ಇಂಧನ ಬೆಲೆಗಳ ಏರಿಕೆ ನಡುವೆ ಕಾರುಗಳ ಮೇಲೆ ಶೇ3 ರಷ್ಟು ಡಿಸ್ಕೌಂಟ್ ಘೋಷಿಸಿದ ಹೊಸ ಬ್ರ್ಯಾಂಡ್!

ಜಾಗತಿಕ ಇಂಧನ ಬೆಲೆಗಳಲ್ಲಿನ ಏರಿಳಿತದ ನಡುವೆ, ವಿಯೆಟ್ನಾಂ ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ವಿನ್‌ಗ್ರೂಪ್ (VINGroup), ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಲ್ಲಿ ವಿಶೇಷ "ಟ್ರೇಡ್ ಗ್ಯಾಸ್ ಫಾರ್ ಎಲೆಕ್ಟ್ರಿಕ್" ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರಡಿ ಹಳೆಯ ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವ ಗ್ರಾಹಕರಿಗೆ ವಿನ್‌ಫಾಸ್ಟ್ (VinFast) ಕಾರುಗಳ ಮೇಲೆ ಹೆಚ್ಚುವರಿ ಶೇ3 ರಷ್ಟು ಡಿಸ್ಕೌಂಟ್ ಮತ್ತು ವಿನ್‌ಫಾಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ (ಇತರ ಮಾರುಕಟ್ಟೆಗಳು) ಮೇಲೆ ಶೇ5 ರಷ್ಟು ಡಿಸ್ಕೌಂಟ್ ನೀಡುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ವಿನ್‌ಫಾಸ್ಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಇನ್ನು ಬಿಡುಗಡೆ ಮಾಡಿಲ್ಲ, ಆದರೆ ವಿಯೆಟ್ನಾಂ ಹಾಗೂ ಇಂಡೋನೇಷ್ಯಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿವೆ. ಇವು ಉತ್ತಮ ಮಾರಾಟ ಕಾಣುತ್ತಿರುವ ವಿನ್‌ಫಾಸ್ಟ್‌ ಇವಿಗಳಾಗಿದ್ದು, ಮುಂಬರುವ ವರ್ಷಗಳಲ್ಲಿ ಭಾರತದಲ್ಲೂ ಪರಿಚಯಿಸಲಾಗುವುದು, ಈ ಬಗ್ಗೆ ಕಂಪನಿ ಅಧಿಕೃತವಾಗಿ ಧೃಡಪಡಿಸಿದೆ.

vingroup-offering-additional-3-percent-discount-on-vinfast-cars

ಕಾರುಗಳ ಮೇಲೆ ಡಿಸ್ಕೌಂಟ್

ಭಾರತದಲ್ಲಿ ಗ್ರಾಹಕರಿಗೆ ವಿನ್‌ಫಾಸ್ಟ್ (VinFast) ಕಾರುಗಳ ಮೇಲೆ ಹೆಚ್ಚುವರಿ ಶೇ3 ರಷ್ಟು ಡಿಸ್ಕೌಂಟ್ ನೀಡುವುದಾಗಿ ಕಂಪನಿ ಘೋಷಿಸಿದೆ. ಜಾಗತಿಕವಾಗಿ ಇಂಧನ ಬೆಲೆಗಳ ಏರಿಕೆಯಿಂದ, ಮುಂಬರುವ ದಿನಗಳಲ್ಲಿ ಇವಿಗಳಿಗೆ ಬೇಡಿಕೆ ಹೆಚ್ಚಾಗುವುದನ್ನು ಕಂಪನಿ ಅರಿತುಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ವಾಹನ ಖರೀದಿದಾರರನ್ನು ವಿನ್‌ಫಾಸ್ಟ್ ಎಲೆಕ್ಟ್ರಿಕ್ ವಾಹನಗಳತ್ತ ಮರಳಲಿಸಲು ಇದು ಒಳ್ಳೆಯ ಸಮಯವಾಗಿದೆ.

ವಿವರವಾಗಿ ಹೇಳುವುದಾದರೆ, ಪ್ರಸ್ತುತ ಲಭ್ಯವಿರುವ ಪ್ರೋತ್ಸಾಹಕಗಳ ಜೊತೆಗೆ, ಟ್ರೇಡ್ ಗ್ಯಾಸ್ ಫಾರ್ ಎಲೆಕ್ಟ್ರಿಕ್ ಕಾರ್ಯಕ್ರಮದ ಅಡಿಯಲ್ಲಿ ಹಳೆಯ ಇಂಧನ ಚಾಲಿತ ವಾಹನಗಳಿಂದ ಹೊಸ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವ ಗ್ರಾಹಕರಿಗೆ ಹೆಚ್ಚುವರಿ ಶೇ3 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಕಾರ್ಯಕ್ರಮವು ಎಲ್ಲಾ ನಾಲ್ಕು ಮಾರುಕಟ್ಟೆಗಳಾದ ವಿಯೆಟ್ನಾಂ, ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಲ್ಲಿ ಅನ್ವಯಿಸುತ್ತದೆ ಎಂದು ವಿನ್‌ಫಾಸ್ಟ್ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಡೀಲರ್‌ಶಿಪ್‌ಗೆ ಭೇಟಿ ನೀಡಿ.

vingroup-offering-additional-3-percent-discount-on-vinfast-cars

ಕ್ಸಾನ್ ಎಸ್‌ಎಂ ಶೇ10 ರಷ್ಟು ಇಳಿಕೆ

ವಿನ್‌ಫಾಸ್ಟ್‌ನ ಜಿಎಸ್‌ಎಂ ಗ್ರೀನ್ ಮತ್ತು ಸ್ಮಾರ್ಟ್ ಮೊಬಿಲಿಟಿ ಜಂಟಿ ಸ್ಟಾಕ್ ಕಂಪನಿಯು ವಿಯೆಟ್ನಾಂನ 'ಕ್ಸಾನ್ ಎಸ್‌ಎಂ' (Xanh SM) ಪ್ಲಾಟ್‌ಫಾರ್ಮ್ ಮತ್ತು ಇಂಡೋನೇಷ್ಯಾದ ಗ್ರೀನ್ ಎಸ್‌ಎಂನಲ್ಲಿ ಮಾರ್ಚ್ 11 ರಿಂದ ಮಾರ್ಚ್ 31, 2026 ರವರೆಗೆ ಎಲೆಕ್ಟ್ರಿಕ್ ಕಾರು ಸೇವೆಗಳ ದರಗಳಲ್ಲಿ ತಕ್ಷಣದ ಶೇ10 ರಷ್ಟು ಕಡಿತವನ್ನು ಘೋಷಿಸಿದೆ. ಈ ಉಪಕ್ರಮವು ಗ್ರಾಹಕರಿಗೆ ಹೆಚ್ಚು ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಸಾರಿಗೆ ಆಯ್ಕೆಯನ್ನು ನೀಡುತ್ತದೆ.

ಈ ಕ್ಸಾನ್ ಎಸ್‌ಎಂ ಎಂಬುದು ವಿಯೆಟ್ನಾಂನಲ್ಲಿ ಗ್ರೀನ್ ಮತ್ತು ಸ್ಮಾರ್ಟ್ ಮೊಬಿಲಿಟಿ ಜಾಯಿಂಟ್ ಸ್ಟಾಕ್ ಕಂಪನಿ (GSM)ಯ ಭಾಗವಾಗಿದೆ. ಇದು ವಿಯೆಟ್ನಾಂನಲ್ಲಿ ಮೊದಲ ಆಲ್ - ಎಲೆಕ್ಟ್ರಿಕ್ ರೈಡ್ - ಹೇಲಿಂಗ್ ಸೇವೆಯಾಗಿದ್ದು, ಎಲೆಕ್ಟ್ರಿಕ್ ಟ್ಯಾಕ್ಸಿಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳ ಬಾಡಿಗೆ ಮತ್ತು ಆಹಾರ ವಿತರಣಾ ಸೇವೆಗಳನ್ನು ನೀಡುತ್ತದೆ.

vingroup-offering-additional-3-percent-discount-on-vinfast-cars

ವಿನ್‌ಫಾಸ್ಟ್‌ನ ಜಾಗತಿಕ ಮಾರಾಟದ ಉಪ ಸಿಇಒ ಡುವಾಂಗ್ ಥಿ ಥು ಟ್ರಾಂಗ್ ಮಾತನಾಡಿ "ನಾಲ್ಕು ಪ್ರಮುಖ ಮಾರುಕಟ್ಟೆಗಳಲ್ಲಿ ಮಾರ್ಚ್‌ನಲ್ಲಿ ಪ್ರಾರಂಭಿಸಲಾದ ವಿಶೇಷ 'ಟ್ರೇಡ್ ಗ್ಯಾಸ್ ಫಾರ್ ಎಲೆಕ್ಟ್ರಿಕ್' ಕಾರ್ಯಕ್ರಮವು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತಿರುವ ಭೌಗೋಳಿಕ ರಾಜಕೀಯ ಚಂಚಲತೆಗೆ ವಿನ್‌ಫಾಸ್ಟ್‌ನ ಸಮಯೋಚಿತ ಪ್ರತಿಕ್ರಿಯೆಯಾಗಿದೆ. ಅಂತರರಾಷ್ಟ್ರೀಯ ಬೆಳವಣಿಗೆಗಳು ಮತ್ತು ಭವಿಷ್ಯದ ಇಂಧನ ಬೆಲೆಗಳನ್ನು ಅವಲಂಬಿಸಿ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು.

ಜಾಗತಿಕ ಎಲೆಕ್ಟ್ರಿಕ್ ವಾಹನ ಕ್ರಾಂತಿಯನ್ನು ಮುನ್ನಡೆಸುವ ಪ್ರವರ್ತಕ ತಯಾರಕರಲ್ಲಿ ಒಬ್ಬರಾಗಿ, ವಿನ್‌ಫಾಸ್ಟ್ ವಿಂಗ್ರೂಪ್‌ನ ಹಸಿರು ಪರಿಸರ ವ್ಯವಸ್ಥೆಯಲ್ಲಿನ ಕಂಪನಿಗಳೊಂದಿಗೆ ಇಂಧನ ಬೆಲೆಗಳ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇದು ಸ್ಮಾರ್ಟ್, ಹೆಚ್ಚು ಸಮರ್ಥನೀಯ ಮತ್ತು ಹೆಚ್ಚು ವೆಚ್ಚ - ಸಮರ್ಥ ವಾಹನಗಳ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ" ಎಂದರು.

More from DriveSpark

Article Published On: Thursday, March 12, 2026, 15:21 [IST]
English summary
Vingroup offering additional 3 percent discount on vinfast cars
Read more on VinFast india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+