Volkswagen: ಹೊಸ 7-ಸೀಟರ್ SUV ಬಿಡುಗಡೆಗೆ ಸಜ್ಜು: ಇಂದು ಬುಕಿಂಗ್ ಪ್ರಾರಂಭ... ಹೇಗಿದೆ ಕಾರು?

ಫೋಕ್ಸ್‌ವ್ಯಾಗನ್ (Volkswagen) ಶೀಘ್ರದಲ್ಲೇ ಭಾರತದಲ್ಲಿ ಪ್ರೀಮಿಯಂ 7-ಸೀಟರ್ SUV ವಿಭಾಗವನ್ನು ಪ್ರವೇಶಿಸಲಿದ್ದು, ಭಾರತದಲ್ಲಿ ವಿಶಾಲವಾದ, ಬಹುಮುಖ ಮತ್ತು ಸಂಪೂರ್ಣವಾಗಿ ಲೋಡ್ ಮಾಡಲಾದ ಎಸ್‌ಯುವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಹೊಸ 7-ಸೀಟರ್ SUV ಆಗಿರುವ ಟೇರಾನ್ ಆರ್-ಲೈನ್‌ (Tayron R-Line) ಅನ್ನು ಇದೇ ತಿಂಗಳು ಬಿಡುಗಡೆ ಮಾಡಲಿದೆ. ಈ ಹೊಸ ಎಸ್‌ಯುವಿಗಾಗಿ ಇಂದು ಪ್ರೀ-ಬುಕಿಂಗ್ ಪ್ರಾರಂಭಿಸಿದ್ದು, ಗ್ರಾಹಕರು ದೇಶಾದ್ಯಂತ ಅಧಿಕೃತ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಮತ್ತು ಬ್ರ್ಯಾಂಡ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ.51,000 ಪಾವತಿಸಿ ಟೇರಾನ್ ಆರ್-ಲೈನ್ ಅನ್ನು ಬುಕ್ ಮಾಡಬಹುದು.

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ವಿಶೇಷತೆಗಳು

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ಎಸ್‌ಯುವಿಯು HD ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರುವ IQ ಲೈಟ್‌ಗಳು, ಬಂಪರ್ ಮತ್ತು ಫ್ರಂಟ್ ಡೋರ್ ಮೇಲೆ R-ಲೈನ್ ಅಂಶಗಳು, 19-ಇಂಚಿನ ಕವೆಂಟ್ರಿ ಅಲಾಯ್ ವೀಲ್‌ಗಳು, ಪ್ರಕಾಶಿತ ಮುಂಭಾಗ ಮತ್ತು ಹಿಂಭಾಗದ ಲೋಗೋದೊಂದಿಗೆ ಮೊದಲ ನೋಟದಲ್ಲಿಯೇ SUV ಲುಕ್ ಮತ್ತು ಪ್ರೀಮಿಯಂ ಜರ್ಮನ್ ವಾಹನದ ಡಿಸೈನ್‌ನೊಂದಿಗೆ ಬರುತ್ತದೆ.

volkswagen-tayron-r-line-pre-bookings-commenced-in-india

ಇಂಟೀರಿಯರ್ ವಿಷಯಕ್ಕೆ ಬಂದರೆ ವಿಸ್ತಾರವಾದ ಕ್ಯಾಬಿನ್, ಪನೋರಮಿಕ್ ಸನ್‌ರೂಫ್ ಮತ್ತು ಪ್ರೀಮಿಯಂ ಫ್ರಂಟ್ ಸೀಟ್‌ಗಳು, ದೊಡ್ಡ 15-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 10.25 - ಇಂಚಿನ ಡಿಜಿಟಲ್ ಕಾಕ್‌ಪಿಟ್, AR HUD, ಮೆಮೊರಿ, ವೆಂಟಿಲೇಷನ್, ಮಸಾಜ್ ಮತ್ತು ಸೊಂಟದ ಬೆಂಬಲದೊಂದಿಗೆ 12-ವೇ ಫ್ರಂಟ್ ಎಲೆಕ್ಟ್ರಿಕ್ ಸೀಟುಗಳು, ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಿತ R ಇನ್ಸರ್ಟ್‌ನೊಂದಿಗೆ 30 ಬಣ್ಣಗಳ ಆಂಬಿಯಂಟ್ ಲೈಟಿಂಗ್ ನೀಡಲಾಗಿದೆ.

ಇವಿಷ್ಟೇ ಅಲ್ಲದೆ 3 - ಝೋನ್ ಕ್ಲೈಮ್ಯಾಟ್ರಾನಿಕ್ ಕಂಟ್ರೋಲ್ AC, ಗೆಸ್ಚರ್ - ಕಂಟ್ರೋಲ್ ಟೈಲ್‌ಗೇಟ್, 700 ವ್ಯಾಟ್‌ಗಳ ಔಟ್‌ಪುಟ್‌ನೊಂದಿಗೆ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಡ್ಯುಯಲ್ ಹೈ-ಪವರ್ USB - C (45W) ಮತ್ತು ವೈರ್‌ಲೆಸ್ ಚಾರ್ಜಿಂಗ್ ಒದಗಿಸಲಾಗಿದೆ. ಇವು ಪ್ರಯಾಣಿಕರಿಗೆ ಲಾಂಗ್‌ಡ್ರೈವ್‌ನಲ್ಲಿ ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಿಸುತ್ತವೆ.

volkswagen-tayron-r-line-pre-bookings-commenced-in-india

ಸೇಫ್ಟಿ ವಿಷಯಕ್ಕೆ ಬಂದರೆ ಫೋಕ್ಸ್ ‌ವ್ಯಾಗನ್ ಟೇರಾನ್ ಆರ್ - ಲೈನ್‌ ಎಸ್‌ಯುವಿನಲ್ಲಿ ಒಂಬತ್ತು ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲೈಸೇಶನ್ ಕಂಟ್ರೋಲ್, ಹಿಲ್ ಅಸೆಂಟ್ ಮತ್ತು ಡಿಸೆಂಟ್ ಸೇರಿದಂತೆ ಇನ್ನೂ ಹಲವನ್ನು ಒಳಗೊಂಡಿದೆ. ಆರು ಮೋಡ್‌ಗಳೊಂದಿಗೆ ಚಾಲಕ ಪ್ರೊಫೈಲ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಫೋಕ್ಸ್‌ವ್ಯಾಗನ್ ತಿಳಿಸಿದೆ.

ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್‌ ಎಸ್‌ಯುವಿಯು 2.0 - ಲೀಟರ್ TSI EA888 evo4 ಎಂಜಿನ್ ಹೊಂದಿದ್ದು, ಇದು 204 PS ಪವರ್ ಮತ್ತು 320 Nm ಟಾರ್ಕ್ ಉತ್ಪಾದಿಸುತ್ತದೆ. 7 - ಸ್ಪೀಡ್ DSG ಮತ್ತು 4MOTION ಸ್ಪಿಡ್ ಮತ್ತು ಸ್ಟೆಬಿಲಿಟಿ ನೀಡುತ್ತದೆ. ಈ ಕಾರು ಕೇವಲ 7.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು. 224 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು.

volkswagen-tayron-r-line-pre-bookings-commenced-in-india

ಮುಂಬರಲಿರುವ ಹೊಸ ಟೇರಾನ್ ಆರ್-ಲೈನ್‌ ಎಸ್‌ಯುವಿಯು ಡಾಲ್ಫಿನ್ ಗ್ರೇ ಮೆಟಾಲಿಕ್, ಆಯ್ಸ್ಟರ್ ಸಿಲ್ವರ್ ಮೆಟಾಲಿಕ್, ಅಲ್ಟ್ರಾವೈಲೆಟ್ ಮೆಟಾಲಿಕ್, ಸಿಪ್ರೆಸ್ಸಿನೊ-ಗ್ರೀನ್ ಮೆಟಾಲಿಕ್, ನೈಟ್‌ಶೇಡ್ ಬ್ಲೂ ಮೆಟಾಲಿಕ್, ಗ್ರೆನಡಿಲ್ಲಾ ಬ್ಲ್ಯಾಕ್ ಮೆಟಾಲಿಕ್, ಓರಿಕ್ಸ್ ವೈಟ್ ಮದರ್- ಆಫ್ -ಪರ್ಲ್ ಎಫೆಕ್ಟ್ ಎಂಬ 7 ಬಣ್ಣ ಆಯ್ಕೆಗಳನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಇಂಡಿಯಾ ನಿರ್ದೇಶಕ ನಿತಿನ್ ಕೊಹ್ಲಿ ಮಾತನಾಡಿ, "ಭಾರತದ ಅತ್ಯಂತ ಪ್ರೀತಿಯ, ಮಹತ್ವಾಕಾಂಕ್ಷೆಯ ಜರ್ಮನ್ ಬ್ರಾಂಡ್ ಆಗಿರುವ ನಾವು, ನಮ್ಮ ಗ್ರಾಹಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಮೋಜಿನ ಐಷಾರಾಮಿ ಎಸ್‌ಯುವಿಯಾದ ಹೊಸ ಟೇರಾನ್ ಆರ್-ಲೈನ್‌ ಪರಿಚಯಿಸಲು ಸಜ್ಜಾಗಿದ್ದೇವೆ. ಈ ಪ್ರೀಮಿಯಂ 7-ಆಸನಗಳ ಎಸ್‌ಯುವಿ ಗ್ರಾಹಕರ ನಿರೀಕ್ಷೆಗಳನ್ನು ಮೀರಿ ಇರದಲಿದೆ" ಎಂದು ಭರವಸೆ ನೀಡಿದ್ದಾರೆ.

More from DriveSpark

Article Published On: Wednesday, February 4, 2026, 18:50 [IST]
English summary
Volkswagen tayron r line pre bookings commenced in india
Read more on volkswagen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+