ಮಾರುಕಟ್ಟೆಗೆ ಹೊಸ 7-ಸೀಟರ್ ಎಸ್‌ಯುವಿ ಬಿಡುಗಡೆ: ದೊಡ್ಡ ಸನ್‌ರೂಫ್... ಬೆಲೆಯೆಷ್ಟು, ಹೇಗಿದೆ?

ಜಾಗತಿಕ ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಇಂಡಿಯಾ, ಇಂದು ತನ್ನ ಬಹುನಿರೀಕ್ಷಿತ 7-ಸೀಟರ್ ಎಸ್‌ಯುವಿಯಾಗಿರುವ ಟೇರಾನ್ ಆರ್-ಲೈನ್‌ (Volkswagen Tayron R-Line)ನ ಬೆಲೆಗಳನ್ನು ಘೋಷಿಸಿ ಬಿಡುಗಡೆ ಮಾಡಿದೆ. ತಮ್ಮ ಆಕಾಂಕ್ಷೆಗಳನ್ನು ಪೂರೈಸುವ ಕಾರನ್ನು ಬಯಸುವ ಗ್ರಾಹಕರಿಗಾಗಿ ನಿರ್ಮಿಸಲಾದ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್, ಆಕರ್ಷಕ ಡಿಸೈನ್, ಹೈ-ಪರ್ಫಾಮೆನ್ಸ್, ಆಧುನಿಕ ತಂತ್ರಜ್ಞಾನ ಮತ್ತು ಅಸಾಧಾರಣ ಸೌಕರ್ಯವನ್ನು ನೀಡುತ್ತದೆ. ನಿಮ್ಮ ನಿರೀಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಮೀರಿ ಎಲ್ಲವನ್ನು ಪೂರೈಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಇದೇ ತಿಂಗಳ ಆರಂಭದಲ್ಲಿ ಫೋಕ್ಸ್‌ವ್ಯಾಗನ್ ಈ ಹೊಸ 7-ಸೀಟರ್ ಎಸ್‌ಯುವಿಗಾಗಿ ಪ್ರೀ-ಬುಕಿಂಗ್ ತೆರೆದಿತ್ತು, ಗ್ರಾಹಕರು ದೇಶಾದ್ಯಂತ ಅಧಿಕೃತ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಮತ್ತು ಬ್ರ್ಯಾಂಡ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ. 51,000 ಪಾವತಿಸಿ ಟೇರಾನ್ ಆರ್-ಲೈನ್ ಅನ್ನು ಬುಕ್ ಮಾಡಬಹುದು. ಬೆಲೆಗಳನ್ನು ತಿಳಿಯುವ ಮುನ್ನ ಈ ಕಾರು ಹೇಗಿದೆ ಎಂದಬುನ್ನು ನೋಡೋಣ.

volkswagen-tayron-r-line-launched-in-india-at-rs-46-99-lakh

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ವಿಶೇಷತೆಗಳು

ಡಿಸೈನ್ ವಿಷಯಕ್ಕೆ ಬಂದರೆ HD ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳೊಂದಿಗೆ IQ ಲೈಟ್, ಬಂಪರ್ ಮತ್ತು ಮುಂಭಾಗದ ಬಾಗಿಲಿನ ಮೇಲೆ R-ಲೈನ್ ಅಂಶಗಳು, 19-ಇಂಚಿನ ಕವೆಂಟ್ರಿ ಅಲಾಯ್ ವೀಲ್‌ಗಳು, ಪ್ರಕಾಶಿತ ಮುಂಭಾಗ ಮತ್ತು ಹಿಂಭಾಗದ ಲೋಗೋ, ಮೊದಲ ನೋಟದಲ್ಲಿ SUV- ನೋಟ ಮತ್ತು ಪ್ರೀಮಿಯಂ ಜರ್ಮನ್ ವಾಹನದ ಪ್ರೀಮಿಯಂ ಸ್ಪೋರ್ಟಿ ಲುಕ್ ನೀಡುತ್ತದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ವಿಸ್ತಾರವಾದ ಕ್ಯಾಬಿನ್, ಪನೋರಮಿಕ್ ಸನ್‌ರೂಫ್, ದೊಡ್ಡ 38.1 CM ಇನ್ಫೋಟೈನ್ಮೆಂಟ್ ಸ್ಕ್ರೀನ್, 26.03 CM ಡಿಜಿಟಲ್ ಡ್ರೈವರ್ ಡಿಸ್ಪ್ಲೆ, ಮುಂಭಾಗದಲ್ಲಿ ಮೆಮೊರಿಯೊಂದಿಗೆ 12-ವೇ ಎಲೆಕ್ಟ್ರಿಕ್, ವೇಂಟಿಲೇಟೆಡ್, 8-ಮೋಡ್ ಮಸಾಜ್ ಫಂಕ್ಷನ್ ಸೀಟ್‌ಗಳನ್ನು ಒದಿಸಲಾಗಿದೆ. ಹಿಂಭಾಗದ ಸೀಟುಗಳಲ್ಲಿ ಒರಗುವ ಮತ್ತು ರಿಕ್ಲೈನ್ ಫಂಕ್ಷನ್ ನೀಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಿತ R ಇನ್ಸರ್ಟ್‌ನೊಂದಿಗೆ 30 ಬಣ್ಣಗಳ ಆಂಬಿಯಂಟ್ ಲೈಟಿಂಗ್ ನೀಡಲಾಗಿದೆ.

volkswagen-tayron-r-line-launched-in-india-at-rs-46-99-lakh

ಸೇಫ್ಟಿ ವಿಷಯಕ್ಕೆ ಬಂದರೆ ಫೋಕ್ಸ್ ‌ವ್ಯಾಗನ್ ಟೇರಾನ್ ಆರ್ - ಲೈನ್‌ ಎಸ್‌ಯುವಿನಲ್ಲಿ ಒಂಬತ್ತು ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲೈಸೇಶನ್ ಕಂಟ್ರೋಲ್, ಹಿಲ್ ಅಸೆಂಟ್ ಮತ್ತು ಡಿಸೆಂಟ್ ಸೇರಿದಂತೆ ಇನ್ನೂ ಹಲವನ್ನು ಒಳಗೊಂಡಿದೆ. ಆರು ಮೋಡ್‌ಗಳೊಂದಿಗೆ ಚಾಲಕ ಪ್ರೊಫೈಲ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಫೋಕ್ಸ್‌ವ್ಯಾಗನ್ ತಿಳಿಸಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ, 3-ಝೋನ್ ಕ್ಲೈಮೇಟ್ ಕಂಟ್ರೋಲ್, ಪವರ್ಡ್ ಗೆಸ್ಚರ್-ಕಂಟ್ರೋಲ್ ಟೈಲ್‌ಗೇಟ್, 700 ವ್ಯಾಟ್‌ಗಳ ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನೊಂದಿಗೆ 11 ಸ್ಪೀಕರ್ ಔಟ್‌ಪುಟ್, ಎರಡು ಹೊಂದಾಣಿಕೆಯ ಮೊಬೈಲ್ ಫೋನ್‌ಗಳಿಗೆ ಡ್ಯುಯಲ್ ಹೈ-ಪವರ್ USB-C (45W) ಮತ್ತು ವೈರ್‌ಲೆಸ್ ಚಾರ್ಜಿಂಗ್, ವರ್ಧಿತ ರಿಯಾಲಿಟಿ (AR) ಹೆಡ್-ಅಪ್ ಡಿಸ್ಪ್ಲೇ ನೀಡಲಾಗಿದೆ.

volkswagen-tayron-r-line-launched-in-india-at-rs-46-99-lakh

ಎಂಜಿನ್ ವಿಷಯಕ್ಕೆ ಬಂದರೆ ಹೊಸ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ಹೆಸರಿಗೆ ತಕ್ಕಂತೆ 2.0-ಲೀಟರ್ TSI EA888 evo4 ಎಂಜಿನ್ ಹೊಂದಿದೆ. ಇದು 204 PS ಪವರ್ ಮತ್ತು 320 Nm ಟಾರ್ಕ್ ಹೊರಹಾಕುತ್ತದೆ, 7-ಸ್ಪೀಡ್ DSG, 4MOTION ಆಲ್-ವೀಲ್ ಡ್ರೈವ್ (AWD) ಹಾಗೂ ಆರು ಮೋಡ್‌ಗಳೊಂದಿಗೆ ಡ್ರೈವ್‌ ಪ್ರೊಫೈಲ್ ಆಯ್ಕೆ ಮಾಡಬಹುದಾಗಿದೆ.

ಬೆಲೆ ವಿಷಯಕ್ಕೆ ಬಂದರೆ ಇಷ್ಟು ಐಷಾರಾಮಿಯಾಗಿರುವ ಈ ಕಾರಿನ್ನು ರೂ. 46.99 ರೂ. (ಎಕ್ಸ್-ಶೋರೂಂ) ಬೆಲೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಈ ಪ್ರೀಮಿಯಂ 7-ಆಸನಗಳ ಎಸ್‌ಯುವಿ ಗ್ರಾಹಕರ ನಿರೀಕ್ಷೆಗಳನ್ನು ಮೀರಿ ಇರದಲಿದೆ" ಎಂದು ಫೋಕ್ಸ್‌ವ್ಯಾಗನ್ ಇಂಡಿಯಾ ಭರವಸೆ ನೀಡಿದ್ದಾರೆ. ಈ ಹೊಸ 7-ಸೀಟರ್ ಎಸ್‌ಯುವಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Thursday, February 19, 2026, 17:59 [IST]
English summary
Volkswagen tayron r line launched in india at rs 46 99 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+