TVS: ಬಡವರಿಗಾಗಿ ಬೈಕ್ ಬೆಲೆಯಲ್ಲಿ ತ್ರಿಚಕ್ರ ವಾಹನ ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್ (TVS Motor), ಟಿವಿಎಸ್ ಕಿಂಗ್ ಕಾರ್ಗೋ HD CNG ತ್ರಿಚಕ್ರ ವಾಹನವನ್ನು ತುಂಬಾ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಪ್ರಸ್ತುತ ಒಂದು ರಾಯಲ್‌ ಎನ್‌ಫೀಲ್ಡ್ ಜಿಟಿ ಬೈಕ್ ಆರಂಭಿಕ ಬೆಲೆಯೇ 3.5 (ಎಕ್ಸ್ - ಶೋರೂಂ) ಲಕ್ಷವಿದೆ. ಇದಕ್ಕಿಂತ ಕಮ್ಮಿ ಬೆಲೆಗೆ ಹೊಸ ಟಿವಿಎಸ್ ಕಿಂಗ್ ಕಾರ್ಗೋ HD CNG ವಾಹನವನ್ನು ಪರಿಚಯಿಸಲಾಗಿದೆ. ಈ ಹೊಸ ವಾಹನದ ಬೆಲೆ, ಫೀಚರ್ಸ್, ಎಂಜಿನ್ ಕುರಿತ ವಿಶೇಷತೆಗಳು ಇಲ್ಲಿವೆ.

ಟಿವಿಎಸ್ ಕಿಂಗ್ ಕಾರ್ಗೋ ಬಿಡುಗಡೆಯೊಂದಿಗೆ, ಟಿವಿಎಸ್ ಮೋಟಾರ್ ಕಂಪನಿಯು ಗ್ರಾಹಕರ ಜೀವನೋಪಾಯವನ್ನು ಬೆಂಬಲಿಸುವ ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ವಾಹನಗಳನ್ನು ನೀಡುವುದನ್ನು ಮುಂದುವರೆಸಿದೆ. ಇದು 'ಕಡಿಮೆ ದಣಿವು. ಹೆಚ್ಚಿನ ಆದಾಯ' ('ಥಕಾನ್ ಕಾಮ್. ಕಮೈ ಜ್ಯಾದಾ') ಎಂಬ ತನ್ನ ಬ್ರ್ಯಾಂಡ್ ಭರವಸೆಗೆ ಅನುಗುಣವಾಗಿದೆ ಎಂದು ಟಿವಿಎಸ್ ಹೇಳಿದೆ.

tvs-king-kargo-hd-cng-price-features-engine-details

ಟಿವಿಎಸ್ ಕಿಂಗ್ ಕಾರ್ಗೋ ಎಚ್‌ಡಿ ಸಿಎನ್‌ಜಿ (TVS King Cargo HD CNG) ತ್ರಿ - ಚಕ್ರ ವಾಣಿಜ್ಯ ವಾಹನವನ್ನು ರೂ. 2,70,648 (ಎಕ್ಸ್ - ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಟಿವಿಎಸ್ ಕಿಂಗ್ ಕಾರ್ಗೋ HD CNG ವಾಹನವನ್ನು EMI ನಲ್ಲಿ ಬಡವರು ಕೂಡ ಖರೀದಿಸಿ ವಾಣಿಜ್ಯ ಬಳಕೆಯಲ್ಲಿ ಉತ್ತಮ ಲಾಭ ಗಳಿಸಬಹುದಾಗಿದೆ. ಅಲ್ಲದೆ ವಾಹನದ ಮೇಲೆ 3 - ವರ್ಷ ವಾರೆಂಟಿ ನೀಡುತ್ತಿರುವುದಾಗಿ ಟಿವಿಎಸ್ ಹೇಳಿದೆ.

ಈ ವಾಹನವು ದೆಹಲಿ NCR, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ವಾಹನವು ಅಧಿಕೃತ ಮುಖ್ಯ ಡೀಲರ್‌ಗಳು, ಶಾಖೆಗಳು, ಡೀಲರ್‌ಶಿಪ್‌ಗಳು ಮತ್ತು ಸರ್ವಿಸ್ ಸೆಂಟರ್‌ಗಳಲ್ಲಿ 470 ಕ್ಕೂ ಹೆಚ್ಚು ಸರ್ವಿಸ್‌ ಟಚ್ ‌ಪಾಯಿಂಟ್‌ಗಳನ್ನು ಒಳಗೊಂಡಿರುವ ದೃಢವಾದ ಸರ್ವಿಸ್ ನೆಟ್‌ವರ್ಕ್ ಹೊಂದಿದೆ.

tvs-king-kargo-hd-cng-price-features-engine-details

ಹೊಸ ಟಿವಿಎಸ್ ಕಿಂಗ್ ಕಾರ್ಗೋ ಬಾಳಿಕೆ ಮತ್ತು ಕಾರ್ಯಾಚರಣೆಯ ಸುಲಭತೆಗಾಗಿ ನಿರ್ಮಿಸಲಾಗಿದ್ದು, ದೃಢವಾದ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಜೊತೆಗೆ ಇದು ಸಿಎನ್‌ಜಿ ವಾಹನ ಆಗಿರುವುದರಿಂದ ಉತ್ತಮ ಮೈಲೇಜ್ ಕೂಡ ನೀಡಲಿದೆ. ವಾಹನದ ಮೇಲೆ 3 - ವರ್ಷ ಅಥವಾ 1.5 ಲಕ್ಷ (ಯಾವುದು ಮೊದಲೋ ಅದು) ಕಿ.ಮೀ ವರೆಗೆ ವಾರಂಟಿ ನೀಡಲಾಗಿದೆ.

ಹೊಸ ಟಿವಿಎಸ್ ಕಿಂಗ್ ಕಾರ್ಗೋ 301.1 ಸಿಸಿ ಲಿಕ್ವಿಡ್ - ಕೂಲ್ಡ್ ಎಂಜಿನ್‌ ಹೊಂದಿದ್ದು, 9.1 kW ಪವರ್ ಮತ್ತು 22.4 Nm ಟಾರ್ಕ್ ಉತ್ಪಾದಿಸುತ್ತದೆ. 235 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 3,420 ಮಿ.ಮೀ ಟರ್ನಿಂಗ್ ರೇಡಿಯಸ್ ‌ನೊಂದಿಗೆ ಉನ್ನತ ದರ್ಜೆಯ ಕ್ಯಾಬಿನ್ ಒಳಗೊಂಡಿದೆ. ಭಾರೀ ಲಗ್ಗೇಜ್ ನಡುವೆಯೂ 62 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚಿನ ಹೊರೆ ಸಾಗಿಸುವ ಸಾಮರ್ಥ್ಯಕ್ಕಾಗಿ ವಿಭಾಗದಲ್ಲಿಯೇ ಅತ್ಯುತ್ತಮವಾದ 6.6 - ಅಡಿ ಲೋಡ್ ಡೆಕ್ ನೀಡಲಾಗಿದ್ದು, ಭಾರೀ ಲಗ್ಗೇಜ್ ಇದ್ದರೂ ವಿಶ್ವಾಸಾರ್ಹ ಪರ್ಫಾಮೆನ್ಸ್ ನೀಡುತ್ತದೆ. ನಗರ, ಅರೆ - ನಗರ ಮಾರುಕಟ್ಟೆಗಳಲ್ಲಿ ಸರಕು ಕಾರ್ಯಾಚರಣೆಗಳಿಗೆ ಸೂಕ್ತವಾಗಿರುತ್ತದೆ. ದಟ್ಟಣೆಯ ಸಿಟಿ ಟ್ರಾಫಿಕ್ ಪರಿಸ್ಥಿತಿಗಳಲ್ಲಿಯೂ ಕಾರ್ಗೋ ಕಾರ್ಯಾಚರಣೆಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು.

ಸುಧಾರಿತ ಇನ್-ಕ್ಯಾಬಿನ್ ಸೌಕರ್ಯಕ್ಕಾಗಿ ಉದ್ಯಮದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣವಾಗಿ ರೋಲಿಂಗ್ ವಿಂಡೋಗಳು, ಗ್ರೇಡಬಿಲಿಟಿ, ಮೈಲೇಜ್ ಮತ್ತು ಲೋಡ್ ಅಡಿಯಲ್ಲಿ ಚಾಲನೆಯ ಸುಲಭತೆಯನ್ನು ಹೆಚ್ಚಿಸುವ ಪವರ್ ಗೇರ್ ನೀಡಲಾಗಿದೆ. ಜೊತೆಗೆ 3 ವರ್ಷಗಳ ರಸ್ತೆಬದಿಯ ಸಹಾಯ (Roadside assistance) ವನ್ನು ನೀಡಲಾಗುತ್ತದೆ ಎಂದು ಟಿವಿಎಸ್ ಮೋಟಾರ್ ಕಂಪನಿ ತಿಳಿಸಿದೆ.

More from DriveSpark

Article Published On: Sunday, February 8, 2026, 17:05 [IST]
English summary
Tvs king kargo hd cng price features engine details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+