TVS: ಬಡವರು ಕೂಡ ಹಣ ಗಳಿಸಬೇಕು: ಗಾಡಿಯೊಂದಿಗೆ ಕುಟುಂಬ ಸುರಕ್ಷತೆಯ ಭರವಸೆ ನೀಡಿದ ಟಿವಿಎಸ್

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿ, ಇಂದು 'ಟಿವಿಎಸ್ ಕಿಂಗ್ ಕಾ ವಾದ 3.0' (TVS KING Ka Vaada 3.0) ಕಾರ್ಯಕ್ರಮವನ್ನು ಪರಿಚಯಿಸಿದೆ. ಇದರಡಿ ಟಿವಿಎಸ್ ಕಿಂಗ್ ತ್ರಿಚಕ್ರ ವಾಹನ ಬಳಸುವ ಕುಟುಂಬಕ್ಕೆ ವರ್ಧಿತ ಗ್ರಾಹಕ-ಮೌಲ್ಯ ಬೆಂಬಲವನ್ನು ನೀಡಲಾಗುತ್ತದೆ. ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಟಿವಿಎಸ್ ಮೋಟಾರ್ ಕಂಪನಿಯು ವಾಹನ ಮಾಲೀಕತ್ವವನ್ನು ಮೀರಿ ತನ್ನ ಬದ್ಧತೆಯನ್ನು ವಿಸ್ತರಿಸಿದೆ. ಗ್ರಾಹಕರು ಮತ್ತು ಅವರ ಕುಟುಂಬಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವುದಾಗಿ ಟಿವಿಎಸ್ ಹೇಳಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರಾಹಕರು ಮತ್ತು ಅವರ ಕುಟುಂಬಗಳಿಗೆ ಕಡಿಮೆ ಡೌನ್‌ಟೈಮ್ ಮತ್ತು ವರ್ಧಿತ ಆರ್ಥಿಕ ಭದ್ರತೆಯನ್ನು ನೀಡಲು ವಿನ್ಯಾಸಗೊಳಿಸಲಾದ 'ಟಿವಿಎಸ್ ಕಿಂಗ್ ಕಾ ವಾದ 3.0', ಸಮಗ್ರ ಮಾಲೀಕತ್ವ ಪ್ಯಾಕೇಜ್ ಒದಗಿಸುತ್ತದೆ. ವಿಸ್ತೃತ ವಾರೆಂಟಿ, ಉಚಿತ ನಿರ್ವಹಣಾ ಸರ್ವಿಸ್‌ಗಳು ಮತ್ತು ರಸ್ತೆಬದಿಯ ಸಹಾಯದ ಜೊತೆಗೆ ವೈಯಕ್ತಿಕ ಮತ್ತು ಕುಟುಂಬ ರಕ್ಷಣಾ ಪ್ರಯೋಜನಗಳನ್ನು ಇದರಲ್ಲಿ ಪರಿಚಯಿಸಲಾಗಿದೆ.

tvs-motor-company-launches-tvs-king-ka-vaada-3-0

'ಟಿವಿಎಸ್ ಕಿಂಗ್ ಕಾ ವಾದ 3.0' ಪ್ರಮುಖ ಪ್ರಯೋಜನಗಳು:

1. ಸಾವು ಅಥವಾ ಶಾಶ್ವತ ಅಂಗವೈಕಲ್ಯವಾದಲ್ಲಿ ರೂ.10 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಕವರೇಜ್
2. ಸಾವು ಅಥವಾ ಶಾಶ್ವತ ಅಂಗವೈಕಲ್ಯವಾದಲ್ಲಿ ಎರಡು ಮಕ್ಕಳಿಗೆ ಪ್ರತಿ ಮಗುವಿಗೆ ರೂ.1 ಲಕ್ಷದ ಶೈಕ್ಷಣಿಕ ಬೆಂಬಲ
3. ಆಸ್ಪತ್ರೆಗೆ ದಾಖಲಾದಾಗ ಆದಾಯ ರಕ್ಷಣೆಯಡಿ 30 ದಿನಗಳವರೆಗೆ ದಿನಕ್ಕೆ ರೂ.4,000 ನೀಡಲಾಗುವುದು
4. ICE (ಇಂಧನ ಚಾಲಿತ ವಾಹನ) ಮತ್ತು EV ಮಾಡಲ್‌ಗಳ ಮೇಲೆ ವಿಸ್ತೃತ ವಾರೆಂಟಿ ಕವರೇಜ್
5. ಮೂರು ಉಚಿತ ನಿರ್ವಹಣಾ ಸರ್ವಿಸ್‌ಗಳು
6. ತಡೆರಹಿತ ಕಾರ್ಯಾಚರಣೆಗಳಿಗೆ ರಸ್ತೆಬದಿಯ ನೆರವು (Road Side Assist)

ಈ ಯೋಜನೆಯು ಸಂಪೂರ್ಣ TVS ಕಿಂಗ್ ತ್ರಿಚಕ್ರ ವಾಹನಗಳಿಗೆ ಅನ್ವಯಿಸುತ್ತದೆ, ಇದು ಪ್ರಯಾಣಿಕ ಮತ್ತು ಸರಕು ವಿಭಾಗಗಳಲ್ಲಿ ICE ಮತ್ತು EV ವೇರಿಯೆಂಟ್‌ಗಳನ್ನು ಒಳಗೊಂಡಿದೆ. TVS ಕಿಂಗ್ ಡಿಲಕ್ಸ್ ಮತ್ತು TVS ಕಿಂಗ್ ಡ್ಯುರಾಮ್ಯಾಕ್ಸ್ ಪ್ಲಸ್‌ನಂತಹ ಪ್ರಯಾಣಿಕ ICE ಮಾಡಲ್‌ಗಳು ಎರಡು ವರ್ಷಗಳ ವಾರಂಟಿ, ಮೂರು ಉಚಿತ ಸರ್ವಿಸ್‌ಗಳು ಮತ್ತು ಒಂದು ವರ್ಷದ ರಸ್ತೆಬದಿಯ ಸಹಾಯವನ್ನು ಪಡೆಯುತ್ತವೆ.

tvs-motor-company-launches-tvs-king-ka-vaada-3-0

TVS ಕಿಂಗ್ EV ಮ್ಯಾಕ್ಸ್ ಗ್ರಾಹಕರು ಉದ್ಯಮ - ಪ್ರಮುಖ ಆರು ವರ್ಷಗಳ ವಾರಂಟಿ, ಮೂರು ಉಚಿತ ಸರ್ವಿಸ್‌ಗಳು ಮತ್ತು ಮೂರು ವರ್ಷಗಳ ರಸ್ತೆಬದಿಯ ಸಹಾಯದಿಂದ ಪ್ರಯೋಜನ ಪಡೆಯುತ್ತಾರೆ. TVS ಕಿಂಗ್ ಕಾರ್ಗೋ HD ಮತ್ತು TVS ಕಿಂಗ್ ಕಾರ್ಗೋ HD EV ಸೇರಿದಂತೆ ಕಾರ್ಗೋ ಮಾಡಲ್‌ಗಳು ಆರು ವರ್ಷಗಳವರೆಗೆ ವಾರಂಟಿ, ಮೂರು ಉಚಿತ ಸರ್ವಿಸ್‌ಗಳು ಮತ್ತು ಮೂರು ವರ್ಷಗಳ ರಸ್ತೆಬದಿಯ ಸಹಾಯವನ್ನು ಪಡೆಯುತ್ತವೆ.

ಜೊತೆಗೆ ಅದೇ ವೈಯಕ್ತಿಕ ಮತ್ತು ಕುಟುಂಬ ರಕ್ಷಣಾ ಪ್ರಯೋಜನಗಳನ್ನು ಪಡೆಯುತ್ತವೆ. 'ಟಿವಿಎಸ್ ಕಿಂಗ್ ಕಾ ವಾದ 3.0' ನೊಂದಿಗೆ, ಟಿವಿಎಸ್ ಮೋಟಾರ್ ಕಂಪನಿಯು ತ್ರಿಚಕ್ರ ವಾಹನ ವಿಭಾಗದಲ್ಲಿ ಮಾಲೀಕತ್ವದ ಅನುಭವವನ್ನು ಹೆಚ್ಚಿಸಿದೆ. ಜೀವನೋಪಾಯ ಮತ್ತು ಕುಟುಂಬಗಳೆರಡನ್ನೂ ರಕ್ಷಿಸಲು ಉತ್ಪನ್ನ ವಿಶ್ವಾಸಾರ್ಹತೆಯನ್ನು ಸಮಗ್ರ ಗ್ರಾಹಕ ಬೆಂಬಲದೊಂದಿಗೆ ಸಂಯೋಜಿಸುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 20, 2026, 17:18 [IST]
English summary
Tvs motor company launches tvs king ka vaada 3 0
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+