TVS: ಬಲಶಾಲಿ ಸ್ಕೂಟರ್‌ಯಿದು.. ದಿನಬಳಕೆಗೆ ಬೆಸ್ಟ್ ಚಾಯ್ಸ್, 1.09 ಲಕ್ಷ ರೂಪಾಯಿ.. ಕಾರಿನಂತಹ ಫೀಚರ್ಸ್!

ಟಿವಿಎಸ್ ಎನ್‌ಟಾರ್ಕ್ 150 (TVS Ntorq 150) ಪ್ರಮುಖ ಸ್ಕೂಟರ್ ಎಂದೇ ಹೆಸರುವಾಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಫೀಸ್‌ಗೆ ಹೋಗುವವರು ಬಳಕೆ ಮಾಡಬಹುದಾಗಿದೆ. ನೋಡಲು ಕೂಡ ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಎನ್‌ಟಾರ್ಕ್ 150' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಸ್ಕೂಟರ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants):

ಹೊಸ 'ಟಿವಿಎಸ್ ಎನ್‌ಟಾರ್ಕ್ 150' ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಲಭ್ಯವಿದೆ. ಕನಿಷ್ಠ ರೂ.1.09 ಲಕ್ಷ ಹಾಗೂ ಗರಿಷ್ಠ ರೂ.1.18 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಸ್ಟ್ಯಾಂಡರ್ಡ್ ಎನ್‌ಟಾರ್ಕ್ 150 (Standard Ntorq 150) ಮತ್ತು ಎನ್‌ಟಾರ್ಕ್ 150 ಟಿಎಫ್‌ಟಿ (Ntorq 150 TFT) ಎಂಬ 2 ರೂಪಾಂತರಗಳೊಂದಿಗೂ ದೊರೆಯುತ್ತದೆ.

TVS Ntorq 150 Price Design Colours Engine Mileage Features And All Details

ವಿನ್ಯಾಸ & ಬಣ್ಣಗಳು (Design & Colors):

ಇದು ಹೈಪರ್ ಸ್ಪೋರ್ಟ್ ಸ್ಕೂಟರ್ ಎಂದೇ ಜನಪ್ರಿಯತೆಗಳಿಸಿದೆ. ಅದಕ್ಕೆ ತಕ್ಕಂತೆ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಗ್ರಾಬ್ ರೈಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಅಗ್ರೆಸಿವ್ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಸ್ಟೆಲ್ತ್ ಸಿಲ್ವರ್, ರೇಸಿಂಗ್ ರೆಡ್, ಟರ್ಬೊ ಬ್ಲೂ ಹಾಗೂ ನೈಟ್ರೋ ಗ್ರೀನ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಸುತ್ತಳತೆ (Dimensions):

ಈ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,861 ಮಿ.ಮೀ ಉದ್ದ, 740 ಮಿ.ಮೀ ಅಗಲ ಮತ್ತು 1,120 ಮಿ.ಮೀ ಎತ್ತರವಿದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 115 ಕೆಜಿ ತೂಕವಿದೆ.

TVS Ntorq 150 Price Design Colours Engine Mileage Features And All Details

ಕಾರ್ಯಕ್ಷಮತೆ (Performance):

ನೂತನ 'ಎನ್‌ಟಾರ್ಕ್ 150' ಸ್ಕೂಟರ್ ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 149.7-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಅದಕ್ಕೆ ಅನುಗುಣವಾಗಿ 13.2 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) & 14.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮೈಲೇಜ್ (Mileage):

ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಗಿದೆ. 1 ಲೀಟರ್ ಪೆಟ್ರೋಲ್ ಹಾಕಿಸಿದರೆ 40 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 5.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. ಭರ್ತಿಯಾಗಿ ತುಂಬಿಸಿದರೆ 240 ಕಿಲೋಮೀಟರ್‌ವರೆಗೆ ಕ್ರಮಿಸಬಲ್ಲದು.

TVS Ntorq 150 Price Design Colours Engine Mileage Features And All Details

ವೈಶಿಷ್ಟ್ಯಗಳು (Features):

ಈ ಸ್ಕೂಟರ್ ಫುಲ್-ಟಿಎಫ್‌ಟಿ ಡಿಸ್‌ಪ್ಲೇ, ಟ್ರಾಕ್ಷನ್ ಕಂಟ್ರೋಲ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿನಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸ್ಟ್ರೀಟ್ ಮತ್ತು ರೇಸ್ ಎಂಬ 2 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಕೊಂಡೊಯ್ಯಲು 22 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಒಳಗೊಂಡಿದೆ. 104 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಬರೀ 6.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಸೀಟ್ ಎತ್ತರವು 770 ಎಂಎಂ ಇದೆ.

ಸಸ್ಪೆನ್ಷನ್ ಸೆಟಪ್‌ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಹೊಸ 'ಟಿವಿಎಸ್ ಎನ್‌ಟಾರ್ಕ್ 150' ಸವಾರರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಬಲ್ಲದು. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. 12-ಇಂಚಿನ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಯಮಹಾ ಏರೋಕ್ಸ್ 155 (Yamaha Aerox 155), ಹೀರೋ ಜೂಮ್ 160 (Hero Xoom 160) ಮತ್ತು ಎಪ್ರಿಲಿಯಾ ಎಸ್ಆರ್ 175 (Aprilia SR 175) ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Wednesday, January 14, 2026, 13:40 [IST]
English summary
Tvs ntorq 150 price design colours engine mileage features and all details
Read more on tvs motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+