ವಿನಫಾಸ್ಟ್ VF6, VF7 ಬುಕಿಂಗ್ ಆರಂಭ: ₹21,000ಕ್ಕೆ ಹೊಸ ಇವಿ ನಿಮ್ಮದಾಗಿಸಿಕೊಳ್ಳಿ, ಫೀಚರ್ಸ್ ನೋಡಿ ಫಿದಾ ಆಗ್ತೀರಾ!
ವಿನಫಾಸ್ಟ್ ಸಂಸ್ಥೆಯ ಅತ್ಯಾಕರ್ಷಕ VF6 ಮತ್ತು VF7 ಎಲೆಕ್ಟ್ರಿಕ್ SUVಗಳ ಬುಕಿಂಗ್ ಭಾರತದಲ್ಲಿ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಕಂಪನಿಯ ಅಧಿಕೃತ ಪೋರ್ಟಲ್ ತೆರೆದಿದ್ದು, ಗ್ರಾಹಕರು ₹21,000 ಮುಂಗಡ ಹಣ (ರಿಫಂಡಬಲ್ ಟೋಕನ್) ಪಾವತಿಸಿ ವಾಹನ ಕಾಯ್ದಿರಿಸಬಹುದು. VF6 ಮಾಡೆಲ್‌ನ ಆರಂಭಿಕ ಎಕ್ಸ್-ಷೋರೂಮ್ ಬೆಲೆ ₹18.19 ಲಕ್ಷವಾಗಿದ್ದರೆ, VF7 ಮಾಡೆಲ್ ₹22.99 ಲಕ್ಷಕ್ಕೆ ಲಭ್ಯವಿದೆ. ಹಬ್ಬದ ಸೀಸನ್‌ನಲ್ಲಿ ಹೊಸ ಇವಿ ಖರೀದಿಸಲು ಯೋಜಿಸುತ್ತಿರುವ ಕುಟುಂಬಗಳಿಗೆ ಇವು ಸೂಕ್ತ ಆಯ್ಕೆಯಾಗಿವೆ. ಆನ್‌ಲೈನ್ ಬುಕಿಂಗ್ ಮಾಡುವಾಗಲೇ ಬಣ್ಣ, ವೇರಿಯೆಂಟ್ ಹಾಗೂ ಡೆಲಿವರಿ ಪಡೆಯಲು ಇಷ್ಟಪಡುವ ಡೀಲರ್‌ಶಿಪ್ ಆಯ್ಕೆ ಮಾಡುವ ಅವಕಾಶವೂ ನೀಡಲಾಗಿದೆ.
ಗ್ರಾಹಕರು ಏಳು ವೈವಿಧ್ಯಮಯ ಬಣ್ಣಗಳು ಹಾಗೂ ಹಲವು ಟ್ರಿಮ್‌ಗಳಲ್ಲಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. VF6 ಮಾಡೆಲ್ ಅರ್ಥ್, ವಿಂಡ್ ಮತ್ತು ವಿಂಡ್ ಇನ್ಫಿನಿಟಿ ಆಯ್ಕೆಗಳಲ್ಲಿ ಲಭ್ಯವಿದ್ದರೆ, VF7 ಮಾಡೆಲ್ ವಿಂಡ್ ಇನ್ಫಿನಿಟಿ, ಸ್ಕೈ ಹಾಗೂ ಸ್ಕೈ ಇನ್ಫಿನಿಟಿ ಆಪ್ಷನ್‌ಗಳಲ್ಲಿ ಸಿಗಲಿದೆ. ಇವೆರಡೂ ಕಾರ್‌ಗಳಲ್ಲಿ ಲೆವೆಲ್ 2 ADAS, ಪ್ಯಾನೊರಾಮಿಕ್ ಗ್ಲಾಸ್ ರೂಫ್, ಹೆಡ್-ಅಪ್ ಡಿಸ್‌ಪ್ಲೇ (HUD) ಮತ್ತು ಸ್ಮಾರ್ಟ್ ಕನೆಕ್ಟೆಡ್ ಫೀಚರ್‌ಗಳನ್ನು ನೀಡಲಾಗಿದೆ. ಕಾಂಪ್ಯಾಕ್ಟ್ SUVಯಿಂದ ಪ್ರೀಮಿಯಂ ಇವಿಗೆ ಅಪ್‌ಗ್ರೇಡ್ ಆಗಲು ಬಯಸುವ ಕುಟುಂಬಗಳಿಗೆ, ಭಾರಿ ಇಎಮ್‌ಐ ಹೊರೆಯಿಲ್ಲದೆ ಇದು ಅತ್ಯುತ್ತಮ ಆಪ್ಷನ್ ಆಗಿದೆ.

ವಿನಫಾಸ್ಟ್ VF6, VF7 ಬುಕಿಂಗ್: ಡೆಲಿವರಿ ಸಮಯ ಮತ್ತು ಡೀಲರ್‌ಶಿಪ್ ಮಾಹಿತಿ
VF6 ಮತ್ತು VF7 ಕಾರ್‌ಗಳ ಡೆಲಿವರಿ ಪ್ರಕ್ರಿಯೆ ಅಕ್ಟೋಬರ್ 2025 ರಿಂದ ಆರಂಭಗೊಳ್ಳಲಿದ್ದು, ಜಾಲ ವಿಸ್ತರಣೆಯಾದಂತೆ ಮುಂದುವರಿಯಲಿದೆ. ವಿನಫಾಸ್ಟ್ ನೆಟ್‌ವರ್ಕ್ ಸಕ್ರಿಯವಾಗಿರುವ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೋ ನಗರಗಳ ಗ್ರಾಹಕರಿಗೆ ಬೇಗನೆ ಕಾರ್ ಕೈಸೇರಲಿದೆ. ಇನ್ನು ಟೈಯರ್-2 ನಗರಗಳಲ್ಲಿ ಸ್ಥಳೀಯ ಶೋರೂಮ್‌ಗಳ ಸಿದ್ಧತೆಗೆ ಅನುಗುಣವಾಗಿ ಡೆಲಿವರಿ ದಿನಾಂಕ ನಿರ್ಧಾರವಾಗಲಿದೆ. ದೇಶಾದ್ಯಂತ 50ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದುವುದಾಗಿ ಹೇಳಿರುವ ವಿನಫಾಸ್ಟ್, ಬೆಂಗಳೂರಿನಲ್ಲಿ ಪ್ರಮುಖ 3S ಫೆಸಿಲಿಟಿಯನ್ನು ಪ್ರಾರಂಭಿಸಿದೆ. ಎಲ್ಲಿ ಶೋರೂಮ್ ಮತ್ತು ಸ್ಟಾಕ್ ಲಭ್ಯವಿದೆಯೋ ಅಲ್ಲಿ ಶೀಘ್ರ ಡೆಲಿವರಿ ನಿರೀಕ್ಷಿಸಬಹುದು.
ಚಾರ್ಜಿಂಗ್ ಪ್ಲಾನ್, ವಾರಂಟಿ ಮತ್ತು ಬೈಬ್ಯಾಕ್ ಆಫರ್
ಈ ಇವಿಗಳಲ್ಲಿ CCS2, 7.2 kW AC ಮತ್ತು 100–110 kW DC ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಬ್ಯಾಟರಿ 10ರಿಂದ 70 ಪ್ರತಿಶತ ಚಾರ್ಜ್ ಆಗಲು ಕೇವಲ 24ರಿಂದ 28 ನಿಮಿಷ ಸಾಕು. ಭಾರತದಲ್ಲಿ ತನ್ನ ವಿ-ಗ್ರೀನ್ (V-Green) ನೆಟ್‌ವರ್ಕ್ ಮೂಲಕ ಮಾರ್ಚ್ 31, 2029 ರವರೆಗೆ ಉಚಿತ ಸಾರ್ವಜನಿಕ ಚಾರ್ಜಿಂಗ್ ನೀಡುವುದಾಗಿ ವಿನಫಾಸ್ಟ್ ಘೋಷಿಸಿದೆ. ಇದರೊಂದಿಗೆ 'ವ್ಯಾಲ್ಯೂ ಅಶ್ಯೂರ್ಡ್' ಬೈಬ್ಯಾಕ್ ಆಫರ್ ಸಹ ಲಭ್ಯವಿದೆ. ಈ ಬಗ್ಗೆ ಮಾತನಾಡಿದ ಸಿಇಒ ತಪನ್ ಘೋಷ್, "3 ವರ್ಷಗಳ ಉಚಿತ ನಿರ್ವಹಣೆ, ಬ್ಯಾಟರಿ ಮೇಲೆ 10 ವರ್ಷಗಳ ವಾರಂಟಿ ಜೊತೆಗೆ VF7 ಗೆ 10 ವರ್ಷ ಹಾಗೂ VF6 ಗೆ 7 ವರ್ಷಗಳ ವಾಹನ ವಾರಂಟಿಯನ್ನು ಗ್ರಾಹಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ" ಎಂದಿದ್ದಾರೆ.
ಸ್ಪರ್ಧಿಗಳ ಸವಾಲು: ಎಂಜಿ ವಿಂಡ್ಸರ್, ಕ್ರೆಟಾ ಎಲೆಕ್ಟ್ರಿಕ್, ನೆಕ್ಸಾನ್ EV LR - ನಿಮಗೆ ಯಾವುದು ಸೂಕ್ತ?
ಹೊಸ ಇವಿ ಖರೀದಿದಾರರು ಎಂಜಿ ವಿಂಡ್ಸರ್‌ನ ಆಕರ್ಷಕ ಬೆಲೆ ಹಾಗೂ 'ಬ್ಯಾಟರಿ-ಆ್ಯಸ್-ಎ-ಸರ್ವೀಸ್' (BaaS) ಮಾಡೆಲ್, ಕ್ರೆಟಾ ಎಲೆಕ್ಟ್ರಿಕ್‌ನ ಜನಪ್ರಿಯತೆ ಮತ್ತು ಟಾಟಾ ನೆಕ್ಸಾನ್ EV LR ನ ಪರೀಕ್ಷಿತ ತಂತ್ರಜ್ಞಾನವನ್ನು ಹೋಲಿಕೆ ಮಾಡುತ್ತಿದ್ದಾರೆ. ₹20 ಲಕ್ಷದೊಳಗೆ ಪ್ರೀಮಿಯಂ ಫೀಚರ್ ಬಯಸುವ ಸಿಟಿ ಫ್ಯಾಮಿಲಿಗಳಿಗೆ VF6 ಹೇಳಿಮಾಡಿಸಿದಂತಿದೆ. ಇನ್ನು ಹೆಚ್ಚಿನ ಸ್ಪೇಸ್, ಲಾಂಗ್ ಡ್ರೈವ್ ರೇಂಜ್ ಮತ್ತು ಸುದೀರ್ಘ ವಾರಂಟಿ ಬಯಸುವ ಹೈವೇ ರೈಡರ್‌ಗಳಿಗೆ VF7 ಸೂಕ್ತ. ಬಜೆಟ್ ಪ್ರಿಯರಿಗೆ ವಿಂಡ್ಸರ್, ನಂಬಿಕಸ್ಥ ಬ್ರ್ಯಾಂಡ್ ಬಯಸುವವರಿಗೆ ಕ್ರೆಟಾ ಹಾಗೂ ಬೆಲೆ-ರೇಂಜ್ ನಡುವೆ ಸಮತೋಲನ ಬಯಸುವವರಿಗೆ ನೆಕ್ಸಾನ್ LR ಅತ್ಯುತ್ತಮ ಆಯ್ಕೆ ಎನಿಸಲಿವೆ.
| ಮಾಡೆಲ್ | ಆರಂಭಿಕ ಎಕ್ಸ್-ಷೋರೂಮ್ ಬೆಲೆ | ಬ್ಯಾಟರಿ | ರೇಂಜ್ (ಕ್ಲೈಮ್ಡ್) | DC ಫಾಸ್ಟ್ ಚಾರ್ಜ್ |
|---|---|---|---|---|
| VinFast VF6 | ₹18.19 ಲಕ್ಷ | 59.6 kWh | 463–468 ಕಿ.ಮೀ | 25 ನಿಮಿಷ (10–70%) |
| VinFast VF7 | ₹22.99 ಲಕ್ಷ | 70 kWh | 532 ಕಿ.ಮೀ | 28 ನಿಮಿಷ (10–70%) |
| MG Windsor EV | ₹17.38 ಲಕ್ಷ | 52.9 kWh | 449 ಕಿ.ಮೀ (MIDC) | 50 ನಿಮಿಷ (20–80%) |
| Hyundai Creta Electric | ₹18.03 ಲಕ್ಷ | 42–51.4 kWh | 390–510 ಕಿ.ಮೀ | — |
| Tata Nexon EV LR | ₹12.49 ಲಕ್ಷ | 45 kWh | 489 ಕಿ.ಮೀ | — |
ಅತ್ಯಾಧುನಿಕ ಹಾಗೂ ಹೊಸತನದ ಕ್ಯಾಬಿನ್ ಅನುಭವ ಬೇಕಿದ್ದರೆ ಮೆಟ್ರೋ ಸಿಟಿ ಡೆಲಿವರಿ ಸ್ಲಾಟ್‌ನೊಂದಿಗೆ VF6 ಅಥವಾ VF7 ಬುಕ್ ಮಾಡಬಹುದು. ಬುಕಿಂಗ್‌ಗೂ ಮುನ್ನ ಹೋಮ್-ಚಾರ್ಜರ್ ಇನ್‌ಸ್ಟಾಲೇಶನ್ ಸಮಯವನ್ನೂ ಪರಿಶೀಲಿಸಿ. ಕಡಿಮೆ ವೆಚ್ಚದಲ್ಲಿ ಸಿಟಿ ರೌಂಡ್ಸ್ ಹೊಡೆಯಲು ವಿಂಡ್ಸರ್ ಶಾರ್ಟ್‌ಲಿಸ್ಟ್ ಮಾಡಿಕೊಳ್ಳಬಹುದು. ಶೋರೂಮ್ ಹಾಗೂ ಸರ್ವೀಸ್ ನೆಟ್‌ವರ್ಕ್‌ಗೆ ಆದ್ಯತೆ ನೀಡುವವರಾದರೆ, ಕ್ರೆಟಾ ಎಲೆಕ್ಟ್ರಿಕ್ ಮತ್ತು ನೆಕ್ಸಾನ್ EV LR ಟೆಸ್ಟ್ ಡ್ರೈವ್ ಮಾಡಿ. ಮುಂಗಡ ಹಣ ಪಾವತಿಸುವ ಮೊದಲು ನಿಮ್ಮ ಮನೆ ಮತ್ತು ಕಚೇರಿ ಬಳಿ ಲಭ್ಯವಿರುವ ಚಾರ್ಜಿಂಗ್ ನೆಟ್‌ವರ್ಕ್ ಪರಿಶೀಲಿಸುವುದು ಒಳ್ಳೆಯದು.


Click it and Unblock the Notifications
