭಾಗವು ಪ್ರಸ್ತುತ ನಂಬಲಾಗದಷ್ಟು ಬೇಡಿಕೆಯನ್ನು ಪಡೆದುಕೊಂಡಿದ್ದು, ಕಳೆದ ಎರಡು-ಮೂರು ವರ್ಷದಲ್ಲಿ, ಹಲವಾರು ಹೊಸ ಪ್ರತಿಸ್ಪರ್ಧಿ ಕಾರುಗಳು ಬಿಡುಗಡೆಯಾಗಿವೆ. ಸ್ಕೋಡಾ ಕೈಲಾಕ್ ಕೂಡ ಈಗ ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುತ್ತಿರುವ ಕಾರಣ ಗ್ರಾಹಕರಿಗೆ ಆಯ್ಕೆಗಳು ಹೆಚ್ಚಾಗಿವೆ. ಮಹೀಂದ್ರಾ XUV 3XO, ಟಾಟಾ ಪಂಚ್, ನೆಕ್ಸಾನ್‌ನಂತಹ ಕಾರುಗಳು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

toyota-urban-cruiser-taisor-sales-2026-february

ಟೊಯೋಟಾ ಟೈಸರ್ ವಿಶೇಷತೆಗಳು: 1.2L K-ಸಿರೀಸ್ ಪೆಟ್ರೋಲ್ ಮತ್ತು ಉತ್ಸಾಹಭರಿತ 1.0L ಟರ್ಬೊ ಪೆಟ್ರೋಲ್ ಎಂಬ ಎರಡು ದಕ್ಷ ಎಂಜಿನ್ ಆಯ್ಕೆಗಳಿಂದ ನಡೆಸಲ್ಪಡುವ ಈ ವಾಹನವು 22.79 ಕಿ.ಮೀ/ಲೀ ವರೆಗೆ ಅಸಾಧಾರಣ ಮೈಲೇಜ್ ನೀಡುತ್ತದೆ ಎಂದು ಟೊಯೋಟಾ ಹೇಳಿಕೊಂಡಿದೆ. 5MT, 5AMT, ಮತ್ತು 6AT ಸೇರಿದಂತೆ ಬಹು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತದೆ.

ಟೊಯೋಟಾ ಟೈಸರ್ ಹೊರಭಾಗವು ನಯವಾದ LED ಹೆಡ್‌ಲ್ಯಾಂಪ್‌ಗಳು, ಟ್ವಿನ್ LED DRLಗಳು ಮತ್ತು ಕ್ರೋಮ್ ಅಕ್ಸೆಂಟ್‌ಗಳೊಂದಿಗೆ ಸಿಗ್ನೇಚರ್ ಟ್ರೆಪೆಜಾಯಿಡಲ್ ಗ್ರಿಲ್‌ನೊಂದಿಗೆ ಎದ್ದು ಕಾಣುತ್ತದೆ. ಇಂಟೀರಿಯರ್ ಪ್ರೀಮಿಯಂ ಡ್ಯುಯಲ್-ಟೋನ್ ಕ್ಯಾಬಿನ್, 60:40 ಸ್ಪ್ಲಿಟ್ ಹಿಂಭಾಗದ ಸೀಟುಗಳು, ಹಿಂಭಾಗದ AC ವೆಂಟ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

toyota-urban-cruiser-taisor-sales-2026-february

ವರ್ಧಿತ ಸೌಕರ್ಯ ಮತ್ತು ನಿಯಂತ್ರಣಕ್ಕಾಗಿ ಟೊಯೋಟಾ ಟೈಸರ್‌ನಲ್ಲಿ ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು (AT), ವೈರ್‌ಲೆಸ್ ಚಾರ್ಜಿಂಗ್ ಮತ್ತು ಸ್ಮಾರ್ಟ್‌ವಾಚ್‌ನೊಂದಿಗೆ ಟೊಯೋಟಾ ಐ-ಕನೆಕ್ಟ್ ಮತ್ತು ವಾಯಿಸ್ ಅಸಿಸ್ಟ್ ಹೊಂದಾಣಿಕೆಯಂತಹ ಅನುಕೂಲಕರ ವೈಶಿಷ್ಟ್ಯಗಳನ್ನು ನೀಡಲಾಗಿದೆ. ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಈಗ, ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗುದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, March 11, 2026, 17:03 [IST]
English summary
Toyota urban cruiser taisor sales 2026 february
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+